ಭಾರತದ ಗಡಿ ಭಾಗ ಆಕ್ರಮಿಸಿಕೊಂಡಿದೆಯಾ ಚೀನಾ? ಸಂಸತ್ತಿನಲ್ಲಿ ಗುಡುಗಿದ ಜೈಶಂಕರ್!

By Chethan Kumar  |  First Published Dec 3, 2024, 4:12 PM IST

ಭಾರತ-ಚೀನಾ ಗಡಿ ಸಮಸ್ಯೆ, ರಾಜತಾಂತ್ರಿಕ ಮಾತುಕತೆ, ಗಲ್ವಾನ್ ಕಣಿವೆ ಸಂಘರ್ಷ, ಸದ್ಯದ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ವಿದೇಶಾಂಗ ಸಚಿವ ಎಸ್ ಶಂಕರ್ ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ. ಸದ್ಯ ಭಾರತದ ಎಷ್ಟು ಭೂಭಾಗ ಚೀನಾ ಹಾಗೂ ಪಾಕಿಸ್ತಾನದ ಕೈಯಲ್ಲಿದೆ? 
 


ನವದೆಹಲಿ(ಡಿ.03) ಭಾರತದ ಚೀನಾ ನಡುವಿನ ಗಡಿ ಸಮಸ್ಯೆ ಹಾಗೂ ಸದ್ಯದ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಉತ್ತರಿಸಿದ್ದಾರೆ. ಲಡಾಖ್‌ನಲ್ಲಿ ಸತತ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲಾಗಿದೆ. 2020ರ ಬಳಿಕ ಇದ್ದ ಆತಂಕದ ವಾತಾವರಣ ಈಸ್ಟರ್ನ್ ಲಡಾಖ್ ಗಡಿಯಲ್ಲಿ ಇಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಸಹಜ ಸ್ಥಿತಿಗೆ ತರಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಭಾರತ ಹಾಗೂ ಚೀನಾ ನಡುವಿನ ಸಂಬಂಧ ಸುಧಾರಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.ಮೋದಿ ಸರ್ಕಾರ ಭಾರತ ಗಡಿ ಭಾಗವನ್ನು ಚೀನಾಗೆ ನೀಡಿದೆ. ಚೀನಾ ಅತಿಕ್ರಮಣ ಮಾಡಿದೆ ಅನ್ನೋ ಆರೋಪನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಲವು ಬಾರಿ ಮಾಡಿದ್ದಾರೆ. ಈ ಕುರಿತು ಜೈಶಂಕರ್ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಜೈಶಂಕರ್ ಭಾರತ ಹಾಗೂ ಚೀನಾ ನಡುವೆ ಇರುವ ಹಲವು ಗಡಿ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ತಿಳಿಗೊಳಿಸಲಾಗುವುದು ಎಂದಿದ್ದಾರೆ. ಚೀನಾ ಅತಿಕ್ರಮಣ ಕುರಿತು ಮಾತನಾಡಿದ ಜೈಶಂಕರ್ 1962ರಲ್ಲಿ ಚೀನಾ ಭಾರತದ 38,000 ಚದರ ಕಿಲೋಮೀಟರ್ ಭೂಭಾಗವನ್ನು ಅತಿಕ್ರಮಿಸಿಕೊಂಡಿತ್ತು. ಅಕ್ಸಯ್ ಚಿನ್ ಎಂದು ನಾಮಕರಣ ಮಾಡಿರುವ ಈ ಪ್ರದೇಶದಲ್ಲಿ ಈಗಲೂ ಚೀನಾ ಅಧಿಪತ್ಯವಿದೆ. ಇನ್ನು 1948ರಲ್ಲಿ ಪಾಕಿಸ್ತಾನ ಅತಿಕ್ರಮಣ ಮಾಡಿದ ಭಾರತದ ಗಡಿ ಭೂಭಾಗದ ಪೈಕಿ 5180 ಚದರ ಕಿಲೋಮೀಟರ್ ಪ್ರದೇಶವನ್ನು 1963ರಲ್ಲಿ ಚೀನಾಗೆ ಹಸ್ತಾಂತರಿಸಿದೆ ಎಂದು ಜೈಶಂಕರ್ ಸಂಸತ್ತಿನಲ್ಲಿ ಹೇಳಿದ್ದಾರೆ.

Tap to resize

Latest Videos

ನೀವು ತುಂಬಾ ಫೇಮಸ್,ಜೈಶಂಕರ್‌ಗೆ ಬಗ್ಗೆಇಂಡೋನೇಷ್ಯಾ ಅಧ್ಯಕ್ಷರ ಮೆಚ್ಚುಗೆ ಮಾತು ವೈರಲ್!

ಈ ಅತಿಕ್ರಮಣದ ಬಳಿಕ ಚೀನಾ 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷಕ್ಕೆ ಮುಂದಾಗಿತ್ತು. 45 ವರ್ಷಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ಈ ಮಟ್ಟದ ಸಂಘರ್ಷ ಸೃಷ್ಟಿಯಾಗಿತ್ತು. ಆದರೆ ಭಾರತೀಯ ಯೋಧರು ಭೌಗೋಳಿಕ ಸವಾಲು, ಕೋವಿಡ್ ಆತಂಕ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ದಿಟ್ಟ ಪ್ರತಿರೋಧ ನೀಡಿತ್ತು. ಈ ಮೂಲಕ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿತ್ತು. ಈ ಸಂಘರ್ಷದಲ್ಲಿ ಭಾರತದ ಹಲವು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಚೀನಾ ಸೈನ್ಯವನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಗಲ್ವಾನ್ ಸಂಘರ್ಷದ ಬಳಿಕ ಚೀನಾ ಭಾರತದ ಗಡಿ ಭಾಗದಲ್ಲಿ ಭಾರಿ ಶಸ್ತ್ರಾಸ್ತ್ರ ಜಮಾವಣೆ ಮಾಡಿತ್ತು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆದರೆ ಭಾರತ ಸತತ ಮಾತುಕತೆ ಮೂಲಕ ಶಾಂತಿಯುತವಾಗಿ ಈಸ್ಟರ್ನ್ ಲಡಾಖ್ ಸಮಸ್ಯೆ ಬಗೆಹರಿಸಿದೆ. ಉಭಯ ದೇಶಗಳು ಸೇನೆಯನ್ನು ಹಿಂತೆಗೆದುಕೊಂಡಿದೆ. ಜೊತೆಗೆ ಪ್ಯಾಟ್ರೋಲಿಂಗ್ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ ಹಾಗೂ ಚೀನಾದ ಗಡಿಯುದ್ದಕ್ಕೂ ಸಮಸ್ಯೆಗಳು ಉಲ್ಭಣಿಸಿದೆ. ಗಡಿ ಸಮಸ್ಯೆ ಬಗೆಹರಿಸದೇ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಉತ್ತಮವಾಗಿರಲು ಸಾಧ್ಯವಿಲ್ಲ ಅನ್ನೋದು ಭಾರತದ ನಿಲುವು. ಈ ನಿಲುವಿಗೆ ಭಾರತ ಪ್ರತಿ ಮಾತುಕತೆಯಲ್ಲೂ ಬದ್ಧವಾಗಿತ್ತು.  ಆದರೆ ರಾಜತಾಂತ್ರಿಕ ಮಾತುಕತೆ ಮೂಲಕ ಸಹಜ ಸ್ಥಿತಿಗೆ ತರಲಾಗಿದೆ. ಇದೀಗ ವ್ಯಾಪಾರ ವಹಿವಾಟುಗಳು ಎಂದಿನಂತೆ ಸಾಗುತ್ತಿದೆ. 

ನಿಜ್ಜರ್ ಹತ್ಯೆ ಆರೋಪಕ್ಕೆ ಒಂದೂ ಸಾಕ್ಷ್ಯ ನೀಡಿಲ್ಲ, ಕೆನಡಾ ಬೆತ್ತಲೆಗೊಳಿಸಿದ ಸಚಿವ ಜೈಶಂಕರ್!

ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ನಡೆಸಿದ ಮಾತುಕತೆಯೂ ಫಲಪ್ರದವಾಗಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವೆಂಬರ್ 20. 2024ರಂದು ಚೀನಾ ರಕ್ಷಣಾ ಸಚಿವ ಡಾಂಗ್ ಜನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಜೈಶಂಕರ್ ಸಂಸತ್ತಿನಲ್ಲಿ ಉತ್ತರಿಸಿದ್ದಾರೆ. ಸ್ವತಂತ್ರ ಭಾರತದ ಆರಂಭದಿಂದ ಉಲ್ಭಣಗೊಂಡ ಭಾರತ ಚೀನಾ ನಡುವಿನ ಸಮಸ್ಯೆಯನ್ನು ಜೈಶಂಕರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಪ್ರತಿ ಹಂತದಲ್ಲಿ ತೆಗೆದುಕೊಂಡ ನಿರ್ಧಾರಗಳು, ಒಪ್ಪಂದಗಳನ್ನು ಉಲ್ಲೇಖಿಸಿದ್ದಾರೆ. 


 

| In the Lok Sabha, EAM Dr S Jaishankar says "The situation arising after our counter deployment in 2020 called for multiple sets of responses. The immediate priority was to ensure disengagement from friction points so that there would be no further untoward incidents or… pic.twitter.com/7hpZcWvcco

— ANI (@ANI)
click me!