
ನವದೆಹಲಿ(ಜೂ.05) ಪಾಕಿಸ್ತಾನದ ಜೆ 10ಸಿ, ಚೀನಾದ ಜೆ20 ಡ್ರೋನ್‌ಗೆ ಪ್ರತಿಯಾಗಿ ಭಾರತ ಇದೀಗ 5ನೇ ಜನರೇಶನ್ ಅಡ್ವಾನ್ಸ್ ಡ್ರೋನ್ ಅಭಿವೃದ್ಧಿಪಡಿಸುತ್ತಿದೆ. ವಿಶೇಷ ಅಂದರೆ ಈ ಡ್ರೋನ್ ಸೂಪರ್ ಸಾನಿಕ್ ವೇಗದಲ್ಲಿ ಸಾಗಲಿದೆ. 360 ಡಿಗ್ರಿ ಹದ್ದಿನ ಕಣ್ಣಿಟ್ಟು ಆಪರೇಶನ್ ನಡೆಸಲಿದೆ. ಪರಿಸ್ಥಿತಿಗೆ ತಕ್ಕಂತೆ ನಾಜೂಕಾಗಿ ಈ ಡ್ರೋನ್ ಟಾರ್ಗಟ್ ಮೇಲೆ ದಾಳಿ ಮಾಡಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಶಸ್ತ್ರಾಸ್ತ್ರವನ್ನು ಈ ಡ್ರೋನ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಈ ಡ್ರೋನ್ ಒಮ್ಮೆ ಟಾರ್ಗೆಟ್ ಫಿಕ್ಸ್ ಮಾಡಿ ಹಾರಿಸಿದರೆ ಬಳಿಕ ಗುರಿ ಬೆನ್ನಟ್ಟದೇ ಬಿಡುವುದಿಲ್ಲ. ಈ ಡ್ರೋನ್ ಪಾಕಿಸ್ತಾನ, ಚೀನಾದ ಆತಂಕ ಹೆಚ್ಚಿಸಿದೆ.
ಅಡ್ವಾನ್ಸ್ ಮೀಡಿಯಂ ಕಾಂಬಾಕ್ಟ್ ಏರ್‌ಕ್ರಾಫ್ಟ್
ಅಡ್ವಾನ್ಸ್ ಮೀಡಿಯಂ ಕಾಂಬಾಕ್ಟ್ ಏರ್‌ಕ್ರಾಫ್ಟ್ (AMCA) ಅಭಿವೃದ್ಧಿಯನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ. ಐದನೇ ಜನರೇಶನ್ ಡ್ರೋನ್ ಅಭಿವೃದ್ಧಿಪಡಿಸಲು ಟಾಟಾ ಅಡ್ವಾನ್ಸ್ ಸಿಸ್ಟಮ್, ಎಲ್ ಆ್ಯಂಡ್ ಟಿ , ಅದಾನಿ ಡಿಫೆನ್ಸ್, ಮಹೀಂದ್ರ ಏರೋಸ್ಪೇಸ್ ಸಂಸ್ಥೆಗಳನ್ನು ಡ್ರೋನ್ ಅಭಿವೃದ್ಧಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಹ್ವಾನಿಸಿದ್ದಾರೆ. ಪ್ರಮುಖವಾಗಿ ಭಾರತದಲ್ಲಿ ಡ್ರೋನ್, ಏರ್‌ಕ್ರಾಫ್ಟ್ ಅಭಿವೃದ್ಧಿಯನ್ನು ಬೆಂಗಳೂರುನ ಹೆಚ್ಆಎಲ್ ಮಾಡುತ್ತಿತ್ತು. ಆದರೆ ಪೂರೈಕೆ ವಿಳಂಬವಾಗುತ್ತಿರುವ ಕಾರಣ ಇದೀಗ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಮೂಲಕ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.
ಡಿಆರ್‌ಡಿಒ ತಂತ್ರಜ್ಞಾನ
ಅಡ್ವಾನ್ಸ್ ಮೀಡಿಯಂ ಕಾಂಬಾಕ್ಟ್ ಏರ್‌ಕ್ರಾಫ್ಟ್ (AMCA) ಅಭಿವೃದ್ಧಿಗೆ ಭಾರತದ ಹೆಮ್ಮೆಯ ಡಿಆರ್‌ಡಿಒ ಕೈಜೋಡಿಸುತ್ತಿದೆ. ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರದ ಮೂಲಕ ಹೊಸ ಡ್ರೋನ್ ಭಾರತದ ಶಸಸ್ತ್ರ ಪಡೆಗೆ ನೀಡಲು ಮುಂದಾಗಿದೆ. ಈ ಮೂಲಕ ಭಾರತೀಯ ಸೇನೆ ಗಡಿಯಲ್ಲಿ ಶತ್ರುಗಳ ದಾಳಿಯನ್ನು ಎದುರಿಸಲು ಹಾಗೂ ಶತ್ರಗಳ ಪ್ರದೇಶಕ್ಕೆ ನುಗ್ಗಿ ದಾಳಿ ಮಾಡಲು ಸಹಾಕಾರಿಯಾಗಲಿದೆ.
ಕಾವೇರಿ ಎಂಜಿನ್ ಅಭಿವೃದ್ಧಿ
ಆಪರೇಶನ್ ಸಿಂದೂರ್ ಬಳಿಕ ಭಾರತ ಇಂಡಿಜಿನಿಯಸ್ ಜೆಟ್‌ನಲ್ಲಿ ಬಳಸುತ್ತಿರುವ ಕಾವೇರಿ ಎಂಜಿನ್ ಮರು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಿಂದ ಸದ್ಯ ಜೆಟ್ ಹಾಗೂ ಕೆಲ ಏರ್‌ಕ್ರಾಫ್ಟ್ ಗಳಲ್ಲಿ ಈ ಕಾವೇರಿ ಎಂಜಿನ್ ಬಳಸಲಾಗುತ್ತಿದೆ. ಈ ಎಂಜಿನ್ ಮರು ಅಭಿವೃದ್ಧಿ ಮಾಡಿ ಹೊಸ ತಂತ್ರಜ್ಞಾನದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ