LIVE NOW
Published : Oct 18, 2026, 06:58 AM IST

India Latest News Live: 2018ರ ಪ್ರಕರಣದಲ್ಲಿ ಯುಟ್ಯೂಬರ್‌ ರಾಠಿಗೆ ದಿಲ್ಲಿ ಕೋರ್ಟ್‌ ಸಮನ್ಸ್‌

ಸಾರಾಂಶ

ನವದೆಹಲಿ: ಬಿಜೆಪಿ ಜಾಲತಾಣ ವಿಭಾಗದ ಸದಸ್ಯ ವಿಕಾಸ್‌ ಪಾಂಡೆ 2018ರಲ್ಲಿ ದಾಖಲಿಸಿದ್ದ ಪ್ರಕರಣ ಸಂಬಂಧ ಯುಟ್ಯೂಬರ್‌ ಧ್ರುವ್‌ ರಾಠಿ ವಿರುದ್ಧ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದೆ. ಯುಟ್ಯೂಬ್‌ನಲ್ಲಿ ಪ್‌ಲೋಡ್ ಮಾಡಲಾದ ವೀಡಿಯೊವೊಂದರ ಮೂಲಕ ತನ್ನ ವಿರುದ್ಧ ಮಾನನಷ್ಟ ಎಸಗಿದ್ದಾರೆ ಎಂದು ಆರೋಪಿಸಿ ವಿಕಾಸ್‌ ದೂರು ದಾಖಲಿಸಿದ್ದರು. ಜೊತೆಗೆ ಈ ಹಿಂದೆ ಹಲವು ಬಾರಿ ಅವರಿಗೆ ಸಮನ್ಸ್‌ ನೀಡುವ ಯತ್ನ ವಿಫಲವಾಗಿದೆ ಎಂದಿದ್ದರು. 

ಹೀಗಾಗಿ ಇದೀಗ ಕಾಕ್ರೋಚ್‌ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಠಿ ಭಾರತಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಹೊಸದಾಗಿ ನೋಟಿಸ್‌ ಜಾರಿ ಮಾಡಲಾಗಿದೆ.


More Trending News