ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

By Kannadaprabha News  |  First Published Mar 28, 2023, 7:51 AM IST

‘ರಾಹುಲ್‌ ಅನರ್ಹತೆ ವಿರುದ್ಧ ಸಂಸತ್ತಿನಲ್ಲಿ ಹೋರಾಟ ನಡೆಸುತ್ತಿರುವ ವಿರೋಧ ಪಕ್ಷಗಳು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮಗೆ ಸಾವರ್ಕರ್‌ ಅವರಂತಹ ಹೋರಾಟಗಾರರ ಕೊಡುಗೆಯೇನು ಎಂಬುದು ಗೊತ್ತೇ? ನೀವು ಕುದುರೆ ರೇಸ್‌ನಲ್ಲಿ ಓಡಲು ಕತ್ತೆ ತರುತ್ತಿದ್ದೀರಿ. ದೇಶದ ಜನರು ನಿಜವಾಗಿಯೂ ಅವರು ಯಾರು ಎಂಬುದನ್ನು ನಿರ್ಧರಿಸುತ್ತಾರೆ’ ಎಂದು ಪುರಿ ಲೋಕಸಭೆಯ ಹೊರಗೆ ಸುದ್ದಿಗಾರರಿಗೆ ಹೇಳಿದರು.


ನವದೆಹಲಿ (ಮಾರ್ಚ್‌ 28, 2023): ‘ಕುದುರೆ ರೇಸ್‌ನಲ್ಲಿ ಓಡಲು ಕತ್ತೆ ತಂದಂತಾಯಿತು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಗ್ಗೆ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ತೀಕ್ಷ್ಣವಾಗಿ ಹರಿಹಾಯ್ದಿದ್ದಾರೆ. ಸಾವರ್ಕರ್‌ ಕುರಿತು ರಾಹುಲ್‌ ನೀಡಿದ ಹೇಳಿಕೆಗೆ ಹರ್ದೀಪ್‌ ಸಿಂಗ್‌ ಪುರಿ ಈ ರೀತಿ ಪ್ರತಿಕ್ರಿಯಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ರಾಹುಲ್‌ ಗಾಂಧಿ (Rahul Gandhi) ಅನರ್ಹತೆ ವಿರುದ್ಧ ಸಂಸತ್ತಿನಲ್ಲಿ (Parliament) ಹೋರಾಟ ನಡೆಸುತ್ತಿರುವ ವಿರೋಧ ಪಕ್ಷಗಳು (Opposition Parties) ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮಗೆ ಸಾವರ್ಕರ್‌ (Savarkar) ಅವರಂತಹ ಹೋರಾಟಗಾರರ ಕೊಡುಗೆಯೇನು ಎಂಬುದು ಗೊತ್ತೇ? ನೀವು ಕುದುರೆ ರೇಸ್‌ನಲ್ಲಿ (Horse Race) ಓಡಲು ಕತ್ತೆ (Ass) ತರುತ್ತಿದ್ದೀರಿ. ದೇಶದ ಜನರು ನಿಜವಾಗಿಯೂ ಅವರು ಯಾರು ಎಂಬುದನ್ನು ನಿರ್ಧರಿಸುತ್ತಾರೆ’ ಎಂದು ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ಲೋಕಸಭೆಯ (Lok Sabha) ಹೊರಗೆ ಸುದ್ದಿಗಾರರಿಗೆ ಹೇಳಿದರು.

Tap to resize

Latest Videos

ಇದನ್ನು ಓದಿ: ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ (Jairam Ramesh), ‘ಬಿಜೆಪಿಗೆ (BJPP) ಹೊಸತಾಗಿ ಹೋದವರು, ಅದರಲ್ಲೂ ಸಂಪುಟದಲ್ಲಿ ಮಂತ್ರಿಗಳಾದವರು (Minister) ಆಗಾಗ ಕೀಳು ಹೇಳಿಕೆಗಳನ್ನು ನೀಡುವ ಮೂಲಕ ಸ್ವಾಮಿನಿಷ್ಠೆ ಸಾಬೀತುಪಡಿಸಲು ಯತ್ನಿಸುತ್ತಾರೆ. ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಹಾರ್ವರ್ಡ್‌, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ

click me!