ಮುಂಬೈನಲ್ಲಿ ಪಾಕಿಸ್ತಾನ ISI ಗೂಡಚರ್ಯನ ಬಂಧನ; ತಪ್ಪಿತು ಭಾರಿ ಅನಾಹುತ!

By Suvarna NewsFirst Published May 30, 2020, 9:33 PM IST
Highlights

ತನ್ನ ದೇಶದ ಜನರಿಗೆ ಹಿಟ್ಟಿಲ್ಲದಿದ್ದರೂ ಭಾರತದ ಸೇನಾ ಕಾರ್ಯಚರಣೆ, ಚಲನವಲಗಳನ್ನು ತಿಳಿಯಲು ಪಾಕಿಸ್ತಾನ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಭಾರತೀಯ ಸೇನೆಯ ಮಾಹಿತಿ ಕಲೆಹಾಕಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ISIನ ಗೂಢಚರ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಮುಂಬೈ(ಮೇ.30): ಜಮ್ಮ ಮತ್ತು ಕಾಶ್ಮೀರ ಮಿಲಟರಿ ಇಂಟಿಲಿಜೆನ್ಸ್ ಹಾಗೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಯಶಸ್ವಿ ಕಾರ್ಯಚರಣೆಯಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದೆ. ಪಾಕಿಸ್ತಾನ ಅತೀ ದೊಡ್ಡ ಗೂಢಚರ್ಯ ಇದೀಗ ಬಯಲಾಗಿದೆ. ಭಾರತೀಯ ಸೇನಾ ಮಾಹಿತಿಯನ್ನ ರಹಸ್ಯವಾಗಿ ಕದಿಯುತ್ತಿದ್ದ ಅತೀ ದೊಡ್ಡ  ಪಾಕಿಸ್ತಾನ ISI ಗೂಡಚರ್ಯರ ಜಾಲವನ್ನು ಪತ್ತೆಹಚ್ಚಲಾಗಿದೆ.

20 ಕೆ. ಜಿಗೂ ಅಧಿಕ ಸ್ಫೋಟಕ: ಉಗ್ರರ ಭೀಕರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ!.

ಭಾರತೀಯ ಸೇನೆ ಲಡಾಕ್‌ನಲ್ಲಿನ ಕಾರ್ಯಚರಣೆ, ಚಲನವಲಗಳ ಮಾಹಿತಿ ಕಲೆ ಹಾಕಿ ಕಾನೂನು ಬಾಹಿರ ಇಂಟರ್ನೆಟ್ ಪ್ರೊಟೋಕಾಲ್ ವಾಯ್ಸ್ ಓವರ್ ಮೂಲಕ ಪಾಕಿಸ್ತಾನದ  ISIಗೆ ರವಾನಿಸಲಾಗುತ್ತಿತ್ತು. ಮುಂಬೈನಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಪಾಕ್ ಬೆಂಬಲಿತ ಗೂಢಚರ್ಯರ ತಂಡವನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಷ್ಟೇ ಅಲ್ಲ ಓರ್ವನನ್ನು ಬಂಧಿಸಲಾಗಿದೆ. 

ಶ್ರೀನಗರ ಎನ್‌ಕೌಂಟರ್; ಇಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಉಗ್ರರ ಹತ್ಯೆ!

ಬಂಧಿತರಿಂದ ಸಿಮ್ ಬಾಕ್ಸಸ್, ಸ್ಟಾಂಡ್ ಬೈ ಸಿಮ್ ಬಾಕ್ಸ್, 191 ಸಿಮ್ ಕಾರ್ಡ್, ಲ್ಯಾಪ್‌ಟಾಪ್ ಮಾಡೆಮ್, ಆ್ಯಂಟೆನಾ, ಬ್ಯಾಟರಿ ಹಾಗೂ ಕನೆಕ್ಟರ್ ವಶಪಡಿಸಿಕೊಳ್ಳಲಾಗಿದೆ. ಇಂಟರ್ನೆಟ್ ಪ್ರೋಟೋಕಾಲ್ ಮಲ್ಟಿಮೀಡಿಯಾ ವಾಯ್ಸ್ ಓವರ್ ಮೂಲಕ ಇವರು ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು.

ಮೇ ತಿಂಗಳ ಆರಂಭದಲ್ಲೇ ಈ ರೀತಿಯ  ಜಾಲವೊಂದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಸುಳಿವು ಸೇನೆಗೆ ಲಭ್ಯವಾಗಿತ್ತು. ಸೇನಾ ಅಧಿಕಾರಿಯೊಬ್ಬರಿಗೆ  ಅಪರಿಚಿತ ಇಂಟರ್ನೆಟ್ ನಂಬರ್ ಕರೆಯೊಂದು ಬಂದಿತ್ತು. ಸೇನಾಧಿಕಾರಿ ನೀಡಿದ ಮಾಹಿತಿ ಆಧರಿಸಿ ತನಿಖೆ ಆರಂಭಗೊಂಡಿತ್ತು. ಈ ವೇಳೆ ಪಾಕಿಸ್ತಾನದಿಂದ ಮುಂಬೈನ ಸ್ಥಳೀಯ ನಂಬರ್‌ಗೆ ಕರೆಗಳು ಬಂದಿರುವುದು ಪತ್ತೆಯಾಗಿದೆ.

ಮುಂಬೈನಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಕಾರ್ಯಚರಣೆಗೆ ಇಳಿದಿದೆ. ಒಂದು ತಿಂಗಳಿನಿಂದ ತನಿಖೆ ನಡೆಸುತ್ತಿದ್ದ ಭಾರತೀಯ ಸೇನೆ ಹಾಗೂ ಮುಂಬೈ ಪೊಲೀಸರು ಗೂಢಚರ್ಯರನ್ನು ಪತ್ತೆ ಹಚ್ಚಿದೆ. ಮೇ. 28ರಂದು ಏಕಾಏಕಿ ದಾಳಿ ಮಾಡಿ ಪಾಕಿಸ್ತಾನದ ಗೂಢಚರ್ಯನನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಮತ್ತಷ್ಟು ಗೂಢಚರ್ಯರು ಮುಂಬೈ ಸೇರಿದಂತೆ ಇತರೆಡೆ ಇರುವುದು ಸ್ಪಷ್ಟವಾಗಿದೆ.

click me!