ಭಾರತದಲ್ಲಿ ಅನಕ್ಷರಸ್ಥ ರಾಜಕಾರಣಿಯು ವಿತ್ತಮಂತ್ರಿಯಾಗಬಹುದು’ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಬೆೃ ಹೇಳಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ[ಡಿ.12]: ಭಾರತದಲ್ಲಿ ಅನಕ್ಷರಸ್ಥ ರಾಜಕಾರಣಿಯು ವಿತ್ತಮಂತ್ರಿಯಾಗಬಹುದು’ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಬೆೃ ಹೇಳಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ಆಗಿರುವ ಹೇಳಿಕೆ ಹೀಗಿದೆ; ‘ಒಬ್ಬ ರಾಜಕಾರಣಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಬಹುದು. ಆದರೆ ಮತದಾರ ಎರಡು ಬಾರಿ ಮತ ಚಲಾಯಿಸುವಂತಿಲ್ಲ. ರಾಜಕಾರಣಿ ಜೈಲಿನಲ್ಲಿದ್ದುಕೊಂಡೇ ಚುನಾವಣೆ ಸ್ಪರ್ಧಿಸಬಹುದು. ಮತದಾರ ಜೈಲಿನಲ್ಲಿದ್ದು ಮತ ಚಲಾಯಿಸುವಂತಿಲ್ಲ. ಜೈಲಿಗೆ ಹೋಗಿ ಬಂದವರಿಗೆ ಸರ್ಕಾರಿ ಕೆಲಸ ಸಿಗಲ್ಲ. ಆದರೆ ಜೈಲು ಶಿಕ್ಷೆ ಅನುಭವಿಸಿದ ರಾಜಕಾರಣಿ ಚುನಾವಣೆಗೆ ಸ್ಪರ್ಧಿಸಬಹುದು, ಪ್ರಧಾನಿ, ವಿತ್ತ ಮಂತ್ರಿಯೂ ಆಗಬಹುದು. ಹಾಗೇ ಯಾವುದೇ ಸಣ್ಣ ಸರ್ಕಾರಿ ಕೆಲಸಕ್ಕೂ ಪದವಿ ಪಡೆಯಬೇಕು. ಅದೇ ಅನಕ್ಷರಸ್ಥ ರಾಜಕಾರಣಿ ಪ್ರಧಾನಿ, ಹಣಕಾಸು ಸಚಿವನೂ ಆಗಬಹುದು. ನೀವು ಇದನ್ನು ಒಪ್ಪುವುದಾದರೆ ಶೇರ್ ಮಾಡಿ’ ಎಂದು ಹೇಳಲಾಗಿದೆ.
undefined
ಆದರೆ ನಿಜಕ್ಕೂ ಪಿಚ್ಬೆೃ ಭಾರತದ ರಾಜಕೀಯ ವ್ಯವಸ್ಥೆಯನ್ನು ಬದಲಿಸಬೇಕು ಎಂದು ಹೇಳಿಕೆ ನೀಡಿದ್ದು ನಿಜವೇ ಎಂದು ಬೂಮ್ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಏಕೆಂದರೆ ಈ ಹೇಳಿಕೆಯಲ್ಲಿ ಅನೇಕ ವ್ಯಾಕರಣ ದೋಷಗಳಿವೆ. ಸುಂದರ್ ಎನ್ನುವುದನ್ನೇ ತಪ್ಪಾಗಿ ಬರೆಯಲಾಗಿದೆ.
ಅಲ್ಲದೆ ಗೂಗಲ್‌ನಲ್ಲಿ ಸಚ್‌ರ್ ಮಾಡಿದಾಗ ಈ ಕುರಿತ ಯಾವುದೇ ವರದಿಯಾಗಿಲ್ಲ. ಅದಕ್ಕೂ ಮೇಲಾಗಿ ಪಿಚ್ಬೆೃ ಅಧಿಕೃತ ಫೇಸ್‌ಬುಕ್ ಖಾತೆಯನ್ನೇ ಹೊಂದಿಲ್ಲ. ಈ ಹಿಂದೆ ಕೂಡ ಪಿಚ್ಬೆೃ ಹೆಸರನ್ನು ಬಳಸಿಕೊಂಡು ಅನೇಕ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಸುದ್ದಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ಹೀಗೆ ಜನಪ್ರಿಯರ ಹೆಸರನ್ನು ಬಳಸಿ ಸುಳ್ಳುಸುದ್ದಿ ಹರಡಲಾಗುತ್ತದೆ.