
ಪ್ರಸಕ್ತ ಜೀವನ ಶೈಲಿಯಲ್ಲಿ ವಿಶ್ರಾಂತಿ ಇಲ್ಲದಾಗಿದೆ. ಸೂರ್ಯ ಹುಟ್ಟುವ ಮೊದಲೇ ಜೀವನದ ಜಂಜಾಟಗಳು ಆರಂಭಗೊಳ್ಳುತ್ತದೆ. ಆದರೆ ಸೂರ್ಯ ಮುಳುಗಿದರೂ ಕೆಲಸ ಮುಗಿಯುವುದಿಲ್ಲ. ವೃತ್ತಿಪರ ಜವಾಬ್ದಾರಿ, ಕುಟುಂಬದ ಕರ್ತವ್ಯ, ನಿರ್ವಹಣೆ, ವೈಯುಕ್ತಿಕ ಗುರಿ ಸೇರಿದಂತೆ ಎದುರಾಗುವ ಹಲವು ಸವಾಲುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. ಇದಕ್ಕೆ ತಕ್ಕಂತೆ ದಿನವಿಡಿ ಸಕ್ರೀಯವಾಗಿರುವಂತೆ, ಆಯಾಸ, ಸುಸ್ತುಗಳಿಂದ ಹೊರಬಂದು ಉಲ್ಲಾಸದಿಂದ ಇರಲು ನೆರವಾಗುವಂತ ಸ್ಮಾರ್ಟ್ ದಾರಿಗಳನ್ನು ಜನರು ಹುಡುಕುತ್ತಿದ್ದಾರೆ.
ಜೀವನ ಶೈಲಿ ಬದಲಾಗುತ್ತಿದೆ, ಸಮಯ ಕಡಿಮೆಯಾಗುತ್ತಿದೆ. ಈ ಬದಲಾಗುತ್ತಿರುವ ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಮುಖ ಆರೋಗ್ಯ ಮತ್ತು ವೆಲ್‌ನೆಸ್ ಸಂಸ್ಥೆ ಹರ್ಬಲೈಫ್ ಇಂಡಿಯಾ ಇದೀಗ ಹೊಸ ಉತ್ಪನ್ನ ಲಿಫ್ಟ್ ಆಫ್ (Liftoff®)ಪರಿಚಯಿಸಿದೆ. ಕ್ಯಾಫೀನ್ ಒಳಗೊಂಡಿರುವ ಈ ತಾಜಾ ಎಫರ್ವೆಸೆಂಟ್ ಪಾನೀಯ ನಿಮ್ಮನ್ನು ದೀರ್ಘಕಾಲ ಎಚ್ಚರವಾಗಿಯೂ ಚುರುಕುವಾಗಿಯೂ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಈ ಪಾನಿಯದಲ್ಲಿ ಯಾವುದೇ ಸಕ್ಕರೆ ಸೇರಿಸಿಲ್ಲ. ಕಲ್ಲಂಗಡಿ (ವಾಟರ್‌ಮೆಲನ್) ರುಚಿಯಲ್ಲಿ ಲಭ್ಯವಿರುವ ಈ ಪಾನೀಯವನ್ನು ಸಮತೋಲನಯುತ ಹಾಗೂ ಉತ್ಸಾಹಭರಿತ ಜೀವನಶೈಲಿ ಅನುಸರಿಸುವವರಿಗೆ ವಿನ್ಯಾಸಗೊಳಿಸಲಾಗಿದೆ.
ಭಾರತದ ಜೀವನಶೈಲಿ ಬ್ಯೂಸಿ ಲೈಫ್‌ಗೆ ಮಾರುಹೋಗಿದೆ. ಈ ಬ್ಯೂಸಿ ಜೀವನಶೈಲಿಗೆ ಹೊಂದುವ, ಅದಕ್ಕೆ ತಕ್ಕಂತೆ ಆರೋಗ್ಯಕ್ಕೆ ಸೂಕ್ತವಾದ ಪೋಷಕ ಆಯ್ಕೆಗಳ ಬೇಡಿಕೆಯೂ ಹೆಚ್ಚಾಗಿದೆ. ಹರ್ಬಲೈಫ್‌ನ ಲಿಫ್ಟ್ ಆಫ್® ಈ ಅಗತ್ಯವನ್ನು ಪೂರೈಸುವ ಉತ್ಪನ್ನವಾಗಿದೆ. ಚಿಕ್ಕ ಸ್ಯಾಶೆಟ್ ರೂಪದಲ್ಲಿ ಲಭ್ಯವಿರುವುದರಿಂದ ಕೇವಲ ಒಂದನ್ನು ನೀರಿನಲ್ಲಿ ಬೆರೆಸಿದರೇ ಸಾಕು ತಕ್ಷಣ ಎನರ್ಜಿ ನೀಡುವ ಪಾನೀಯ ಸಿದ್ಧವಾಗಲಿದೆ. ಇದಕ್ಕೆ ಹೆಚ್ಚಿನ ಸಮಯವೂ ತೆಗೆದುಕೊಳ್ಳುವುದಿಲ್ಲ.
ಹೊಸ ಉತ್ಪನ್ನ ಹರ್ಬಲೈಫ್‌ನ ವಿಜ್ಞಾನ ಆಧಾರಿತ ಪೋಷಣಾ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರಮುಖವಾಗಿ ಸಕ್ರೀಯ, ಉತ್ಸಾಹಭರಿತ ಅವಶ್ಯಕತೆಗಳ ಇಂದಿನ ಜೀವನಶೈಲಿಗೆ ಹೊಂದಿಕೆಯಾಗುತ್ತದೆ.ಲಿಫ್ಟ್ ಆಫ್® ಮೂಲಕ, ಹರ್ಬಲೈಫ್ ಭಾರತದಲ್ಲಿ ನ್ಯೂಟ್ರಾಸ್ಯುಟಿಕಲ್ ಪಾನೀಯ ವಲಯದಲ್ಲಿ ಹರ್ಬಲೈಫ್ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ.
ಲಿಫ್ಟ್ ಆಫ್® ಉತ್ಪನ್ನಲ್ಲಿರುವ ಕ್ಯಾಫೀನ್ ದೇಹದ ಮೆಟಾಬಾಲಿಸಮ್ ತಾತ್ಕಾಲಿಕವಾಗಿ ಹೆಚ್ಚಿಸಿ, ಎಚ್ಚರ ಮತ್ತು ಚುರುಕುಪನವನ್ನು ಹೆಚ್ಚಿಸುತ್ತದೆ. ಅಲ್ಪಿನಿಯಾ ಗಲಾಂಗಾ (Alpinia galanga) ಸಾರತತ್ವವು ಮಾನಸಿಕ ಚುರುಕುತನ ಮತ್ತು ಶಾಂತತೆಯ ಭಾವನೆಗಳನ್ನು ಉತ್ತೇಜಿಸುತ್ತದೆ ಎಂಬುದು ಕ್ಲಿನಿಕಲ್ ಅಧ್ಯಯನಗಳಿಂದ ದೃಢವಾಗಿದೆ. ಇದಲ್ಲದೆ, ವಿಟಮಿನ್ C ಹಾಗೂ ಬಿ ಸಮೂಹದ ವಿಟಮಿನ್‌ಗಳು (B1, B2, B3, B5, B6, B7, B12) ದೇಹದ ಶಕ್ತಿ ಉತ್ಪಾದನೆಯನ್ನು ಬೆಂಬಲಿಸಿ, ದಿನಪೂರ್ತಿ ಎಚ್ಚರವಿರಲು ಸಹಾಯ ಮಾಡುತ್ತದೆ. ಈ ವೈಜ್ಞಾನಿಕ ಸಂಯೋಜನೆ, ಗ್ರಾಹಕರ ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಪೋಷಣೆ ಒದಗಿಸುವ ಹರ್ಬಲೈಫ್‌ನ ತತ್ವವನ್ನು ಪ್ರತಿಬಿಂಬಿಸುತ್ತದೆ.
ಇಂದು ಗ್ರಾಹಕರು ಕ್ಲೀನ್ ಲೇಬಲ್ ಉತ್ಪನ್ನಗಳನ್ನು ಹೆಚ್ಚಾಗಿ ಆಯ್ಕೆಮಾಡುತ್ತಿದ್ದಾರೆ. ಲಿಫ್ಟ್ ಆಫ್® ಉತ್ಪನ್ನ ಸಕ್ಕರೆ ರಹಿತವಾಗಿದೆ. ಇದಕ್ಕೆ ಯಾವುದೇ ಶುಗರ್ ಸೇರಿಸಿಲ್ಲ. ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸ್ಟಿವಿಯಾ ಎಲೆಗಳಿಂದ ಪಡೆಯುವ ಸ್ಟಿವಿಯೋಲ್ ಗ್ಲೈಕೋಸೈಡ್ ಎಂಬ ನೈಸರ್ಗಿಕ, ಕ್ಯಾಲರಿ-ರಹಿತ ಸಿಹಿಯನ್ನು ಬಳಸಲಾಗಿದೆ. ಬೀಟ್ರೂಟ್ ಪೌಡರ್‌ನಿಂದ ಬರುವ ನೈಸರ್ಗಿಕ ಬಣ್ಣ, ಮತ್ತು ಯಾವುದೇ ಕೃತಕ ಬಣ್ಣಗಳೂ ಸಂರಕ್ಷಕಗಳೂ ಇಲ್ಲದಿರುವುದು ಹರ್ಬಲೈಫ್‌ನ ಗುಣಮಟ್ಟ ಮತ್ತು ಪಾರದರ್ಶಕತೆಯ ಬದ್ಧತೆಯನ್ನು ತೋರಿಸುತ್ತದೆ.
ಗ್ರಾಹಕರ ಜೀವನಶೈಲಿ ಬದಲಾಗುತ್ತಿರುವ ಸಂದರ್ಭದಲ್ಲಿ, ಅವರಿಗೆ ಸಮಕಾಲೀನ ಮತ್ತು ನವೀನ ಪೋಷಣಾ ಪರಿಹಾರಗಳನ್ನು ನೀಡುವುದು ನಮ್ಮ ಬದ್ಧತೆ. ಲಿಫ್ಟ್ ಆಫ್® ವಿಜ್ಞಾನಾಧಾರಿತ ಉತ್ಪನ್ನವಾಗಿದ್ದು, ಸುಲಭವಾಗಿ ಶಕ್ತಿಯುತವಾಗಿಯೂ ಕೇಂದ್ರೀಕೃತವಾಗಿಯೂ ಇರಲು ನೆರವಾಗುತ್ತದೆ. ಹರ್ಬಲೈಫ್‌ನ ಪೋಷಣಾ ಆಧಾರಿತ ಉತ್ಪನ್ನ ಶ್ರೇಣಿಯಲ್ಲಿ ಇದು ಪ್ರಮುಖ ಸ್ಥಾನಕ್ಕೇರಲಿದೆ ಎಂದು ಉತ್ಪನ್ನ ಬಿಡುಗಡೆ ವೇಳೆ ಹರ್ಬಲೈಫ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಖನ್ನಾ ಹೇಳಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಪ್ರಿವೆಂಟಿವ್ ವೆಲ್‌ನೆಸ್ ಹಾಗೂ ಸಕ್ರಿಯ ಜೀವನಶೈಲಿಯ ಹಿನ್ನಲೆಯಲ್ಲಿ, ಲಿಫ್ಟ್ ಆಫ್® ದೈನಂದಿನ ಆರೋಗ್ಯದಲ್ಲಿ ಸರಿಯಾದ ಪೋಷಣೆಯ ಮಹತ್ವವನ್ನು ತೋರಿಸುತ್ತದೆ.
ಲಿಫ್ಟ್ ಆಫ್®ನ ಉದ್ದೇಶ ಸಮತೋಲನ: ಇದು ನಿಮಗೆ ಸಣ್ಣ ಆದರೆ ಪರಿಣಾಮಕಾರಿ ಶಕ್ತಿ ಉತ್ತೇಜನವನ್ನು ನೀಡುತ್ತದೆ, ದಿನವಿಡೀ ಕೇಂದ್ರೀಕೃತವಾಗಿಯೂ ಎಚ್ಚರವಿರಲೂ ನೆರವಾಗುತ್ತದೆ. ಉತ್ಪನನದಲ್ಲಿ ಸೇರಿಸಿದ ಸಕ್ಕರೆಯಿಲ್ಲ. ಕಾರಣ ನಿಮ್ಮ ಎನರ್ಜಿ ಹೆಚ್ಚಿಸುವುದು ಮಾತ್ರವಲ್ಲ, ಉತ್ತಮವಾಗಿಸುವ ಗುಣವೂ ಹೊಂದಿದೆ.
ಲಿಫ್ಟ್ ಆಫ್®ನ ಪ್ರತಿ ಸರ್ವಿಂಗ್‌ನಲ್ಲಿ 80 ಮಿ.ಗ್ರಾಂ ಕ್ಯಾಫೀನ್ ಇದೆ, ಇದು ಮೆಟಾಬಾಲಿಸಮ್ ಹೆಚ್ಚಿಸಲು ಮತ್ತು ದೇಹದ ದಣಿವು ಕಡಿಮೆ ಮಾಡಲು ಸಹಾಯಕ. ಅಲ್ಪಿನಿಯಾ ಗಲಾಂಗಾ ಎಕ್ಸ್‌ಟ್ರಾಕ್ಟ್ (300 ಮಿ.ಗ್ರಾಂ/ಸರ್ವಿಂಗ್) ಹಾಗೂ ವಿಟಮಿನ್ C ಮತ್ತು ಬಿ-ವಿಟಮಿನ್ ಸಂಯೋಜನೆ ಎಚ್ಚರತೆ ಮತ್ತು ಶಾಂತತೆಯ ಭಾವನೆಗಳನ್ನು ಉತ್ತೇಜಿಸಲು ಕ್ಲಿನಿಕಲಿ ಅಧ್ಯಯನಗೊಂಡಿದೆ. ಹರ್ಬಲೈಫ್‌ನ ಉತ್ಪನ್ನಗಳು ಯಾವುದೇ ರೋಗವನ್ನು ಪತ್ತೆಹಚ್ಚಲು, ಚಿಕಿತ್ಸೆ ನೀಡಲು ಅಥವಾ ತಡೆಯಲು ಉದ್ದೇಶಿತವಾಗಿಲ್ಲ. ಗರ್ಭಿಣಿ ಅಥವಾ ತಾಯಿಯರು ಈ ಉತ್ಪನ್ನವನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಇದು ಇದು ಪ್ರಾಯೋಜಿತ ಲೇಖನ. ನೀಡಿರುವ ಮಾಹಿತಿಗೆ ಸಂಪಾದಕ ಮಂಡಳಿ ಜವಾಬ್ದಾರರಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ