
ನವದೆಹಲಿ(ಜ.06): ಭಾರತ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಸಂಶೋಧಿಸಿರುವ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಉಭಯ ರಾಷ್ಟ್ರಗಳು ಸೇರಿ ಅಭಿವೃದ್ಧಿಪಡಿಸಿರುವ ಈ ರಕ್ಷಣಾ ವ್ಯವಸ್ಥೆಯು 50-70 ಕಿಮೀ ವ್ಯಾಪ್ತಿಯಲ್ಲಿನ ಶತ್ರು ವಿಮಾನಗಳನ್ನು ಹೊಡೆದುರುಳಿಸಬಲ್ಲದು.
ಪ್ರಸ್ತುತ ಭಾರತೀಯ ಸೇನೆಯ ಮೂರೂ ವಿಭಾಗಗಳು ಹಾಗೂ ಇಸ್ರೇಲ್ ರಕ್ಷಣಾ ಪಡೆಗಳು ವೈಮಾನಿಕ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಡಿಆರ್‌ಡಿಒ ಹಾಗೂ ಇಸ್ರೇಲ್‌ನ ಐಎಐ ಜಂಟಿಯಾಗಿ ಇವುಗಳನ್ನು ಅಭಿವೃದ್ಧಿಪಡಿಸಿವೆ. ಎಂಆರ್‌ಎಸ್‌ಎಎಂ ವ್ಯವಸ್ಥೆಯು ನಿರ್ದೇಶನ ಮತ್ತು ನಿಯಂತ್ರಣಗಳನ್ನು ಒಳಗೊಂಡಿದ್ದು, ಆಧುನಿಕ ಆರ್ರೇ ರೇಡಾರ್, ಮೊಬೈಲ್ ಲಾಂಚರ್ ಸೌಲಭ್ಯಗಳಿವೆ.
ಈ ಶಸ್ತ್ರ ವ್ಯವಸ್ಥೆಯ ಎಲ್ಲ ಗುರಿಗಳೂ ಪರೀಕ್ಷೆ ವೇಳೆ ಯಶಸ್ವಿಯಾಗಿ ಗುರಿ ತಲುಪಿವೆ. ಡಿಜಿಟಲ್ ಎಂಎಂಆರ್ ರೇಡಾರ್ ವ್ಯವಸ್ಥೆಯಲ್ಲಿನ ತೊಂದರೆಗಳನ್ನು ನಿವಾರಿಸಿ ಎಂಆರ್‌ಎಸ್‌ಎಎಂ ಪ್ರತಿಬಂಧಕವನ್ನು ಕಾರ್ಯಾಚರಣೆಗೆ ಪರೀಕ್ಷಿಸಲಾಗಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದೆ.
MRSAM ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಬಹಳ ಆಧುನಿಕ ತಂತ್ರಜ್ಞಾನವಾಗಿದ್ದು, ವಿವಿಧ ಬಗೆಯ ಬೆದರಿಕೆಗಳನ್ನು ಎದುರಿಸುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವಾಯುಮಾರ್ಗದಲ್ಲಿನ ಯಾವುದೇ ರೀತಿಯ ಶತ್ರುಪಾಳಯದ ಆಸ್ತ್ರಗಳನ್ನು ಆಗಸದಲ್ಲೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಾಯು ರಕ್ಷಣಾ ವ್ಯವಸ್ಥೆಯ ಪ್ರತಿ ಪ್ರಯೋಗವೂ ಬಹಳ ಸಂಕೀರ್ಣ ಕಾರ್ಯಾಚರಣೆ ಪ್ರಯತ್ನ. ಕೋವಿಡ್ ಕಾರಣದ ಮಿತಿಗಳು ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಬೋಯಜ್ ಲೆವಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ