ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ಪತ್ರಕರ್ತ ಮೊಹಮ್ಮದ್ ಜುಬೇರ್ ಅರೆಸ್ಟ್!

Published : Jun 27, 2022, 08:14 PM ISTUpdated : Jun 27, 2022, 08:41 PM IST
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ಪತ್ರಕರ್ತ ಮೊಹಮ್ಮದ್ ಜುಬೇರ್ ಅರೆಸ್ಟ್!

ಸಾರಾಂಶ

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ನೂಪುರ್ ಶರ್ಮಾ  ಮುಸ್ಲಿಮ್ ವಿರೋಧಿ ಎಂದು ಪ್ರಚಾರ ಮಾಡಿದ್ದ ಜುಬೇರ್

ನವದೆಹಲಿ(ಜೂ.27): ಧಾರ್ಮಿಕ ಭಾವನೆಗೆ ಧಕ್ಕೆ, ದೇಶದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅರೆಸ್ಟ್ ಆಗಿದ್ದಾರೆ. ದೆಹಲಿ ಪೊಲೀಸರು ಜುಬೇರ್ ಬಂಧಿಸಿ ವಿಚಾರಣೆಗ ಒಳಪಡಿಸಿದ್ದಾರೆ.

ಪ್ರಕರಣ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೊಹಮ್ಮದ್ ಜುಬೇರ್ ಕರೆಸಿ ವಿಚಾರಣೆ ನಡೆಸಿದ್ದರು. ಜುಬೇರ್ ವಿರುದ್ದ ಸಾಕಷ್ಟು ಸಾಕ್ಷ್ಯಾಧಾರ ಲಭ್ಯವಾಗಿದೆ. ಈ ಆಧಾರದ ಮೇಲೆ ಮೊಹಮ್ಮದ್ ಜುಬೇರ್‌ನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಹೇಳಿದ್ದಾರೆ. ಸದ್ಯ ವಿಚಾರಣೆ ಮುಂದುವರಿದಿದೆ. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲು ನಾಳೆ(ಜೂ.28) ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Friday Files: ದೇಶಾದ್ಯಂತ ಏಕಕಾಲಕ್ಕೆ ಪ್ರೊಟೆಸ್ಟ್: ಶುಕ್ರ“ವಾರ್”ಗೆ ಮೊದಲೇ ಮುಹೂರ್ತ ಫಿಕ್ಸ್?

ಈ ಕುರಿತು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ. 2020ರ ಪ್ರಕರಣದಲ್ಲಿ ಜುಬೇರ್ ಅವರನ್ನು ವಿಚಾರಣೆಗೆಂದು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಆದರೆ ಸಂಜೆ 6.45ಕ್ಕೆ ಜುಬೇರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಹೇಗೆ ಸಾಧ್ಯ? 2020ರ ಪ್ರಕರಣದ ವಿಚಾರಣೆ ಕರೆಸಿ ಇದೀಗ ಬೇರೆ ಪ್ರಕರಣದ ಕುರಿತು ಸಾಕ್ಷ್ಯ ಲಭ್ಯವಿರುವ ಕಾರಣ ಬಂಧಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದೇ ನೋಟಿಸ್ ನೀಡಿಲ್ಲ ಎಂದು ಪ್ರತೀಕ್ ಸಿನ್ಹ ಆರೋಪಿಸಿದ್ದಾರೆ.

ನೂಪುರ್ ಶರ್ಮಾ ವಿವಾದಿತ ಹೇಳಿಕೆ ದೇಶದಲ್ಲಿ ಕೋಮು ಸಂಘರ್ಷವನ್ನೇ ಸೃಷ್ಟಿಸಿತ್ತು. ನೂಪುರ್‌ ಒಬ್ಬ ಕೋಮುವಾದಿಯಾಗಿದ್ದು, ಗಲಭೆ ಪ್ರಚೋದಿಸುವವರಾಗಿದ್ದಾರೆ’ ಎಂದು ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆ ನೂಪುರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. 

ನೂಪುರ್ ಕೋಮುವಾದಿ ಎಂದು ಪ್ರಚಾರ ಮಾಡಿದ್ದ ಮೊಹಮ್ಮದು ಜುಬೇರ್ ವಿರುದ್ಧ ದೂರು ದಾಖಲಾಗಿತ್ತು. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾಗೂ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿರುವ ಆರೋಪದಡಿಯಲ್ಲಿ ಮೊಹಮ್ಮದ್ ಜುಬೇರ್‌ನನ್ನು ಬಂಧಿಸಲಾಗಿದೆ.

ನೂಪುರ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಮುಸ್ಲಿಂ ಧಾರ್ಮಿಕ ಮುಖಂಡ ಆದಿಲ್ ಗಫೂರ್ ಅರೆಸ್ಟ್!

ಮೊಹಮ್ಮದ್ ಜುಬೆರ್  ನಕಲಿ ನಿರೂಪಣೆಯ ಮೂಲಕ ಕೋಮುಭಾವನೆಗಳನ್ನು ಪ್ರಚೋದಿಸಿ, ಸಾಮಾಜಿಕ ವಾತಾವರಣವನ್ನು ಹಾಳು ಮಾಡಲು ಯತ್ನಿಸಿದ್ದಾರೆ. ಈ ಕಾರಣದಿಂದಾಗಿ ನನಗೆ ಹಾಗೂ ನನ್ನ ಕುಟುಂಬದವರಿಗೆ ನಿರಂತರವಾಗಿ ಹತ್ಯೆ ಹಾಗೂ ಶಿರಚ್ಛೇದನದ ಬೆದರಿಕೆಯ ಸಂದೇಶಗಳು ಬರುತ್ತಿವೆ’ ಎಂದು ನೂಪುರ್ ಶರ್ಮಾ ಆರೋಪಿಸಿದ್ದಾರೆ.

ಈ ವಿಚಾರವನ್ನು ಸಂಬಂಧಪಟ್ಟಅಧಿಕಾರಿಗಳಿಗೆ ರವಾನಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಶೀಘ್ರವೇ ಈ ನಿಟ್ಟಿನಲ್ಲಿ ಸಂಪರ್ಕಿಸಲಾಗುವುದು ಎಂದು ದೆಹಲಿಯ ಸಿಟಿ ಪೊಲೀಸರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು