ಪಟನಾ: ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಪ್ರಿಯದರ್ಶಿನಿ ಉಡಾನ್ ಯೋಜನೆಯಡಿ ಮಹಿಳೆಯರಿಗೆ 5 ಲಕ್ಷ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಕಾಂಗ್ರೆಸ್ ಮುಂದಾಗಿದೆ. ಆದರೆ ಪ್ಯಾಡ್‌ನ ಮೇಲೆ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಫೋಟೋ ಮುದ್ರಿಸಲಾಗಿದೆ. ಜೊತೆಗೆ ಪಕ್ಷ ಗೆದ್ದರೆ 'ಮಾಯಿ ಬಹಿನ್ ಮಾನ್ ಯೋಜನೆ'ಯಡಿ ಮಹಿಳೆಯರಿಗೆ ಮಾಸಿಕ 2500 ರು. ನೀಡಲಾಗುವುದು ಎಂದು ಮುದ್ರಿಸಲಾಗಿದೆ. ಈ ವಿಚಾರ ಈಗ ವಿವಾದ ಸೃಷ್ಟಿಸಿದೆ.

11:24 PM (IST) Jul 06
ಬಾಗೇಶ್ವರ ಧಾಮದ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ 'ಭಗವಾ-ಎ-ಹಿಂದ್' ಹೇಳಿಕೆಗೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
04:48 PM (IST) Jul 06
ತಾನಾ ವೇದಿಕೆಯಲ್ಲಿ ಸಮಂತಾ ಮಾತನಾಡುತ್ತಾ ಕಣ್ಣೀರು ಹಾಕಿದರು. ಅಲ್ಲಿನ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದರು.
03:12 PM (IST) Jul 06
ದೈಹಿಕ ಸಂಬಂಧ ಬೆಳೆಸಿದರೆ ಐಫೋನ್ ಗಿಫ್ಟ್, ಇದು ಬ್ಯಾಂಕ್ ಮ್ಯಾನೇಜರ್ ಜ್ಯೂನಿಯರ್ ಮಹಿಳಾ ಉದ್ಯೋಗಿಗಳಿಗೆ ಕಳುಹಿಸುತ್ತಿರುವ ಮೇಸೇಜ್. ಇಷ್ಟೇ ಅಲ್ಲ ತನ್ನ ಛೇಂಬರ್‌ಗೆ ಕರೆಸಿ ಕಿರುಕುಳ ನೀಡುತ್ತಿರುವ ವಿಡಿಯೋವನ್ನು ಮಹಿಳಾ ಉದ್ಯೋಗಿ ಸೆರೆ ಹಿಡಿದಿದ್ದಾರೆ.
03:03 PM (IST) Jul 06
Hindu Temple Restoration Initiatives: ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಶಿವ್ ನಾಡಾರ್ ಅವರ 'ವಾಮಾ ಸುಂದರಿ ಫೌಂಡೇಶನ್' 206 ಕೋಟಿ ರೂ. ದೇಣಿಗೆ ನೀಡಿದೆ. ಈ ದೇಣಿಗೆ ದೇವಸ್ಥಾನದ ನಿರ್ವಹಣೆಗೆ ಸಹಾಯಕವಾಗಲಿದೆ.
02:55 PM (IST) Jul 06
World Bank Report: ಬಡತನ ನಿರ್ಮೂಲನೆ, ಹಣಕಾಸು ಸೇವೆಗಳಿಗೆ ಪ್ರವೇಶ ಮತ್ತು ನೇರ ನಗದು ವರ್ಗಾವಣೆಗಳು ಈ ಪ್ರಗತಿಗೆ ಕಾರಣವಾಗಿವೆ. ವಿಶ್ವ ಬ್ಯಾಂಕಿನ ವರದಿಯಲ್ಲಿ ಏನಿದೆ?
02:31 PM (IST) Jul 06
ಜುಲೈ 9 ರಂದು ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ 37 ಕೋಟಿ ಗಿಡಗಳನ್ನು ನೆಡಲಿದೆ. ಗೋಶಾಲೆಗಳಲ್ಲಿ 'ಗೋಪಾಲ ವನ' ನಿರ್ಮಿಸಲಾಗುವುದು, ಅಲ್ಲಿ ನೆರಳು ಮತ್ತು ಮೇವು ಪ್ರಭೇದಗಳ ಗಿಡಗಳನ್ನು ನೆಡಲಾಗುವುದು.
11:44 AM (IST) Jul 06
ವಿವಾಹೇತರ ಸಂಬಂಧಗಳಿಗಾಗಿ ಡೇಟಿಂಗ್ ಆಪ್ ಬಳಸುವ ಭಾರತೀಯರ ಸಂಖ್ಯೆ 3 ಮಿಲಿಯನ್ ದಾಟಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಬಳಕೆದಾರರಿದ್ದು, ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಬೆಳವಣಿಗೆ ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಗತಿಯ ಪ್ರತಿಬಿಂಬಿಸುತ್ತದೆ.