ಕರ್ನಾಟಕ ಸೇರಿ 3 ರಾಜ್ಯದಲ್ಲಿ ಮುಂದಿನ 5 ದಿನ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!

By Suvarna NewsFirst Published Dec 1, 2022, 4:33 PM IST
Highlights

ಬಂಗಾಳ ಕೊಲ್ಲಿ, ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ ಕಾರಣ ಕರ್ನಾಟಕ, ತಮಿಳುನಾಡು, ಕೇರಳದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು(ಡಿ.01): ದಕ್ಷಿಣ ಅಂಡಮಾನ್, ಆಗ್ನೇಯ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಚಂಡಮಾರುತ ಲಕ್ಷಣಗಳು ಗೋಚರಿಸಿದೆ. ಕಡಿಮೆ ಒತ್ತಡದ ರೂಪುಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣಿದೆ. ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಇನ್ನು ಡಿಸೆಂಬರ್ 5ರ ವರೆಗೆ ಇದೇ ವಾತಾರಣ ಮುಂದುವರಿಯಲಿದೆ. ಇದರ ಜೊತೆಗೆ ಮಳೆಯ ಸಾಧ್ಯತೆಯೂ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಡಿಸೆಂಬರ್ 4ರ ಸುಮಾರು ದಕ್ಷಿಣ ಅಂಡಮಾನ್‌ನಿಂದ ಚಂಡಮಾರುತ ಪರಿಚಲನೆ ಹೊರಹೊಮ್ಮುವ ಸಾಧ್ಯತೆ ಇದೆ. ಇದರ ಪರಿಣಾಮ ಅಗ್ನೇಯ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ತೀರಕ್ಕೆ ತಟ್ಟಲಿದೆ. 

ಮುಂದಿನ 48 ಗಂಟೆಗಳಲ್ಲಿ ಈ ಚಂಡಮಾರುತ ಬಂಗಾಳ ಕೊಲ್ಲಿಯತ್ತ ಸಾಗಲಿದ್ದು. ಡಿಸೆಂಬರ್ 8ರ ವೇಳೆಗೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶೀತಮಿಶ್ರಿತ ವಾತವಾರಣ ಒಂದು ವಾರ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

ಹಿಂಗಾರು ಮಳೆ: 10 ಲಕ್ಷ ಹೆಕ್ಟೇರ್‌ ಕಡಿಮೆ ಬಿತ್ತನೆ

ಮೈಸೂರಿನಲ್ಲೂ ಮಳೆ ಸಾಧ್ಯತೆ 
ಮೈಸೂರು ಜಿಲ್ಲೆಯಲ್ಲಿ ಡಿ. 14 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.   ಈ ಅವಧಿಯಲ್ಲಿ ತಿಂಗಳ ಹುರುಳಿಗೆ ಚಿಬ್ಬುರೋಗ ಮತ್ತು ಕಾಯಿ ಕೊಳೆಯುವ ರೋಗ, ಎಲೆ ಕೋಸು ಮತ್ತು ಹೂ ಕೋಸಿಗೆ ಸಸ್ಯ ಹೇನು, ಬಾಳೆಗೆ ಎಲೆ ಚುಕ್ಕೆ ರೋಗ, ಟೊಮ್ಯಾಟೋ, ಮೆಣಸಿನಕಾಯಿ, ಬದನೆಗೆ ಸಸಿಗಳ ಉಪಚಾರದ ಅಗತ್ಯವಿದೆ ಎಂದು ಕೃಷಿ ಇಲಾಖೆ ಎಚ್ಚರಿಸಿದೆ. ತೊಗರಿಗೆ ಕಾಯಿಕೊರಕ, ಮುಸುಕಿನ ಜೋಳಕ್ಕೆ ಸೈನಿಕ ಹುಳು, ಅವರೆಗೆ ಕಾಯಿ ಕೊರಕ, ಶುಂಠಿಗೆ ಗಡ್ಡೆ ಕೊಳೆರೋಗ ಕಂಡುಬರುವ ಸಾಧ್ಯತೆ ಇದೆ.  

ಅಕಾಲಿಕ ಮಳೆಗೆ ರೈತರು ಕಂಗಾಲು
ಅಕಾಲಿಕೆ ಮಳೆಯಾಗುತ್ತಿರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ.  ಬೆಳೆಗಳನ್ನು ಕಟಾವು ಮಾಡಿ ರಾಶಿ ಹಾಕಿದ್ದ ರೈತರು ಅಕಾಲಿಕ ಮಳೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. 

ಮಳೆಯ ಕಾರಣದಿಂದ ರಸ್ತೆ ಕಾಮಗಾರಿ ವಿಳಂಬ: ಕೆ.ಜಿ. ಬೋಪಯ್ಯ

ಅತಿವೃಷ್ಟಿಯಿಂದ ರೈತರ ಬೆಳೆಹಾನಿ ಪರಿಹಾರಕ್ಕೆ ರೈತ ಸಂಘದ ಮನವಿ
ದೇವರಹಿಪ್ಪರಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮದ ರೈತರ ಬೆಳೆ ಅತಿವೃಷ್ಟಿಯಿಂದ ಹಾಗೂ ಹವಾಮಾನ ವೈಪರೀತ್ಯದಿಂದ ಹಾನಿಯಾಗಿದೆ. ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ರಿ) ವಿಜಯಪುರ ಪದಾಧಿಕಾರಿಗಳು ಹಾಗೂ ರೈತರಿಂದ ತಹಸೀಲ್ದಾರ್‌ ಸಿ.ಎ.ಗುಡದಿನ್ನಿ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು. ನಂತರ ಮಾತನಾಡಿದ ರೈತ ಸಂಘದ ಮುಖಂಡರು ಬೆಳೆ ಹಾನಿಯಿಂದ ರೈತ ಕಂಗಲಾಗಿದ್ದಾನೆ ಕೂಡಲೇ ರಾಜ್ಯ ಸರ್ಕಾರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. 2022-23ರ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಪಾಟೀಲ, ಗೌರವ ಅಧ್ಯಕ್ಷರಾದ ಶಿವಾನಂದ ಹಿರೇಮಠ, ಪದಾಧಿಕಾರಿಗಳಾದ ಹಣುಮಂತಗೌಡ ಪಾಟೀಲ, ಚಂದ್ರಕಾಂತ ಪ್ಯಾಟಿ, ಸುಭಾಸ್‌ ಸಜ್ಜನ, ಅಪ್ಪಾಸಾಹೇಬ ಹರವಾಲ, ಗುರಣ್ಣ ಹಂಗರಗಿ, ದ್ಯಾವಪ್ಪಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಸಂತೋಷ ರಾಠೋಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
 

click me!