ಸೇನಾ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಯ ವಾರ್ಡ್‌ಗೆ ಆನೆಗಳು ನುಗ್ಗಿವೆ. ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ನುಗ್ಗುವ ಅನೇಕ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ವೈರಲ್ ಆಗುತ್ತಿರುತ್ತದೆ. ಇದು ನಿವಾಸಿಗಳಲ್ಲಿ ಸಾಕಷ್ಟು ಭೀತಿ ಉಂಟು ಮಾಡುತ್ತದೆ. ಇಂತಹದ್ದೊಂದು ಘಟನೆಯಲ್ಲಿ ಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ (Cantnment) ಜಿಲ್ಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ (Army Cantonment Hospital) ಆನೆಗಳು ನುಗ್ಗಿ ನಡೆಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಪ್ರಾಣಿಗಳು ಆಸ್ಪತ್ರೆಯ ಕಟ್ಟಡದ ಸುತ್ತಲೂ ಮುಕ್ತವಾಗಿ ಚಲಿಸುವುದನ್ನು ಕಾಣಬಹುದು. ಈ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯ ಒಳಗಿದ್ದ ಜನರು ದೂರದಿಂದಲೇ ಆನೆಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಸಹ ನಾವು ನೋಡಬಹುದು.
ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಬಿನ್ನಗುರಿ ಸೇನಾ ಶಿಬಿರದ ಆಸ್ಪತ್ರೆಗೆ ಮೂರು ಆನೆಗಳು ನುಗ್ಗಿವೆ ಎಂದು ತಿಳಿದುಬಂದಿದೆ. ಘಟನೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಒಂದು ವೀಡಿಯೊದಲ್ಲಿ, ಆನೆಗಳಲ್ಲಿ ಒಂದು ವಾರ್ಡ್ ಬಾಗಿಲಿನ ಕಡೆಗೆ ವಾಲುತ್ತಿರುವುದು ಕಂಡುಬಂದಿದೆ ಮತ್ತು ಅದು ಹೇಗಾದರೂ ಕೊಠಡಿಯನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆನೆಗಳು ಕಟ್ಟಡದಲ್ಲಿ ಸ್ವಚ್ಛಂದವಾಗಿ ಅಲೆದಾಡುತ್ತಿದ್ದು, ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುವುದು ಕಂಡುಬಂದಿದೆ. ಕೊನೆಗೆ ಆನೆಯೊಂದು ಕ್ಯಾಂಟೀನ್‌ನ ಗಾಜುಗಳನ್ನು ಒಡೆದು ಗೋಧಿ ಹಿಟ್ಟಿನ ಪ್ಯಾಕೆಟ್ ಅನ್ನು ತೆಗೆದುಕೊಂಡು ಹೋಗಿದೆ.
ಇದನ್ನು ಓದಿ: Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ
: When Gajraj entered inside Binnaguri hospital in and then got confused as which human doctor chamber to knock, who to visit. 🙂 pic.twitter.com/MjYKEDh5pB
— Tamal Saha (@Tamal0401)ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಸಹ ಈ ಘಟನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘’ಜಲ್ಪೈಗುರಿ ಕಂಟೋನ್ಮೆಂಟ್‌ನಲ್ಲಿ ಕೋಣೆಯಲ್ಲಿ ಆನೆಗಳು’’ ಎಂಬ ಕ್ಯಾಪ್ಷನ್ ಹಾಕಿಕೊಂಡಿರುವ ಸುಶಾಂತ ನಂದಾ, ಇದರ 3 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಜನರು ಲೈಕ್ ಮಾಡಿದ್ದು, ಸುಮಾರು 60 ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಇದೇ ಘಟನೆಯ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ಸ್ಟಾಗ್ರಾಮ್ (Instagram), ಟ್ವಿಟ್ಟರ್ (Twitter) ಸೇರಿ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನು ಓದಿ: ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ: ರಕ್ಷಣಾ ಪಡೆಯಿಂದ ಶೋಧ ಕಾರ್ಯಾಚರಣೆ
Elephants in the room…
From Jalpaiguri Cantonment. pic.twitter.com/ipbFR8bthG
ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ನೆಟ್ಟಿಗರು ವಿಭಿನ್ನ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ, ಹಲವರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನು, ಕೆಲವರು ಆನೆಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವುದು ಅರಣ್ಯನಾಶದ ಪರಿಣಾಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಅರಣ್ಯ ನಾಶ ಮತ್ತು ಅರಣ್ಯ ಹಾಗೂ ಅವರ ಮನೆಗಳ ನಾಶದ ಫಲಿತಾಂಶ" ಎಂದು ಬಳಕೆದಾರರು ಬರೆದಿದ್ದಾರೆ.