
ಚೆನ್ನೈ( ಮೇ 07) ತಮಿಳುನಾಡು ಸಿಎಂ ಆಗಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಡಿದ್ದಾರೆ. ತಮಿಳುನಾಡು ಸಂಪುಟಕ್ಕೆ ಡಿಎಂಕೆ ಹಿರಿಯ ನಾಯಕರ ಪುನರಾಗಮನವಾಗಿದೆ. ಸ್ಟಾಲಿನ ಜತೆ
33 ಸಚಿವರು ಪ್ರಮಾಣ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಸ್ಟಾಲಿನ್ ಗೆ ಗಾಂಧಿ ಮತ್ತು ನೆಹರು ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ! ಗಾಂಧಿ ಗ್ರಾಮೀಣ ಅಭಿವೃದ್ಧಿ ಇಲಾಖೆ ನೋಡಿಕೊಂಡರೆ, ನೆಹರು ನಗರಾಭಿವೃದ್ಧಿ ಹೊಣೆ ಹೊತ್ತಿದ್ದಾರೆ.
ತಮಿಳುನಾಡಲ್ಲಿ ಸ್ಟಾಲಿನ್ ಯುಗ ಆರಂಭ
ಇನ್ನೊಂದು ವಿಚಾರ ಎಂದರೆ ಈ ಗಾಂಧಿ ಮತ್ತು ನೆಹರು ಇಬ್ಬರ ಮೇಲೆಯೂ ಭ್ರಷ್ಟಾಚಾರದ ಆರೋಪಿಗಳಿದ್ದು ಅದರಿಂದ ಮುಕ್ತವಾಗಿದ್ದಾರೆ. ಅಲ್ಲಿನ ವಿಧಾನಸಭೆಯ ಸ್ಪೀಕರ್ ಗೂ ಹೊಸ ಸಂಕಟ ಎದುರಾಗಿದೆ. ಗಾಂಧಿ ನೀವು ಮಾತನಾಡಿ, ಗಾಂಧಿ ನಿಮ್ಮ ಅವಧಿ ಮುಗಿದಿದೆ ಕುಳಿತುಕೊಳ್ಳಿ, ಈ ಬಗ್ಗೆ ನೆಹರು ಏನ್ ಹೇಳ್ತಿರಿ ಎಂದು ಸುಲಭಕ್ಕೆ ಕರೆಯುವುದು ಮುಂದಿನ ಅಧಿವೇಶನದ ಸಂದರ್ಭದಲ್ಲಿ ಸಾಧ್ಯವಾಗದಿರಬಹುದು.
ರಾಣಿಪೇಟ್ ನಿಂದ ಆರ್ ಗಾಂಧಿ ನಾಲ್ಕು ಸಾರಿ ಗೆದ್ದು ಬಂದಿದ್ದಾರೆ. ತಿರುಚ್ಚಿಯಿಂದ ಕೆಎನ್ ನೆಹರು ಐದು ಸಲ ಗೆದ್ದು ಬಂದಿದ್ದಾರೆ. ವಿರೋಧ ಪಕ್ಷಗಳಿಗೂ ಇವರ ಹೆಸರನ್ನು ಹಿಡಿದು ಕೂಗುವುದನ್ನು ರೂಢಿ ಮಾಡಿಕೊಳ್ಳಲು ಸಮಯಬೇಕಾಗಬಹುದು.
2005 ರಲ್ಲಿ ಗಾಂಧಿ ಮತ್ತು ಅವರ ಪುತ್ರನಮೇಲೆ ಭ್ರಷ್ಟಾಚಾರದ ಆರೋಪ ಬಂದಿದ್ದವು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳು ದಾಖಲಾಗಿದ್ದವು.
ಮೇ 2 ರಂದು ಪ್ರಕಟವಾದ ಫಲಿತಾಂಶದಲ್ಲಿ ಡಿಎಂಕೆ ಅಧಿಕಾರ ಹಿಡಿದುಕೊಂಡಿತ್ತು ಡಿಎಂಕೆ 133 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ ಸೇರಿದಂತೆ ಮಿತ್ರರಾಷ್ಟ್ರಗಳ ಜೊತೆಗೆ 234 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು 159 ಕ್ಷೇತ್ರಗಳನ್ನು ಡಿಎಂಕೆ ಗಳಿಸಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ