ನವದೆಹಲಿ: ‘ಪೊಲೀಸರು ನನ್ನನ್ನು ಬಂಧಿಸಲೂ ಇಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ಕಿಡ್ನಾಪ್ ಮಾಡಿದರು’ ಎಂದು ಯುಟ್ಯೂಬರ್ ಹಾಗೂ ಸಿಜೆಪಿ ಬೆಂಬಲಿಗ ಧ್ರುವ್ ರಾಠಿ ಭಾನುವಾರ ಆರೋಪಿಸಿದ್ದಾರೆ. ಅ.10ರಂದು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಹೊರಡಲು ಸಜ್ಜಾಗಿದ್ದ ಧ್ರುವ್‌ರನ್ನು ಗುರುಗ್ರಾಮದ ಅವರ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ತಮ್ಮ ಬಿಡುಗಡೆ ಬಳಿಕ ಮೊದಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಧ್ರುವ್, ‘ಅವರು ನನ್ನನ್ನು ಬಂಧಿಸಲಿಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ನಾನು ಮಲಗಿದ್ದಾಗ ನನ್ನ ಮನೆಗೆ ಬಂದು ಕಿಡ್ನಾಪ್ ಮಾಡಿದರು’ ಎಂದು ಕಿಡಿ ಕಾರಿದ್ದಾರೆ. ಇದೇ ವೇಳೆ, ತಾವು ಭಾರತೀಯ ಪ್ರಜೆ ಅಲ್ಲ ಎಂಬ ಆರೋಪಕ್ಕೆ ಪಾಸ್‌ಪೋರ್ಟ್ ತೋರಿಸಿ ಸ್ಪಷ್ಟನೆ ನೀಡಿದ ಅವರು, ‘ಇಲ್ಲಿದೆ ನನ್ನ ಪಾಸ್‌ಪೋರ್ಟ್. ನಾನು ಭಾರತೀಯ ಪ್ರಜೆಯಾಗಿದ್ದೇನೆ, ಆಗಿದ್ದೆ ಮತ್ತು ಮುಂದೆಯೂ ಆಗಿರುತ್ತೇನೆ. ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

06:22 AM (IST) Oct 12
05:34 AM (IST) Oct 12
05:22 AM (IST) Oct 12