ಹಿಂದೂ ಮಹಾಸಾಗರ ಸೇರಿದಂತೆ ಚೀನಾ ಜೊತೆಗೆ ಸಮುದ್ರ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ಅಭಿವೃದ್ಧಿ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾರಿಷಸ್ ಸುಪ್ರೀಂ ಕೋರ್ಟ್ ಉದ್ಘಾಟನೆ ವೇಳೆ ಮೋದಿ ಹೇಳಿದ ಮಹತ್ವದ ಸೂಚನೆಗಳ ವಿವರ ಇಲ್ಲಿದೆ.
ನವದೆಹಲಿ(ಜು.30): ಹಿಂದೂ ಮಹಾಸಾಗರ ಸೇರಿದಂತೆ ಭಾರತದ ದ್ವೀಪ ರಾಷ್ಟ್ರಗಳು ಹಾಗೂ ಸಮುದ್ರ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿದೆ. ಇಂಡಿಯನ್ ಒಶಿಯನ್ ರೀಜಿನ್‌ನ ಹೃದಯವಾಗಿರುವ ಮಾರಿಷಸ್‌ನಲ್ಲಿನ ಎಲ್ಲಾ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ. ಇದರ ಜೊತೆಗೆ ಭದ್ರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಫೇಲ್ ಬಂದ ವೇಳೆ ಕೇಂದ್ರಕ್ಕೆ ರಾಹುಲ್ ಪ್ರಶ್ನೆಗಳ ಸುರಿಮಳೆ
ಮಾರಿಷಸ್‌ನಲ್ಲಿನ ನೂತನ ಸುಪ್ರೀಂ ಕೋರ್ಟ್ ಉದ್ಘಾಟಿಸಿದ ಮೋದಿ, ಸ್ವಾತಂತ್ರ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದೆ ಭಾರತದ ಮೂಲ ಮಂತ್ರ. ಹಸ್ತಕ್ಷೇಪ, ಆತಿಕ್ರಣ, ಆಕ್ರಮಣ ಭಾರತ ಎಂದೂ ಮಾಡಿಲ್ಲ ಎಂದು ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದರು. ಮಾರಿಷಸ್ ಹಾಗೂ ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದೆ. ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದ ಪ್ರಮುಖ ಅಂಗ ಎಂದು ಮೋದಿ ಹೇಳಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಚೂಣಿಯಲ್ಲಿದೆ ಭಾರತ; ಪ್ರಧಾನಿ ಮೋದಿ!
ಅಭಿವೃದ್ಧಿ, ವ್ಯಾಪಾರ ಹೆಸರಲ್ಲಿ ಇತಿಹಾಸ ನಮಗೆ ಉತ್ತಮ ಪಾಠ ಕಲಿಸಿದೆ. ಇದೀಗ ಕೆಲ ದೇಶಗಳು ಅಭಿವೃದ್ಧಿ ಹೆಸರಲ್ಲಿ ಗಡಿಯಲ್ಲಿ ಅಪ್ರಚೋದಿತ ಚಟುವಟಿಕೆಗಳ ನಡೆಸುತ್ತಿದೆ. ಹೀಗಾಗಿ ಎಚ್ಚರಿಕೆಯಿಂದರಬೇಕು. ಇದಕ್ಕಾಗಿ ಹೆಚ್ಚಿನ ಭದ್ರತಾ ಪಡೆಗಳ ಅವಶ್ಯಕತೆ ಇದೆ. ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.