CAA Explainer: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ದೇಶದ ಮಹತ್ವದ ವಿಧೇಯಕದ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ

By Santosh NaikFirst Published Mar 11, 2024, 7:18 PM IST
Highlights

ಸಿಎಎ ನಿಯಮಗಳ ಜಾರಿಯೊಂದಿಗೆ, ಮೋದಿ ಸರ್ಕಾರವು 2014r ಡಿಸೆಂಬರ್ 31 ರ ಒಳಗಾಗಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ.

ನಾಲ್ಕು ವರ್ಷಗಳ ಹಿಂದೆ ದೇಶದ ಸಂಸತ್ತು ಅಂಗೀಕಾರ ಮಾಡಿದ್ದ ಪೌರತ್ವ ತಿದ್ದುಪಡಿ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಸಿಎಎ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿ, ನಿಯಮಗಳನ್ನು ಜಾರಿ ಮಾಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಇರಾದೆಯನ್ನು ಈ ಮಸೂದೆ ಹೊಂದಿದೆ. ನೆರೆಯ ಮುಸ್ಲಿಂ ಬಾಹುಳ್ಯ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ  ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆನ್ನು ಮೋದಿ ಸರ್ಕಾರ ಆರಂಭಿಸಲಿದೆ. ಆದರೆ, ಈ ವ್ಯಕ್ತಿಗಳು 2014ರ ಡಿಸೆಂಬರ್‌ 31ರ ಒಳಗಾಗಿ ಭಾರತಕ್ಕೆ ಪ್ರವೇಶಿಸಿದವರು ಆಗಿರಬೇಕು ಹಿಂದೂಗಳು ಮಾತ್ರವಲ್ಲದೆ, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಅನ್ವಯವಾಗುತ್ತದೆ. 2019ರ ಡಿಸೆಂಬರ್‌ನಲ್ಲಿ ಅಂಗೀಕಾರವಾಗಿದ್ದ ಈ ಮಸೂದೆಗೆ ತಕ್ಷಣವೇ ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿತ್ತು. ಈ ವೇಳೆ ದೇಶಾದ್ಯಂತ ಪ್ರತಿಭಟನೆಗಳು ಆಗಿದ್ದವು. ಸಿಎಎ ವಿರೋಧಿ ಪ್ರತಿಭಟನೆ ಹಾಗೂ ಪೊಲೀಸ್‌ ಕ್ರಮದಿಂದ ನೂರಾರು ಜನರು ಸಾವು ಕಂಡಿದ್ದರು.

ಇಲ್ಲಿಯವರೆಗೆ ನಿಯಮಗಳನ್ನು ತಿಳಿಸದ ಕಾರಣ ಕಾನೂನು ಜಾರಿಯಾಗದೆ ಉಳಿದಿತ್ತು. ಸಂಸದೀಯ ಕೆಲಸದ ಕೈಪಿಡಿಯ ಪ್ರಕಾರ, ರಾಷ್ಟ್ರಪತಿಗಳ ಒಪ್ಪಿಗೆಯ ಆರು ತಿಂಗಳೊಳಗೆ ಶಾಸನ ನಿಯಮಗಳನ್ನು ರಚಿಸಬೇಕು ಅಥವಾ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಧೀನ ಶಾಸನಗಳ ಸಮಿತಿಗಳಿಂದ ಸರ್ಕಾರವು ವಿಸ್ತರಣೆಯನ್ನು ಪಡೆಯಬೇಕು. 2020 ರಿಂದ, ಗೃಹ ಸಚಿವಾಲಯವು ನಿಯಮಗಳನ್ನು ರೂಪಿಸಲು ಸಂಸದೀಯ ಸಮಿತಿಯಿಂದ ನಿಯಮಿತ ವಿಸ್ತರಣೆಗಳನ್ನು ಪಡೆಯುತ್ತಿದೆ. ಗೃಹ ವ್ಯವಹಾರಗಳ ಸಚಿವಾಲಯವು ಅರ್ಜಿದಾರರ ಅನುಕೂಲಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್‌ನಲ್ಲಿ ನಡೆಸಲಾಗುತ್ತದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ವರ್ಷವನ್ನು ಘೋಷಿಸಬೇಕಾಗುತ್ತದೆ.ಅರ್ಜಿದಾರರಿಂದ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಿಎಎ ಕುರಿತಾದ ಪ್ರಶ್ನೆಗಳಿಗೆ ಉತ್ತರಗಳು
1. ಪೌರತ್ವ ಕಾಯ್ದೆ ಎಂದರೇನು?

1955 ರಲ್ಲಿ ಜಾರಿಗೆ ಬಂದ ಪೌರತ್ವ ಕಾಯ್ದೆಯು ಜನನ, ಸಂತತಿ, ನೋಂದಣಿ, ನ್ಯಾಚುರಲೈಜೇಷನ್‌ ಅಥವಾ ಭೂಪ್ರದೇಶದ ಸಂಯೋಜನೆಯಂತಹ ವಿವಿಧ ವಿಧಾನಗಳ ಮೂಲಕ ಭಾರತೀಯ ಪೌರತ್ವದ ಸ್ವಾಧೀನ, ನಿರ್ಣಯ ಮತ್ತು ಕೊನೆ ಮಾಡುವ ಫ್ರೇಮ್‌ವರ್ಕ್‌ ಒದಗಿಸುತ್ತದೆ.

2. ಪೌರತ್ವ (ತಿದ್ದುಪಡಿ) ಕಾಯಿದೆ (CAA) ಎಂದರೇನು?
2019 ರಲ್ಲಿ ಅಂಗೀಕರಿಸಲ್ಪಟ್ಟ ಸಿಎಎ, ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ನೆರೆಯ ದೇಶಗಳಲ್ಲಿನ ಆರು ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.

3. CAA ಯಾರಿಗೆ ಅನ್ವಯಿಸುತ್ತದೆ?
ಧಾರ್ಮಿಕ ಕಿರುಕುಳದ ಕಾರಣದಿಂದ 2014ರ ಡಿಸೆಂಬರ್ 31ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಸಿಎಎ ಅನ್ವಯಿಸುತ್ತದೆ.

4. CAA ಯಾವುದೇ ಭಾರತೀಯ ನಾಗರಿಕರ ಮೇಲೆ (ಹಿಂದೂಗಳು, ಮುಸ್ಲಿಮರು, ಯಾರಾದರೂ) ಪರಿಣಾಮ ಬೀರುತ್ತದೆಯೇ?
ಇಲ್ಲ, ಸಿಎಎ ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ.

5. ಇದು ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಿದೇಶಿಯರಿಗೆ ಹೇಗೆ ಲಾಭವಾಗುತ್ತದೆ?
ಸಿಎಎ ಈ ಸಮುದಾಯಗಳಿಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಕಾನೂನು ಹಕ್ಕನ್ನು ನೀಡುತ್ತದೆ, ಆರು (1+5) ವರ್ಷಗಳ ರೆಸಿಡೆನ್ಸಿ ಅವಧಿಯ ನಂತರ ತ್ವರಿತ ನ್ಯಾಚುರಲೈಜೇಷನ್‌ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

6. ಆರು ಅಲ್ಪಸಂಖ್ಯಾತ ಸಮುದಾಯದ ಗುಂಪುಗಳನ್ನು ಹೊರತುಪಡಿಸಿದ ವಿದೇಶಿಯರಿಗೆ ಸಿಎಎ ಅನ್ವಯಿಸುತ್ತದೆಯೇ?
ಇಲ್ಲ, ಸಿಎಎ ಪ್ರತ್ಯೇಕವಾಗಿ ಮೂರು ನೆರೆಯ ದೇಶಗಳ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರವೇ ಅನ್ವಯಿಸುತ್ತದೆ.

7. ಈ ಮೂರು ದೇಶಗಳನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರು CAA ಅಡಿಯಲ್ಲಿ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಅಂತಹ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕಾಗಿ ಪ್ರಮಾಣಿತ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅವರಿಗೆ ಸಿಎಎ ಮೂಲಕ ಪ್ರಕ್ರಿಯೆ ಮಾಡಲಾಗುವುದಿಲ್ಲ.

8. ಈ ಮೂರು ದೇಶಗಳು ಮಾತ್ರ ಏಕೆ?
ಈ ರಾಜ್ಯಗಳಲ್ಲಿ ಇತರ ಧರ್ಮಗಳ ಅನುಯಾಯಿಗಳು ಕಿರುಕುಳವನ್ನು ಎದುರಿಸುತ್ತಿರುವ ಕಾರಣ, ಅವರಿಗೆ ನಮ್ಮ ರಾಷ್ಟ್ರದಲ್ಲಿ ಪೌರತ್ವ ನೀಡುವ ಸಲುವಾಗಿ ಸಿಎಎ ಅವಕಾಶ ನೀಡುತ್ತದೆ. 

9. CAA ಇತರ ರೀತಿಯ ವಿಚಾರಣೆಯನ್ನು ಒಳಗೊಳ್ಳುತ್ತದೆಯೇ - ಜನಾಂಗ, ಲಿಂಗ ಇತ್ಯಾದಿಗಳ ಆಧಾರದ ಮೇಲೆ?
ಇಲ್ಲ, ಮೂರು ನೆರೆಯ ದೇಶಗಳಲ್ಲಿ ನಿರ್ದಿಷ್ಟಪಡಿಸಿದ ಅಲ್ಪಸಂಖ್ಯಾತ ಸಮುದಾಯದ ಗುಂಪುಗಳಿಗೆ ಧಾರ್ಮಿಕ ಕಿರುಕುಳದ ನಿದರ್ಶನಗಳನ್ನು ಮಾತ್ರವೇ CAA ಪ್ರತ್ಯೇಕವಾಗಿ ಒಳಗೊಂಡಿದೆ.

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

10. ಭಾರತವು ಇತರ ದೇಶಗಳ ಯಾವುದೇ ವ್ಯಕ್ತಿಗಳಿಗೆ ಪೌರತ್ವವನ್ನು ನೀಡಿದೆಯೇ?
ಹೌದು, ಭಾರತವು ಈ ಹಿಂದೆ ಶ್ರೀಲಂಕಾದ ತಮಿಳರು, ಬರ್ಮಾದ ವ್ಯಕ್ತಿಗಳು ಮತ್ತು 1970 ರ ದಶಕದಲ್ಲಿ ದಂಗೆಯ ನಂತರ ಉಗಾಂಡಾದಿಂದ ಬಂದವರು ಸೇರಿದಂತೆ ವಿವಿಧ ಗುಂಪುಗಳಿಗೆ ಪೌರತ್ವ ಮತ್ತು ಪುನರ್ವಸತಿ ಕೊಡುಗೆಗಳನ್ನು ನೀಡಿದೆ.

ಇಂದು ರಾತ್ರಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸಾಧ್ಯತೆ, ಮಹತ್ವದ ನಿರ್ಧಾರಕ್ಕೆ ಸಜ್ಜಾದ ಅಮಿತ್ ಶಾ!

click me!