ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡುವೆಯೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಟೀಕೆಗಳ ನಡುವೆಯೇ ಕಾಂಗ್ರೆಸ್ ಸಂಸದ ಶಶಿ ತರೂರ್ ಗರಂ ಆಗಿದ್ದು, 'ನಾನು ಅವರ ಟ್ರಾವೆಲ್ ಏಜೆಂಟ್ ಅಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಏಕೆ ವಿದೇಶಕ್ಕೆ ತೆರಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದ ತರೂರ್, 'ನಾನೇನು ಟ್ರಾವೆಲ್ ಏಜೆಂಟ್ ಅಲ್ಲ. ಆ ಪ್ರಶ್ನೆಯನ್ನು ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ಜವಾಬ್ದಾರಿ ಗಳಿರುತ್ತವೆ. ಹಾಗಾಗಿ, ಈ ವಿಷಯದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ' ಎಂದು ಹೇಳಿದರು.
07:59 AM (IST) Oct 22
07:34 AM (IST) Oct 22
Asian Para Games 2026: ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕೇವಲ 3 ದಿನಗಳಲ್ಲಿ 62 ಪದಕಗಳನ್ನು ಗೆದ್ದು ಬೀಗಿದೆ. ಇದರಲ್ಲಿ 42 ಪದಕಗಳು ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲೇ ಬಂದಿದ್ದು, ಕನ್ನಡಿಗರಾದ ನಿರಂಜನ್ ಮತ್ತು ಶರತ್ ಕೂಡ ಪದಕ ಗೆದ್ದಿದ್ದಾರೆ.
07:19 AM (IST) Oct 22
07:11 AM (IST) Oct 22
ಬಾಹ್ಯಾಕಾಶವು ಸಂಘರ್ಷದ ತಾಣವಾಗದೆ ಸಹಕಾರದ ಕ್ಷೇತ್ರವಾಗಿ ಉಳಿಯಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಪ್ರತಿಪಾದಿಸಿದ್ದಾರೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯಲು ಅಂತಾರಾಷ್ಟ್ರೀಯ ಒಪ್ಪಂದದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.