ವೈದ್ಯಕೀಯ ಸಿಬ್ಬಂದಿಗೆ ಡಬಲ್ ವೇತನ ನೀಡಲು ಸರ್ಕಾರ ನಿರ್ಧಾರ| ಪ್ರಾಣದ ಹಂಗು ತೊರೆದು ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಸೇರಿ ಆರೋಗ್ಯ ಸಿಬ್ಬಂದಿ
ಚಂಡೀಗಢ(ಏ.11): ಪ್ರಾಣದ ಹಂಗು ತೊರೆದು ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಸೇರಿ ಆರೋಗ್ಯ ಸಿಬ್ಬಂದಿಗಳ ವೇತನವನ್ನು ದ್ವಿಗುಣಗೊಳಿಸಲು ಹರಾರಯಣ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್, ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಕ್ಲಾಸ್ 4 ಸಿಬ್ಬಂದಿ, ಆ್ಯಂಬುಲೆನ್ಸ್ ಸಿಬ್ಬಂದಿ, ಟೆಸ್ಟಿಂಗ್ ಲ್ಯಾಬ್ ಸಿಬ್ಬಂದಿಗೆ ಕೊರೋನಾ ಪಿಡುಗು ನಿವಾರಣೆ ಆಗುವವರೆಗೆ ಡಬಲ್ ವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.
40,000 ಕೋಟಿ ರೂ. ಸರಕಿರುವ 4 ಲಕ್ಷ ಟ್ರಕ್‌ಗಳು ಅತಂತ್ರ!
ವೈದ್ಯಕೀಯ ಸಿಬ್ಬಂದಿಯನ್ನು ದೇವರಿಗೆ ಹೋಲಿಸಿರುವ ಸಿಎಂ ಖಟ್ಟರ್, ಅವರೆಲ್ಲಾ ಕೊರೋನಾ ವಿರುದ್ಧ ಯೋಧರಂತೆ ಹೋರಾಡುವ ಮೂಲಕ ಮಾನವೀಯತೆ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ.