2 ಮಹತ್ವದ ರಕ್ಷಣಾ ಒಪ್ಪಂದ ಈ ವರ್ಷ ಸಾಕಾರ: 83 ತೇಜಸ್‌ ಯುದ್ಧವಿಮಾನ ಎಚ್‌ಎಎಲ್‌ನಿಂದ ಖರೀದಿ!

Published : Jan 07, 2021, 09:50 AM IST
2 ಮಹತ್ವದ ರಕ್ಷಣಾ ಒಪ್ಪಂದ ಈ ವರ್ಷ ಸಾಕಾರ: 83 ತೇಜಸ್‌ ಯುದ್ಧವಿಮಾನ ಎಚ್‌ಎಎಲ್‌ನಿಂದ ಖರೀದಿ!

ಸಾರಾಂಶ

2 ಮಹತ್ವದ ರಕ್ಷಣಾ ಒಪ್ಪಂದ ಈ ವರ್ಷ ಸಾಕಾರ| 50 ಸಾವಿರ ಕೋಟಿ ಮೊತ್ತದ ಒಪ್ಪಂದಗಳು| 83 ತೇಜಸ್‌ ಯುದ್ಧವಿಮಾನ ಎಚ್‌ಎಎಲ್‌ನಿಂದ ಖರೀದಿ| 56 ಸರಕು ವಿಮಾನಗಳು ಟಾಟಾ-ಏರ್‌ಬಸ್‌ನಿಂದ ಖರೀದಿ

ನವದೆಹಲಿ(ಜ.07): ಭಾರತವು ಬಹುದಿನಗಳಿಂದ ಎದುರು ನೋಡುತ್ತಿರುವ 50 ಸಾವಿರ ಕೋಟಿ ರು. ಮೌಲ್ಯದ 2 ರಕ್ಷಣಾ ಒಪ್ಪಂದಗಳು ಈ ಹೊಸ ವರ್ಷದಲ್ಲಿ ಕೈಗೂಡುವ ನಿರೀಕ್ಷೆಯಿದೆ. 83 ದೇಶೀ ನಿರ್ಮಿತ ತೇಜಸ್‌ ಯುದ್ಧವಿಮಾನಗಳು ಹಾಗೂ 56 ಸರಕು ಸಾಗಣೆ ವಿಮಾನಗಳ ಖರೀದಿಯ ಒಪ್ಪಂದ ಇದಾಗಲಿದೆ.

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನಿಂದ 83 ತೇಜಸ್‌ ಮಾರ್ಕ್-1ಎ ಯುದ್ಧವಿಮಾನಗಳನ್ನು 37 ಸಾವಿರ ಕೋಟಿ ರು.ಗೆ ಖರೀದಿಸಲಾಗುತ್ತದೆ. ಇದು ಈವರೆಗಿನ ಅತಿ ದೊಡ್ಡ ದೇಶೀ ರಕ್ಷಣಾ ಒಪ್ಪಂದ ಎನ್ನಿಸಿಕೊಳ್ಳಲಿದೆ. ಗುತ್ತಿಗೆಗೆ ಸಹಿ ಹಾಕಿದ 3 ವರ್ಷದ ನಂತರ ಇವುಗಳು ರಕ್ಷಣಾ ಪಡೆಗಳಿಗೆ ಹಸ್ತಾಂತರಗೊಳ್ಳಲಿವೆ. ಈಗ ವಾಯುಪಡೆ ಗುತ್ತಿಗೆ ನೀಡಿರುವ 40 ತೇಜಸ್‌ ಮಾರ್ಕ್-1 ಯುದ್ಧ ವಿಮಾನಗಳಿಗಿಂತ ಹೆಚ್ಚುವರಿ 40 ಸುಧಾರಿತ ಅಂಶಗಳನ್ನು ಇವು ಹೊಂದಲಿವೆ.

ಇನ್ನು ಟಾಟಾ-ಏರ್‌ಬಸ್‌ ಜಂಟಿಯಾಗಿ 56 ಸರಕುಸಾಗಣೆ ‘ಸಿ-295’ ವಿಮಾನಗಳನ್ನು 11,929 ಕೋಟಿ ರು.ಗೆ ಖರೀದಿಸಲು ಉದ್ದೇಶಿಸಲಾಗಿದೆ. ಇವು ಈಗಾಗಲೇ ಇರುವ ‘ಆವ್ರೋ-748’ ಯುದ್ಧವಿಮಾನಗಳ ಸ್ಥಾನವನ್ನು ಅಲಂಕರಿಸಲಿವೆ. ಈ ಊಲಕ ಭಾರತದಲ್ಲಿ ಮೊತ್ತಮೊದಲ ಬಾರಿಗೆ ವಾಯುಯಡೆ ಜತೆ ಖಾಸಗಿ ಕಂಪನಿಯೊಂದು ಒಪ್ಪಂದ ಮಾಡಿಕೊಂಡಂತಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ