ರೈತರ ಹೋರಾಟಕ್ಕೆ ಹಣ ಬಂದಿದ್ದೆಲ್ಲಿಂದ? ಇ.ಡಿ. ತನಿಖೆ

By Kannadaprabha NewsFirst Published Jan 31, 2021, 8:50 AM IST
Highlights

ರೈತರ ಹೋರಾಟಕ್ಕೆ ಹಣ ಬಂದಿದ್ದೆಲ್ಲಿಂದ? ಇ.ಡಿ. ತನಿಖೆ| ಎನ್‌ಜಿಒಗಳಿಗೆ ವಿದೇಶದಿಂದ ಹವಾಲಾ ಮೂಲಕ ಹಣ: ಮೂಲಗಳು

ನವದೆಹಲಿ(ಜ.31): ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿದೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಹೋರಾಟದ ವೇಳೆ ನಡೆದ ಹಿಂಸಾಚಾರದ ಸಂಬಂಧ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳ ಆಧಾರದಲ್ಲೇ ಇ.ಡಿ. ಈ ತನಿಖೆ ಆರಂಭಿಸಿದ್ದು, ರೈತರನ್ನು ಹೋರಾಟಕ್ಕೆ ಕರೆತರಲು, ಧರಣಿಗಳನ್ನು ಆಯೋಜಿಸಲು ಹಾಗೂ ಧರಣಿನಿರತ ರೈತರ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಎಲ್ಲಿಂದ ಹಣ ಹರಿದುಬರುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲಿದೆ.

"

ಮೂಲಗಳ ಪ್ರಕಾರ ಪ್ರತಿಭಟನೆಗೆ ಕೆಲ ಎನ್‌ಜಿಒಗಳು ಹಣ ಒದಗಿಸುತ್ತಿದ್ದು, ಅವುಗಳ ಹಣಕಾಸು ವ್ಯವಹಾರದಲ್ಲಿ ಅಕ್ರಮಗಳು ಕಂಡುಬಂದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಎಫ್‌ಐಆರ್‌ ದಾಖಲಿಸಲು ಇ.ಡಿ. ಸಿದ್ಧತೆ ನಡೆಸಿದೆ. ಎನ್‌ಜಿಗಳು ಅನಾಮಧೇಯ ಮೂಲಗಳಿಂದ ಅಥವಾ ಅಕ್ರಮ ಮೂಲಗಳಿಂದ ಹಣ ಪಡೆದಿದ್ದರೆ ಹಣ ನೀಡಿದವರ ವಿರುದ್ಧವೂ ಕೇಸು ದಾಖಲಿಸಿ ಅವರ ಆಸ್ತಿ ಜಪ್ತಿ ಮಾಡಿಕೊಳ್ಳಲಾಗುತ್ತದೆ. ಕೆಲ ದಿನಗಳಿಂದ ದೆಹಲಿ, ಪಂಜಾಬ್‌ ಹಾಗೂ ಹರ್ಯಾಣ ಭಾಗದಲ್ಲಿ ಹವಾಲಾ ಮೂಲಕ ಹಣ ಚಲಾವಣೆ ನಡೆಸುವವರ ಮೇಲೆ ಇ.ಡಿ. ಕಣ್ಣಿಟ್ಟಿದ್ದು, ವಿದೇಶಗಳಿಂದ ಹಣ ತರಿಸಿ ಪ್ರತಿಭಟನಾಕಾರರಿಗೆ ಒದಗಿಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ.

click me!