
ಚಿನ್ನ ಅಂದ್ರೆ ಜನಸಾಮಾನ್ಯರು ಮಾರುದೂರ ಓಡುವ ಸ್ಥಿತಿ ಇದೆ. ಕೆಲ ದಿನಗಳ ಹಿಂದೆ ಚಿನ್ನದ ಬೆಲೆ ಇಳಿದಿದ್ದರಿಂದ ಚಿನ್ನ ಖರೀದಿದಾರರ ಆಸೆ ಚಿಗುರಿತ್ತು. ಆದ್ರೀಗ ಮತ್ತೆ ಚಿನ್ನದ ಬೆಲೆ ಏರಿಕೆಯಾಗ್ತಿರುವ ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.
ಈ ವರ್ಷದ ಜನವರಿ 29ರಂದು ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,80,779 ರೂಪಾಯಿ ದಾಖಲೆಯ ಮಟ್ಟ ತಲುಪಿತ್ತು. ಆದರೆ ನಂತರ ಬೆಲೆಯಲ್ಲಿ ಇಳಿಕೆಯಾಗಿತ್ತು. ಈಗ ಮಾರುಕಟ್ಟೆ ತಜ್ಞರು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಕೆಲವು ಅಂದಾಜುಗಳ ಪ್ರಕಾರ, 2027ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2 ಲಕ್ಷದ ಗಡಿ ದಾಟಬಹುದು.
ಜಾಗತಿಕ ಬ್ರೋಕರೇಜ್ ಸಂಸ್ಥೆ ಜೆಪಿ ಮಾರ್ಗನ್, 2026ರ ಜೂನ್ನಲ್ಲಿ ಪ್ರಕಟಿಸಿದ ವರದಿಯಲ್ಲಿ ಚಿನ್ನದ ಬೆಲೆಯ ಬಗ್ಗೆ ಅಂದಾಜು ನೀಡಿತ್ತು. ಅದರ ಪ್ರಕಾರ, 2026ರ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 6,000 ಡಾಲರ್ಗೆ ತಲುಪಬಹುದು. 2027ರ ಅಂತ್ಯದ ವೇಳೆಗೆ ಇದು 6,300 ಡಾಲರ್ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂದಾಜು ನಿಜವಾದರೆ ಮತ್ತು ರೂಪಾಯಿ–ಡಾಲರ್ ವಿನಿಮಯ ದರದಲ್ಲಿ ದೊಡ್ಡ ಬದಲಾವಣೆಯಾಗದಿದ್ದರೆ, ಭಾರತದಲ್ಲಿ 2027ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು 2.13 ಲಕ್ಷ ತಲುಪಬಹುದು ಎಂದು ವರದಿಯಲ್ಲಿ ಲೆಕ್ಕ ಹಾಕಲಾಗಿದೆ.
ಚಿನ್ನದ ಬೆಲೆ ಏರಿಕೆಯಾಗಲು ಕಾರಣಗಳೇನು?
ಅಮೆರಿಕದ ಬಾಂಡ್ ಯೀಲ್ಡ್, ಡಾಲರ್ ಮೌಲ್ಯ, ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರದ ಆತಂಕಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಅಂದಾಜಿನ ಪ್ರಕಾರ, 2026ರ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 4,600 ಡಾಲರ್ ತಲುಪಬಹುದು. ಅದೇ ಸಮಯದಲ್ಲಿ ಭಾರತದ MCX ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು 1.60 ಲಕ್ಷ ತಲುಪುವ ಸಾಧ್ಯತೆಯಿದೆ.
ಅಮೆರಿಕದ ಮಿಡ್ಟರ್ಮ್ ಚುನಾವಣೆಯ ಫಲಿತಾಂಶಗಳು ಹಾಗೂ ಜಗತ್ತಿನ ವಿವಿಧ ಭಾಗಗಳಲ್ಲಿನ ಯುದ್ಧ ಮತ್ತು ರಾಜಕೀಯ ಉದ್ವಿಗ್ನತೆಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಚುನಾವಣೆಯ ನಂತರ ಅಮೆರಿಕದ ನೀತಿಗಳ ಬಗ್ಗೆ ಅನಿಶ್ಚಿತತೆ ಹೆಚ್ಚಾದರೆ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿ ಚಿನ್ನದತ್ತ ಮುಖ ಮಾಡಬಹುದು. ಇದರಿಂದ ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನೊಂದೆಡೆ, ಅಂತಾರಾಷ್ಟ್ರೀಯ ಉದ್ವಿಗ್ನತೆ ಕಡಿಮೆಯಾಗಿ ಜಾಗತಿಕ ಆರ್ಥಿಕತೆಯಲ್ಲಿ ಸ್ಥಿರತೆ ಕಂಡುಬಂದರೆ, ಚಿನ್ನದ ಬೆಲೆಯ ಮೇಲೆ ಬೇರೆ ರೀತಿಯ ಪರಿಣಾಮ ಉಂಟಾಗಬಹುದು.
ಧನ್ತೇರಸ್, ದೀಪಾವಳಿಗೆ ಚಿನ್ನ ಖರೀದಿಸಬೇಕಾ?
ಧನ್ತೇರಸ್ ಮತ್ತು ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಬಂಗಾರದ ಬೆಲೆ ಇಳಿದು, ಏರ್ತಿದೆ. ಆದ್ಇರೆ ಮುಂದಿನ ದಿನಗಳಲ್ಲಿ ಬೆಲೆ ಇಳಿಯಬಹುದು ಎನ್ನುವ ಕಾರಣಕ್ಕೆ ಕೆಲವರು ಹೂಡಿಕೆ ಮಾಡಲು ಹಿಂದೇಟು ಹಾಕ್ತಿದ್ದಾರೆ. ಧನ್ತೇರಸ್ ದಿನ ಚಿನ್ನ ಖರೀದಿ ಗೊಂದಲದಲ್ಲಿದ್ದಾರೆ. ತಜ್ಞರ ಅಂದಾಜಿನ ಪ್ರಕಾರ, ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಚಿನ್ನ ಖರೀದಿಸುವ ಮೊದಲು ನಿಮ್ಮ ಅಗತ್ಯ, ಹೂಡಿಕೆಯ ಅವಧಿ ಮತ್ತು ಬಜೆಟ್ ಅನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಆಭರಣ ಖರೀದಿಸುವುದಾದರೆ ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡು ಖರೀದಿ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ