ನವದೆಹಲಿ: ಮತಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇಂಡಿಯಾ ಕೂಟದ ಇತರ ನಾಯಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜಯಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ. ಇದರೊಂದಿಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ಅ.10ರಂದು ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಂಟಾದ ಬಂದ್, ಮೆಟ್ರೋ ಸ್ಥಗಿತ ಹಾಗೂ ರೈಲು ಸಂಚಾರ ವ್ಯತ್ಯಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಅರ್ಜಿಗಳನ್ನೂ ಇದೇ ಪೀಠ ವಿಚಾರಣೆ ನಡೆಸಲಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗೆ ದೆಹಲಿಯಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ರಾಹುಲ್ ಹಾಗೂ ಇತರ ನಾಯಕರು ಸುಪ್ರೀಂ ಮೆಟ್ಟೆಲೇರಿದ್ದರು.
07:20 AM (IST) Oct 15
ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ಹೆಸರಿನಲ್ಲಿದ್ದ ವೃದ್ಧಾಪ್ಯ, ವಿಧವಾ ಮತ್ತು ವಿಕಲಚೇತನರ ಪಿಂಚಣಿ ಯೋಜನೆಗಳನ್ನು 'ಪ್ರಧಾನಮಂತ್ರಿ' ಯೋಜನೆಗಳಾಗಿ ಮರುನಾಮಕರಣ ಮಾಡಿದೆ. ಇನ್ನು ವಿಕಲಚೇತನರ ಪಿಂಚಣಿ ಪಡೆಯುವ ನಿಯಮವನ್ನು ಸಡಿಲಿಸಿದ್ದು, ಶೇ.80ರ ಬದಲು ಶೇ.40ರಷ್ಟು ಅಂಗವೈಕಲ್ಯವಿದ್ದರೂ ಪಿಂಚಣಿಗೆ ಅರ್ಹರು.
07:03 AM (IST) Oct 15
ಒಡಿಶಾದ ಎನ್ಐಟಿ ಸಂಶೋಧಕರು ಹಲಸಿನ ಸಾರವನ್ನು ಬಳಸಿ ಕುಡಿಯುವ ನೀರಿನಿಂದ ಅಪಾಯಕಾರಿ ಫ್ಲೋರೈಡ್ ತೆಗೆದುಹಾಕುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನವು ಕೇವಲ 10 ನಿಮಿಷಗಳಲ್ಲಿ ಶೇ 90ರಷ್ಟು ಫ್ಲೋರೈಡ್ ಅನ್ನು ನಿವಾರಿಸುತ್ತದೆ. .