ಕೋಲ್ಕತಾ: ಗೋವಾ ಬೆನ್ನಲ್ಲೇ ಪ. ಬಂಗಾಳದ ಘಟಕದಲ್ಲಿ ತಯಾರಾದ ನೀರಿನ ಮಾದರಿಯಲ್ಲಿ ಬ್ಯಾಕ್ಟಿರಿಯಾ ಪತ್ತೆಯಾದ ಕಾರಣ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಸ್ಲಿರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ಆದರೆ ಈ ಪ್ರಯೋಗಾಲಯದ ವರದಿಗೆ ಬಿಲ್ಲೆರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಜಿಲ್ಲೆಯ ಬಂಗಾಳದ ಜಲಪೈಗುರಿ ತೆಲಿಪಾರದಲ್ಲಿರುವ ಬಿಲ್ಲೆರಿ ಉತ್ಪಾದನಾ ಘಟಕದ 'ಬ್ಯಾಚ್ PB201' ನೀರಿನ ಮಾದರಿಯಲ್ಲಿ 'ಕೋಲಿಫಾರ್ ಬ್ಯಾಕ್ಟಿರಿಯಾ' ಪತ್ತೆಯಾಗಿದೆ ಎಂದು ಸರ್ಕಾರಿ ಲ್ಯಾಬ್ ವರದಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸ್ಲರಿ, ಅದೇ ಬ್ಯಾಚ್ನ ಮಾದರಿಗಳನ್ನು 2 ಸ್ವತಂತ್ರ ಲ್ಯಾಬ್ಗಳಲ್ಲಿ ಪರೀಕ್ಷಿಸಿ ದಾಗ ಅವು ಸುರಕ್ಷಿತ ಎಂದು ಕಂಡುಬಂದಿವೆ. ಸರ್ಕಾರದ ಪರೀಕ್ಷಾ ಮಾದರಿ ಪ್ರಶ್ನಾರ್ಹವಾಗಿದೆ' ಎಂದಿದೆ.