ದಿಢೀರ್ 1500% ಜಂಪ್! ಭಾರತಕ್ಕೆ ಹರಿದು ಬರುತ್ತಿದೆಯಾ 'ಕಳ್ಳಚಿನ್ನ'? ಬಂಗಾರದ ಕಳ್ಳಸಾಗಣೆ ದಿಢೀರ್ ಹೆಚ್ಚಾಗಿದ್ದು ಏಕೆ?

Published : Nov 03, 2026, 07:04 PM IST
Gold Ring Designs 5

ಸಾರಾಂಶ

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಚಿನ್ನದ ಅಕ್ರಮ ಆಮದು ಶೇಕಡಾ 1500 ರಷ್ಟು ಅಂದರೆ 50 ಮೆಟ್ರಿಕ್ ಟನ್‌ಗಳವರೆಗೆ ಭಾರೀ ಏರಿಕೆಯಾಗಿದೆ. ಸರ್ಕಾರದ ದುಬಾರಿ ಆಮದು ಸುಂಕವೇ ಈ ಕಳ್ಳಸಾಗಣೆಗೆ ಪ್ರಮುಖ ಕಾರಣ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಇದರ ನಡುವೆ ದೇಶದಲ್ಲಿ ಚಿನ್ನದ ಆಭರಣಗಳ ಬಳಕೆಯು ಶೇಕಡಾ 20 ರಷ್ಟು ಕಡಿಮೆಯಾಗಿದೆ.

ನವದೆಹಲಿ: ಚಿನ್ನ. ಎಲ್ಲರಿಗೂ ಬೇಕು. ಇದೇ ಚಿನ್ನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿ ಹೊರ ಬಿದ್ದಿದೆ. ಕಳೆದ ಮೂರು ವರ್ಷಗಳಲ್ಲಿ ಅಕ್ರಮ ಚಿನ್ನದ ಆಮದು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಒಟ್ಟು 3 ಟನ್‌ಗಳಿಂದ 50 ಮೆಟ್ರಿಕ್ ಟನ್‌ಗಳವರೆಗೆ ಏರಿಕೆ ಆಗಿದೆ. ಅಂದರೆ ಶೇಕಡಾ 1500 ರಷ್ಟು ಚಿನ್ನದ ಅಕ್ರಮ ಆಮದು ಹೆಚ್ಚಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಬ್ಲೂಮ್‌ಬರ್ಗ್ ಪ್ರಕಾರ.. ಅಕ್ರಮ ಚಿನ್ನದ ಆಮದಿಗೆ ಕಾರಣ ಸರ್ಕಾರದ ದುಬಾರಿ ಸುಂಕ ಎಂದಿದೆ. ವಿಶ್ವ ಚಿನ್ನ ಮಂಡಳಿ ನೀಡಿರುವ ಡೇಟಾ ಉಲ್ಲೇಖಿಸಿ ದುಬಾರಿ ಸುಂಕವೇ ಕಾರಣ ಎಂದಿದೆ. 2023 ರಿಂದ ಇಲ್ಲಿಯವರೆಗಿನ ಅಂಕಿ-ಅಂಶಗಳ ಆಧಾರದ ಮೇಲೆ ದುಬಾರಿ ಸುಂಕದ ಉಲ್ಲೇಖ ಮಾಡಲಾಗಿದೆ.

ಚಿನ್ನದ ಕಳ್ಳಸಾಗಣೆ ಮತ್ತು ಪ್ರಯಾಣಿಕರು ವೈಯಕ್ತಿಕವಾಗಿ ಸಣ್ಣ ಪ್ರಮಾಣದಲ್ಲಿ ಹೊತ್ತೊಯ್ಯುವುದೂ ಸೇರಿದೆ. ಇಂಥ ಕೆಲಸಗಳು ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿವೆ. ಸುಂಕ ಹೆಚ್ಚಳ ಮಾಡಿರೋದ್ರಿಂದ ಇಂಥ ಮಾರ್ಗಗಳು ಜನರನ್ನ ಹೆಚ್ಚು ಆಕರ್ಷಿಸುತ್ತಿವೆ ಎನ್ನಲಾಗುತ್ತಿದೆ.

WGC ಮಾಹಿತಿ ಪ್ರಕಾರ, 2012 ಮತ್ತು 2013 ರ ನಡುವೆ ಚಿನ್ನದ ಮೇಲಿನ ಆಮದು ಸುಂಕವನ್ನು ಹಲವಾರು ಬಾರಿ ಏರಿಕೆ ಮಾಡಲಾಗಿತ್ತು. ಅದು ಕೊನೆಯಲ್ಲಿ ಶೇಕಡಾ 10ಕ್ಕೆ ತಲುಪಿತ್ತು. ಆರು ವರ್ಷಗಳ ಅಂತರದ ನಂತರ ಜುಲೈ 2019 ರಲ್ಲಿ ಸುಂಕವನ್ನು ಮತ್ತೊಮ್ಮೆ ಶೇಕಡಾ 2.5 ಶೇಕಡಾ ಪಾಯಿಂಟ್‌ಗಳಿಗೆ ಏರಿಕೆ ಮಾಡಲಾಗಿದೆ. ಅಲ್ಲಿಂದ ನಿರಂತರವಾಗಿ ಚಿನ್ನದ ಆಮದಿನ ಮೇಲಿನ ಸುಂಕ ಏರಿಕೆ ಆಗುತ್ತಲೇ ಇದೆ. 2021 ಮತ್ತು 2024 ರಲ್ಲಿ ಸುಂಕದ ಪ್ರಮಾಣದಲ್ಲಿ ಕಡಿತಗೊಂಡರೂ 2022 ಮತ್ತು 2026 ರಲ್ಲಿ ತೀವ್ರ ಏರಿಕೆಗಳು ನಡೆದಿವೆ.

ಪ್ರಸ್ತುತ ಚಿನ್ನದ ಆಮದು ಸುಂಕವು

ಚಿನ್ನ ಮತ್ತು ಬೆಳ್ಳಿ ಆಮದುಗಳ ಮೇಲೆ 10% ಮೂಲ ಕಸ್ಟಮ್ಸ್ ಸುಂಕ ಮತ್ತು 5% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ವಿಧಿಸಲಾಗಿದೆ. ಇದು ಮೇ 2026 ರಿಂದ ಜಾರಿಗೆ ಬರುವ ಪರಿಣಾಮಕಾರಿ ಆಮದು ತೆರಿಗೆಯನ್ನು 6% ರಿಂದ 15% ಕ್ಕೆ ಇಳಿಸಲಾಗಿದೆ. ಚಿನ್ನದ ಆಮದಿನಲ್ಲಿ ಶೇಕಡಾ IGST ಕೂಡ ಇದೆ.

ಯಾಕೆ ಸುಂಕ ಹೆಚ್ಚಳ?

ಭಾರತವು ಮೇ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿತು. ಅಂತರರಾಷ್ಟ್ರೀಯ ಲೋಹಗಳ ಖರೀದಿ ಕಡಿಮೆ ಮಾಡುವುದು, ದೇಶದ ವಿದೇಶೀ ವಿನಿಮಯ ನಿಕ್ಷೇಪಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಚಿನ್ನದ ಮೇಲಿನ ಸುಂಕವನ್ನ ಹೆಚ್ಚಿಸಲಾಗುತ್ತಿದೆ ಎಂಬುದು ಕೇಂದ್ರದ ವಾದ.

ಇನ್ನು ದೇಶದಲ್ಲಿ ಚಿನ್ನದ ಆಭರಣಗಳ ಬಳಕೆಯು ವರ್ಷದಿಂದ ವರ್ಷಕ್ಕೆ ಶೇಕಡಾ 20 ರಷ್ಟು ಕಡಿಮೆ ಆಗುತ್ತಿದೆ. ಚಿನ್ನದ ಆಭರಣಗಳ ಮೇಲಿನ ಬೇಡಿಕೆಯೂ 18% ರಷ್ಟು ಕಡಿಮೆಯಾಗಿದೆ. ಹಗುರವಾದ, ಕಡಿಮೆ ಕ್ಯಾರೆಟ್ ಮತ್ತು ಸ್ಟಡ್ಡ್ ಉತ್ಪನ್ನಗಳು 2026 ರಲ್ಲಿ ಬೇಡಿಕೆಗೆ ಕಾರಣವಾಯಿತು. ಭಾರತದಲ್ಲಿ ಚಿನ್ನವನ್ನು ಹೂಡಿಕೆಗಾಗಿ ಹೆಚ್ಚು ನೋಡುತ್ತಿದ್ದಾರೆ ಎಂದು WGC ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇವಸ್ಥಾನ, ಅರ್ಚಕರ ಬಗ್ಗೆ ಕೀಳು ಮಟ್ಟದಲ್ಲಿ ನಾಲಿಗೆ ಹರಿಬಿಟ್ಟ ನೇಹಾ ಬೋರಾ, ಇದಕ್ಕೂ ಬೆಂಬಲ ನೀಡುತ್ತಾ ಇಂಡಿ ಒಕ್ಕೂಟ?
ಡೇಟಾ ಸೆಂಟರ್‌ ಸ್ಟಾರ್ಟ್‌ ಮಾಡ್ಬೇಕು ಅಂತಿದೀನಿ, 12,500 ಕೋಟಿ ಸಾಲ ಕೊಡಿ ಎಂದು ಬ್ಯಾಂಕ್‌ ಮುಂದೆ ನಿಂತ ಗೌತಮ್‌ ಅದಾನಿ!