China-India Border Dispute: ಚೀನಾಗೆ ಮತ್ತೊಮ್ಮೆ ಖಡಕ್‌ ಎಚ್ಚರಿಕೆ ನೀಡಿದ ಜ.ನರವಣೆ

By Kannadaprabha NewsFirst Published Jan 16, 2022, 5:51 AM IST
Highlights

*  ಸೇನೆಯ ಆಧುನೀಕರಣದತ್ತ ದಿಟ್ಟ ಹೆಜ್ಜೆ
* ಕಾಶ್ಮೀರದ ಒಳಭಾಗದಲ್ಲಿ ಸ್ಥಿತಿ ಸುಧಾರಣೆ
* ಪಾಕ್‌ನಿಂದ ಉಗ್ರರ ಪೋಷಣೆ 

ನವದೆಹಲಿ(ಜ.16): ಇತ್ತೀಚೆಗೆ ‘ಚೀನಾ-ಭಾರತ(China-India) ಸಂಘರ್ಷ ನಡೆದರೆ ಜಯ ನಮ್ಮದೇ’ ಎಂದಿದ್ದ ಸೇನಾ ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ(Gen M.M. Naravane), ‘ಭಾರತದ ಗಡಿಯಲ್ಲಿ ಯಥಾಸ್ಥಿತಿ ಬದಲಾವಣೆಗೆ ಯಾವುದೇ ಕಾರಣಕ್ಕೂ ಸೇನೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ಪಡೇ ಪದೇ ಗಡಿ ತಂಟೆ ತೆಗೆಯುವ ಚೀನಾಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.

‘ಸೇನಾ ದಿನ’ದ(Army Day) ನಿಮಿತ್ತ ಶನಿವಾರ ಮಾತನಾಡಿದ ಅವರು ಇತ್ತೀಚಿನ ಲಡಾಖ್‌(Ladakh) ಗಡಿ ಬಿಕ್ಕಟ್ಟನ್ನು ಉಲ್ಲೇಖಿಸಿ ‘ಕಳೆದ ವರ್ಷ ಸೇನೆಯ ಪಾಲಿಗೆ ತುಂಬಾ ಸವಾಲಿನದ್ದಾಗಿತ್ತು. ತ್ವೇಷಮಯ ಪರಿಸ್ಥಿತಿ ತಣಿಸಲು ಹಾಗೂ ಪ್ರಸಕ್ತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಚೀನಾ ಜತೆ ಮಾತುಕತೆಗಳು ನಡೆಯುತ್ತಿವೆ’ ಎಂದರು.

China Threat: ಇದಕ್ಕೇನು ಕಮ್ಮಿ ಇಲ್ಲ....  ಭಾರತಕ್ಕೆ ಚೀನಾ ಕೌಂಟರ್!

‘ಗಡಿಯಲ್ಲಿ(Border) ನಿಯೋಜಿತವಾಗಿರುವ ನಮ್ಮ ಸೈನಿಕರ ನೈತಿಕ ಸ್ಥೈರ್ಯ ಅತ್ಯಂತ ಹೆಚ್ಚಿದೆ. ನಮ್ಮ ತಾಳ್ಮೆಯು ನಮ್ಮ ಆತ್ಮವಿಶ್ವಾಸದ ಸಂಕೇತ. ಆದರೆ ನಮ್ಮ ತಾಳ್ಮೆಯ ಪರೀಕ್ಷೆ ನಡೆಸುವ ತಪ್ಪನ್ನು ಯಾರೂ ಮಾಡಕೂಡದು’ ಎಂದು ಗುಡುಗಿದರು.‘ನಮ್ಮ ಸಂದೇಶ ಸ್ಪಷ್ಟವಾಗಿದೆ. ನಮ್ಮ ಸೇನೆಯು ಏಕಪಕ್ಷೀಯವಾಗಿ ಗಡಿಯಲ್ಲಿನ ಪರಿಸ್ಥಿತಿಯನ್ನು ಬದಲಾಯಿಸಲು ಬಿಡುವುದಿಲ್ಲ’ ಎಂದೂ ಜ. ನರವಣೆ ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ನೀಡಿದರು.

ಪಾಕ್‌ನಿಂದ ಉಗ್ರರ ಪೋಷಣೆ:

ಈ ನಡುವೆ, ಪಾಕಿಸ್ತಾನ ಗಡಿ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಜ. ನರವಣೆ, ‘ಪಾಕ್‌ ಗಡಿಯಲ್ಲಿ ಕಳೆದ ವರ್ಷಕ್ಕಿಂತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಈಗಲೂ ಪಾಕಿಸ್ತಾನ(Pakistan) ಉಗ್ರರನ್ನು ಪೋಷಿಸುತ್ತಲೇ ಇದೆ. ಡ್ರೋನ್‌ಗಳ ಮೂಲಕ ಶಸ್ತಾ್ರಸ್ತ್ರ ಕಳ್ಳಸಾಗಣೆ ಮಾಡುತ್ತಿದೆ. ಗಡಿಯಾಚಿನಿಂದ 300-400 ಉಗ್ರರು(Terrorist) ನುಸುಳಲು ಕಾಯುತ್ತಿದ್ದಾರೆ’ ಎಂದರು.

‘ಆದರೆ ಕಾಶ್ಮೀರದ(Kashmir) ಒಳಭಾಗದಲ್ಲಿ ಸ್ಥಿತಿ ಸುಧಾರಿಸುತ್ತಿದೆ. ಕಳೆದ 1 ವರ್ಷದಲ್ಲಿ 194 ಉಗ್ರರನ್ನು ಸಾಯಿಸಿದ್ದೇವೆ. ಹೀಗಾಗಿಯೇ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು ಹಾಗೂ ಕಾಶ್ಮೀರೇತರರ ಮೇಲೆ ದಾಳಿ ಮಾಡುವುದು ನಡೆದಿದೆ’ ಎಂದ ನರವಣೆ, ‘ಈಶಾನ್ಯದ ಸ್ಥಿತಿ ಕೂಡ ನಿಯಂತ್ರಣದಲ್ಲಿದೆ’ ಎಂದರು.

ಸೇನೆಯ ಆಧುನೀಕರಣದತ್ತ ದಿಟ್ಟ ಹೆಜ್ಜೆ:

‘ಭವಿಷ್ಯದ ಸವಾಲು ಮೆಟ್ಟಿನಿಲ್ಲಲು ಸೇನೆಯ ಆಧುನೀಕರಣ ಪ್ರಕ್ರಿಯೆ ಚುರುಕಾಗಿದೆ. ಕೃತಕ ಬುದ್ಧಿಮತ್ತೆ, ಮಾನವರಹಿತ ವ್ಯವಸ್ಥೆ, ಡ್ರೋನ್‌ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ. ಮೂರೂ ಪಡೆಗಳ ಜಂಟಿ ಕಮಾಂಡ್‌ ರಚನೆ ಪ್ರಕ್ರಿಯೆಯೂ ಕಾಲಮಿತಿಯಲ್ಲಿ ನಡೆದಿದೆ. ಭವಿಷ್ಯದಲ್ಲಿ ಭಾರೀ ಬದಲಾವಣೆ ಕಾಣುತ್ತೀರಿ’ ಎಂದು ಹೇಳಿದರು.

ಜ| ನರವಣೆ ಹೊಸ ಸಶಸ್ತ್ರ ಪಡೆ ಮುಖ್ಯಸ್ಥ?, ಮೋದಿ ಸಭೆಯಲ್ಲಿ Bipin Rawat ಉತ್ತರಾಧಿಕಾರಿ ಬಗ್ಗೆ ಮಾತು!

ಯುದ್ಧಕ್ಕೆ ಬಂದ್ರೆ ಜಯ ನಮ್ಮದೆ, ಚೀನಾಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ

ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಚೀನಾದಿಂದ (China) ಅಪಾಯ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ (Indian Army)ಸೇನಾ ಮುಖ್ಯಸ್ಥ. ಎಂ.ಎಂ.ನರವಣೆ, ಬಿಕ್ಕಟ್ಟು ಇತ್ಯರ್ಥಕ್ಕೆ ಚೀನಾದೊಂದಿಗೆ ನಾವು  ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಯುದ್ಧ (War) ಎಂಬುದು ನಮ್ಮ ಪಾಲಿನ ಕಟ್ಟಕಡೆಯ ಅಸ್ತ್ರ. ಒಂದು ವೇಳೆ ಅದೇನಾದರೂ ಅನಿವಾರ್ಯವಾದರೆ ನಾವು ಜಯಶಾಲಿಯಾಗಿ ಹೊರಹೊಮ್ಮಲಿದ್ದೇವೆ ಎಂದು ವಿಶ್ವಾಸ  ವ್ಯಕ್ತಪಡಿಸಿದ್ದಾರೆ. ಈ ಮೂಲಕ ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ಸೂಕ್ತ ಸಂದೇಶ ರವಾನಿಸುವ ಯತ್ನಮಾಡಿದ್ದಾರೆ.

ಜ.15ರ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿತವಾಗಿದ್ದ ಕಾರ್ಯಕ್ರಮ ಮತ್ತು ಬಳಿಕ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿರುವ ಜನರಲ್‌ ನರವಣೆ ‘ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಯಾವುದೇ ರೀತಿಯಲ್ಲೂ ಅಪಾಯ ಕಡಿಮೆಯಾಗಿಲ್ಲ. ಹೀಗಾಗಿಯೇ ಭಾರತೀಯ ಸೇನೆ ಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ. ಚೀನಾ ಸೇನೆಯನ್ನು ಎದುರಿಸಲು ನಾವು ಕಠಿಣ ಮನೋಸಂಕಲ್ಪ ಮತ್ತು ದೃಢ ನಿಶ್ಚಯದಲ್ಲಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಲಡಾಖ್‌ ಮಾತ್ರವಲ್ಲದೆ ದೇಶದ ಉತ್ತರ ಗಡಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಳ್ಳಲಾಗಿದ್ದು, ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

click me!