ಆಕಾಶವಾಣಿ ಭವನದಲ್ಲಿ ಕಾಣಿಸಿಕೊಂಡ ಬೆಂಕಿ

Published : Jan 24, 2021, 08:34 PM ISTUpdated : Jan 24, 2021, 08:54 PM IST
ಆಕಾಶವಾಣಿ ಭವನದಲ್ಲಿ ಕಾಣಿಸಿಕೊಂಡ ಬೆಂಕಿ

ಸಾರಾಂಶ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಗ್ನಿ ಅವಘಡ/ ಆಕಾಶವಾಣಿ ಭವನದಲ್ಲಿ  ಬೆಂಕಿ/  ಪರಿಸ್ಥಿತಿ ಹತೋಟಿಗೆ ತಂದ ಅಗ್ನಿಶಾಮಕ ದಳ/   ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ/ ಯಾವುದೆ ಅವಘಡಕ್ಕೆ ಆಸ್ಪದ ಇಲ್ಲ

ನವದೆಹಲಿ( ಜ. 24) ಪುಣೆಯ  ಕೊರೋನಾ ಲಸಿಕೆ ತಯಾರಿಕೆ ಕೇಂದ್ರದಲ್ಲಿ ನಡೆದ ಅಗ್ನಿ ಅವಘಡ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.  ಅದೇ ದಿನ ಶಿವಮೊಗ್ಗದಲ್ಲಿ ಸ್ಫೋಟಕ ತುಂಬಿದ್ದ ಲಾರಿ ಸ್ಫೋಟಿಸಿ ಅವಘಡ ಸಂಭವಿಸಿತ್ತು. 

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಿಂದ ಘಟನೆಯೊಂದು ವರದಿಯಾಗಿದ್ದು ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಆಕಾಶವಾಣಿ ಭವನದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.   ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ  ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

ಪುಣೆ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು?

ಮುಂಜಾನೆಯೇ  ಕಟ್ಟಡದಲ್ಲಿ ಬೆಂಕಿ  ಕಾಣಿಸಿಕೊಂಡ ಮಾಹಿತಿ ಬಂದಿದೆ.  ಕೊಠಡಿ ಸಂಖ್ಯೆ 101 ರಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಡಿಎಫ್‌ಎಸ್ ನಿರ್ದೇಶಕ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ.

ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.. ಎರಡು ದಿನಗಳ ಹಿಂದೆ ಎಂಜಿನಿಯರ್ಸ್ ಕಟ್ಟಡದಲ್ಲೂ ಬೆಂಕಿ ಕಾಣಿಸಿಕೊಂಡ ವರದಿಯಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ