ಚುನಾವಣೆ ಅಕ್ರಮ; ಹೈಕೋರ್ಟ್ ಆದೇಶಕ್ಕೆ ಮಂತ್ರಿಪದವಿಯೇ ಹೋಯ್ತು!

Published : May 12, 2020, 10:54 PM ISTUpdated : May 12, 2020, 10:55 PM IST
ಚುನಾವಣೆ ಅಕ್ರಮ;  ಹೈಕೋರ್ಟ್ ಆದೇಶಕ್ಕೆ ಮಂತ್ರಿಪದವಿಯೇ ಹೋಯ್ತು!

ಸಾರಾಂಶ

ಗುಜರಾತ್ ಹೈ ಕೋರ್ಟ್ ಮಹತ್ವದ  ಆದೇಶ/ ವಿಧಾನಸಭೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಮತ್ತು ತಿರುಚಿದ ಆರೋಪ ಎದುರಿಸುತ್ತಿದ್ದ  ಗುಜರಾತ್ ಸರ್ಕಾರದ  ಸಚಿವ ಭೂಪೇಂದ್ರಸಿಂಹ ಚುಡಾಸಮಾ ಅವರ ಆಯ್ಕೆಯನ್ನು ರದ್ದು/ ಕಾನೂನು ಹೋರಾಟದ ದಾರಿಗಳು

ಅಹಮದಾಬಾದ್(ಮೇ. 12)    ವಿಧಾನಸಭೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಮತ್ತು ತಿರುಚಿದ ಆರೋಪ ಎದುರಿಸುತ್ತಿದ್ದ  ಗುಜರಾತ್ ಸರ್ಕಾರದ  ಸಚಿವ ಭೂಪೇಂದ್ರಸಿಂಹ ಚುಡಾಸಮಾ ಅವರ ಆಯ್ಕೆಯನ್ನು ಗುಜರಾತ್ ಹೈ ಕೋರ್ಟ್ ಅಮಾನ್ಯ ಮಾಡಿದೆ.

2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಧೋಲ್ಕಾ ಕ್ಷೇತ್ರದಿಂದ 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ನಾಯಕನ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಅರ್ಜಿ ಸಲ್ಲಿಸಿದ್ದರು.  ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪರೇಶ್ ಉಪಾಧ್ಯಾಯ  ಚುಡಾಸಮಾ ಅವರ ಆಯ್ಕೆಯನ್ನು ರದ್ದುಪಡಿಸಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿದ ಬಿಜೆಪಿ ನಾಯಕನ ಪರಿಸ್ಥಿತಿ ಏನಾಯ್ತು ನೋಡಿ

ಚುಡಾಸಮಾ ಅವರು ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ, ಮತಗಳನ್ನು ಎಣಿಸುವ ಸಮಯದಲ್ಲಿ, ಚುನಾವಣಾ ಆಯೋಗದ ಹಲವು ಕಡ್ಡಾಯ ಸೂಚನೆ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು . ಚುಡಾಸಮಾ ಪ್ರಸ್ತುತ ವಿಜಯ್ ರೂಪಾನಿ ಸರ್ಕಾರದಲ್ಲಿ ಶಿಕ್ಷಣ, ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡುತ್ತಿದ್ದರು .

ಇನ್ನು ಮುಂದೆ  ಭೂಪೇಂದ್ರಸಿಂಹ ಚುಡಾಸಮಾ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಹೊಸದಾಗಿ ಚುನಾವಣೆ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!