ಉಗ್ರ ಆಶ್ರಯತಾಣ: ಅಸ್ಸಾಂನ ಮದರಸಾ ಕೆಡವಿದ್ದು ಮುಸ್ಲಿಮರು

Published : Sep 08, 2022, 08:37 AM ISTUpdated : Sep 08, 2022, 08:40 AM IST
ಉಗ್ರ ಆಶ್ರಯತಾಣ: ಅಸ್ಸಾಂನ ಮದರಸಾ  ಕೆಡವಿದ್ದು ಮುಸ್ಲಿಮರು

ಸಾರಾಂಶ

ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಆಸ್ಸಾಂನ ಗೋಲ್ಪಾರಾ ಮದರಸಾವನ್ನು ಧ್ವಂಸಗೊಳಿಸುವಲ್ಲಿ ಮುಸ್ಲಿಮರೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಗುವಾಹಟಿ: ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಆಸ್ಸಾಂನ ಗೋಲ್ಪಾರಾ ಮದರಸಾವನ್ನು ಧ್ವಂಸಗೊಳಿಸುವಲ್ಲಿ ಮುಸ್ಲಿಮರೆ ಪ್ರಮುಖ ಪಾತ್ರ ವಹಿಸಿದ್ದಾರೆ. ಮದರಸಾದ ಶಿಕ್ಷಕ ಜಲಾಲುದ್ದೀನ್‌ಗೆ ಉಗ್ರ ಸಂಘಟನೆ ಅಲ್‌ಖೈದಾ (Al-Qaeda) ನಂಟಿರುವ ವಿಷಯ ತಿಳಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಉಗ್ರ ಚಟುವಟಿಕೆ ಹಿನ್ನಲೆ ಹೊಂದಿರುವ ಮದರಸಾವನ್ನು ಅಲ್ಪಸಂಖ್ಯಾತರೆ ಧ್ವಂಸಗೊಳಿಸಿದ ಮೊದಲ ನಿದರ್ಶನ ಇದಾಗಿದೆ. ಸ್ಥಳೀಯರಿಗೆ ಮದರಸಾ ಮೇಲೆ ನಿಗಾ ಇಡುವಂತೆ ಪೊಲೀಸರು ಸೂಚಿಸಿದ್ದರು. ಉಗ್ರ ಚಟುವಟಿಕೆ ಬಗ್ಗೆ ತಿಳಿದ ಕೂಡಲೇ ಸ್ಥಳೀಯ ಮುಸ್ಲಿಮರೆ (Muslim) ಮದರಸಾ ಧ್ವಂಸಗೊಳಿಸಿದ್ದಾರೆ. ಉಗ್ರ ಚಟುವಟಿಕೆ ಹಿನ್ನಲೆಯಲ್ಲಿ ಕಳೆದ 3 ತಿಂಗಳಲ್ಲಿ ಧ್ವಂಸಗೊಂಡ 4ನೇ ಮದರಸಾ ಇದಾಗಿದೆ.

ಆಸ್ಸಾಂನ ಗೋಲ್ಪಾರಾ (Goalpara district) ಜಿಲ್ಲೆಯ ಮದರಸಾವೊಂದರಲ್ಲಿ(madrasa) ಅಕ್ರಮ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದದ್ದು ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಮದರಸಾ ಅದರ ಪಕ್ಕದ್ದಲ್ಲಿದ್ದ ಮನೆಯೊಂದನ್ನು ಮಂಗಳವಾರ(ಸೆಪ್ಟಂಬರ್‌6) ಧ್ವಂಸಗೊಳಿಸಿದ್ದರು. ಪ್ರಕರಣ ಸಂಬಂಧ ಜಲಾಲುದ್ದೀನ್‌ ಎಂಬಾತನನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ಜೊತೆಗೆ ಇದೇ ಪ್ರಕರಣದಲ್ಲಿ ಬಾಂಗ್ಲಾ ಮೂಲದ ಇಬ್ಬರು ಉಗ್ರರು ಪರಾರಿಯಾಗಿದ್ದರು. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯರು ಮನೆ ಮತ್ತು ಮದರಸಾ ಧ್ವಂಸಗೊಳಿಸಿದ್ದರು.

AIMPLB vs BJP ಮದರಸಾ ಸಮೀಕ್ಷೆ ನಿಯಮ ಮಠದ ಮೇಲಿಲ್ಲ ಯಾಕೆ? ಮುಸ್ಲಿಂ ಲಾ ಬೋರ್ಡ್ ಪ್ರಶ್ನೆ!

ಇದಕ್ಕೂ ಮೊದಲು ಬಾಂಗ್ಲಾದೇಶದ ಉಗ್ರ ಸಂಘಟನೆ (Bangladeshi terrorist organization) ಅನ್ಸರುಲ್‌ ಬಾಂಗ್ಲಾ ಟೀಮ್‌ನ ಇಬ್ಬರು ಉಗ್ರರಿಗೆ 4 ವರ್ಷಗಳ ಕಾಲ ನೆಲೆ ನೀಡಿದ್ದ ಅಸ್ಸಾಮಿನ ಬಾರ್‌ಪೇಟಾದಲ್ಲಿರುವ (Barpeta) ಮದರಸಾವನ್ನು ಜಿಲ್ಲಾಡಳಿತವು ಧ್ವಂಸಗೊಳಿಸಿತ್ತು. ‘ಶೈಖುಲ… ಹಿಂದ್‌ ಮದ್ಮುದಲ… ಹಸನ್‌ ಜಮೀಉಲ… ಹುದಾ ಇಸ್ಲಾಮಿಕ್‌ ಅಕಾಡೆಮಿ’ ಎಂಬ ಈ ಮದರಸಾದಲ್ಲಿ ಬಾಂಗ್ಲಾದೇಶಿ ಉಗ್ರ ಮೊಹಮ್ಮದ್‌ ಸುಮನ್‌ ಶಿಕ್ಷಕನಾಗಿ ಸೇರಿ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಬಾಂಗ್ಲಾದೇಶದ ನಿರ್ಬಂಧಿತ ಉಗ್ರ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ಟೀಮ್‌ ಸದಸ್ಯನಾಗಿರುವ ಸುಮನ್‌ ಅಲ್‌ಖೈದಾ ಬೆಂಬಲಿತ ಸ್ಲೀಪರ್‌ ಸೆಲ್‌ಗಳನ್ನು ಆಸ್ಸಾಮಿನಲ್ಲಿ ಸಕ್ರಿಯವಾಗಿಟ್ಟಿದ್ದ. ಕಳೆದ ಮಾರ್ಚ್ನಲ್ಲಿ ಈತನನ್ನು ಬಂಧಿಸಲಾಗಿತ್ತು. ಈ ಹಿಂದೆ ಮದರಸಾದ ಪ್ರಾಂಶುಪಾಲರು, ಶಿಕ್ಷಕ ಹಾಗೂ ಇನ್ನೋರ್ವ ಸಿಬ್ಬಂದಿಯನ್ನು ಕೀಡಾ ಉಗ್ರಕೃತ್ಯಗಳಿಗೆ ನೆರವು ನೀಡಿದ್ದಕ್ಕೆ ಬಂಧಿಸಲಾಗಿತ್ತು.

ಉಗ್ರರಿಗೆ ಆಶ್ರಯ ನೀಡಿದ್ದಲ್ಲದೇ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದಕ್ಕೆ ಮದರಸಾವನ್ನು ಧ್ವಂಸಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಅಕ್ರಮವಾಗಿ ಮದರಸಾ ನಡೆಸುತ್ತಿದ್ದ ಇಬ್ಬರು ಸಹೋದರರಾದ ಅಕ್ಬರ್‌ ಅಲಿ ಹಾಗೂ ಅಬ್ದುಲ್‌ ಕಲಾಂ ಅಜಾದ್‌ರನ್ನು ಕೂಡಾ  ಪೊಲೀಸರು ಬಂಧಿಸಿದ್ದರು. ಇಬ್ಬರು ಸಹೋದರರು ಅಲ್‌ಖೈದಾ ಬೆಂಬಲಿತ ಜಿಹಾದಿ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಬಂಧಿತರ ಕಾರನ್ನು ಕೂಡಾ ವಶಪಡಿಸಿಕೊಳ್ಳಲಾಗಿತ್ತು.

Madrassa Survey: ಯುಪಿಯಲ್ಲಿ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ: ಓವೈಸಿ ವಿರೋಧ


ಪ್ರತ್ಯೇಕ ಧಾರ್ಮಿಕ ಶಿಕ್ಷಣ ಮಂಡಳಿ ರಚನೆಗೆ ವಿರೋಧ
ಮದರಸಾ ಶಿಕ್ಷಣ ಪದ್ಧತಿ ಬದಲಾವಣೆಗೆ ಪ್ರತ್ಯೇಕ ಧಾರ್ಮಿಕ ಶಿಕ್ಷಣ ಮಂಡಳಿ ರಚನೆಯೂ ಬಿಜೆಪಿಯ ರಾಜಕೀಯ ಪ್ರೇರಿತ ವಿಚಾರವಾಗಿದ್ದು, ಇದನ್ನು ಕೈಬಿಡಬೇಕು ಎಂದು ಆಲ್‌ ಇಂಡಿಯಾ ಇಮಾಮ್ ಕೌನ್ಸಿಲ್ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್‌ನ  ರಾಜ್ಯ ಸಮಿತಿ ಸದಸ್ಯ ಜಾಫರ್‌ ಸಾದಿಕ್‌ ಫೈಝಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಮದರಸಾ ಶೈಕ್ಷಣಿಕ ಪದ್ಧತಿಯಲ್ಲಿ ಬದಲಾವಣೆಗೆ ಮಂಡಳಿ ರಚಿಸುವುದಾಗಿ ಹೇಳಿದ್ದಾರೆ. ಆದರೆ, ಯಾವುದೇ ಸ್ಪಷ್ಟ ಮಾಹಿತಿ, ಸುತ್ತೋಲೆ ಬಂದಿಲ್ಲ. ಇದರಿಂದ ನಮ್ಮಲ್ಲಿ ಗೊಂದಲವಾಗಿದೆ ಎಂದರು.

ಕೌನ್ಸಿಲ್ ಅಧ್ಯಕ್ಷ ಮೌಲಾನಾ ಅತೀಕುರ್‌ ರೆಹ್ಮಾನ್‌ ಅಶ್ರಫಿ, ‘ಸಚಿವರ ನಿರ್ಧಾರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಆಗುವಂತಿದೆ. ಮದರಸಾದಲ್ಲಿ ದಿನಕ್ಕೆ ಬೆಳಗ್ಗೆ ಹಾಗೂ ಸಂಜೆ ಮಾತ್ರ ಎರಡು ಗಂಟೆಗಳ ಕಾಲ ಧಾರ್ಮಿಕ ಪ್ರಾರ್ಥನೆ ಬೋಧಿಸಲಾಗುತ್ತದೆ. ಮದರಸಾ ಶಿಕ್ಷಣದ ಪಠ್ಯಕ್ರಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಸರಿಯಲ್ಲ. ಸಮೀಕ್ಷೆ ನಡೆಸಿ ಮದರಸಾ ಅಭಿವೃದ್ಧಿ, ಮೂಲಭೂತ ಸೌಕರ್ಯ ಒದಗಿಸಲು ಬಜೆಟ್‌ನಲ್ಲಿ ಅನುದಾನ ಇಡುವ ಬದಲಾಗಿ ಬೇರೆ ರೀತಿಯಲ್ಲಿ ಮೂಗು ತೂರಿಸುವ ಕೆಲಸ ಸರಿಯಲ್ಲ. ಸರ್ಕಾರ ನಿರ್ಧಾರ ಹಿಂಪಡೆಯಬೇಕು’ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ