ಪ್ರತಿ ಗಂಟೆಗೆ ದೇಶದಲ್ಲಿ 10,000 ಕೇಸ್‌, 60 ಬಲಿ!

By Suvarna NewsFirst Published Apr 21, 2021, 11:43 AM IST
Highlights

ಪ್ರತಿ ಗಂಟೆಗೆ ದೇಶದಲ್ಲಿ 10,000 ಕೇಸ್‌, 60 ಬಲಿ!| ಕಳೆದ ಮೂರು ದಿನದಿಂದ ಇದೇ ಟ್ರೆಂಡ್‌| 2ನೇ ಅಲೆಯಿಂದ ಭಾರತ ತೀವ್ರ ತತ್ತರ

ನವದೆಹಲಿ(ಏ.21): ಕೊರೋನಾ 2ನೇ ಅಲೆಯಿಂದ ಭಾರತ ತೀವ್ರವಾಗಿ ತತ್ತರಿಸಿದ್ದು, ಕಳೆದ ಭಾನುವಾರದಿಂದ ದೇಶದಲ್ಲಿ ಪ್ರತಿ ತಾಸಿಗೆ ಸರಾಸರಿ 10 ಸಾವಿರಕ್ಕೂ ಅಧಿಕ ಪ್ರಕರಣ ಹಾಗೂ 60ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ.

ಏ.1ರಂದು 72,330 ಪ್ರಕರಣ ಪತ್ತೆಯಾಗಿ, 459 ಸಾವುಗಳು ಸಂಭವಿಸಿದ್ದವು. ಅಂದು ಪ್ರತಿ ತಾಸಿಗೆ ಸರಾಸರಿ 3013 ಪ್ರಕರಣ ಹಾಗೂ 19 ಸಾವು ವರದಿಯಾಗಿದ್ದವು. ಆದರೆ, ಭಾನುವಾರ 2,61,500 ಪ್ರಕರಣ ಪತ್ತೆಯಾಗಿ, 1501 ಜನರು ಮೃತಪಟ್ಟಿದ್ದಾರೆ.

ಅದರ ಆಧಾರದಲ್ಲಿ ಗಂಟೆಗೆ 10895 ಸೋಂಕು, 62 ಸಾವು ಕಂಡುಬಂದಿದೆ. ಸೋಮವಾರ 2,73,810 ಸೋಂಕು, 1619 ಸಾವು ಉಂಟಾಗಿದ್ದವು. ಇದರಿಂದ ಪ್ರತಿ ತಾಸಿನ ಸರಾಸರಿ ಸೋಂಕು 11,408 ಹಾಗೂ ಸಾವು 67ಕ್ಕೆ ಹೆಚ್ಚಳವಾಯಿತು.

ಮಂಗಳವಾರ 2,59,170 ಪ್ರಕರಣ, 1761 ಸಾವು ವರದಿಯಾಗಿದ್ದರಿಂದ ಸರಾಸರಿ ಒಂದು ಗಂಟೆಯ ಸೋಂಕು 10798 ಹಾಗೂ ಸಾವು 73ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

click me!