ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ

Published : Nov 09, 2025, 09:08 PM IST
Crime scene

ಸಾರಾಂಶ

ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ, ದೃಶ್ಯ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆಗಲು ಎಲ್ಲಾ ಪ್ರಯತ್ನ ಮಾಡಿದ್ದಾನೆ. ಈತನ ಪ್ಲಾನ್ ಕೆಲ ದಿನಗಳಿಂದ ಯಶಸ್ವಿ ಕೂಡ ಆಗಿದೆ. ಆದರೆ ಒಂದು ಕಾರಣದಿಂದ ಅರೆಸ್ಟ್ ಆದ.

ಪುಣೆ (ನ.09) ದೃಶ್ಯ ಸಿನಿಮಾ ಕೆಲ ಕೊಲೆಗಡುಕರಿಗೆ ಮಾರ್ಗದರ್ಶಿಯಾಗುತ್ತಿದೆಯಾ? ಕೆಲ ಘಟನೆಗಳು ಹೌದು ಎನ್ನುತ್ತಿದೆ. ದೃಶ್ಯ ಸಿನಿಮಾ ರೀತಿಯ ಹತ್ಯೆ, ದೃಶ್ಯ ಸಿನಿಮಾ ನೋಡಿ ಹತ್ಯೆ ಸೇರಿದಂತೆ ಹಲವು ಘಟೆಗಳು ಬೆಳಕಿಗೆ ಬಂದಿದೆ. ಇದೀಗ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿ ಬರೋಬ್ಬರಿ ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿದ್ದಾನೆ. ಹತ್ಯೆ ಬಳಿಕ ಯಾವುದೇ ಸುಳಿವು ಸಿಗದೆ ಬಚಾವ್ ಆಗುವುದು ಹೇಗೆ ಎಂಬುದು ತಿಳಿಯಲು ಸಿನಿಮಾ ನೋಡಿದ್ದಾನೆ. ಬಳಿಕ ತಾನೇ ಒಂದು ದೃಶ್ಯ ಸಿನಿಮಾ ರೀತಿಯಲ್ಲಿ ಕತೆ ಹೆಣೆದಿದಿದ್ದಾನೆ. ಅದೇ ಕತೆ ಪ್ರಕಾರ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ. ಯಾವುದೇ ಸುಳಿವು ಸಿಗದಂತೆ ಸಾಕ್ಷ್ಯಗಳನ್ನು ನಾಶ ಮಾಡಿ ಕಳೆದ ಕೆಲ ದಿನಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಈತ ಅರೆಸ್ಟ್ ಆದ ಘಟನೆ ಪುಣೆಯಲ್ಲಿ ನಡೆದಿದೆ. ಈ ಪಾಪಿಯ ಕತೆ ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ.

ಗಂಡನ ಮಾಸ್ಟರ್ ಪ್ಲಾನ್‌ಗೆ ಸಾಥ್ ಕೊಟ್ಟ ದೃಶ್ಯ ಸಿನಿಮಾ

ಪುಣೆಯ ಶಿವಾನೆ ಏರಿಯಾದಲ್ಲಿ ಸಮೀರ್ ಜಾದವ್ ಹಾಗೂ ಆತನ ಪತ್ನಿ ಅಂಜಲಿ ಸಮೀರ್ ಜಾದವ್ ವಾಸವಿದ್ದರು. ಇವರಿಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಅಂಜಲಿ ವಯಸ್ಸು 38. ಅಂಜಲಿ ಖಾಸಗಿ ಶಾಲೆಯಲ್ಲಿ ಟೀಚರ್, ಈ ಸಮೀರ್ ಜಾದವ್ ಸ್ವಂತ ಗ್ಯಾರೇಜ್ ನಡೆಸುತ್ತಿದ್ದ. ಪತ್ನಿಯನ್ನು ಹತ್ಯೆ ಮಾಡಲು ಕಳೆದ ಕೆಲ ತಿಂಗಳುಗಳಿಂದ ಈ ಸಮೀರ್ ಜಾದವ್ ಪ್ಲಾನ್ ಮಾಡಿದ್ದ. ಇದಕ್ಕಾಗಿ ಒಂದೊಂದೆ ತಯಾರಿಗಳನ್ನು ಮಾಡುತ್ತಿದ್ದ. ಈ ಪೈಕಿ ಮೊದಲ ಕಲೆಸ ಅಜಯ್ ದೇವಗನ್ ನಡಿಸಿದ ಹಿಂದಿ ದೃಶ್ಯಂ ಸಿನಿಮಾ. ಈ ಸಿನಿಮಾವನ್ನು ನಾಲ್ಕು ಬಾರಿ ನೋಡಿ ಹತ್ಯೆ ಹಾಗೂ ಹತ್ಯೆ ಬಳಿಕ ಎಸ್ಕೇಪ್ ಆಗುವುದು ಹೇಗೆ ಎಂದು ಪ್ಲಾನ್ ಮಾಡಿಕೊಂಡಿದ್ದಾನೆ.

ಸಮೀರ್ ಜಾದವ್ ದೃಶ್ಯಂ ಸೀನ್

ಪತ್ನಿಯ ಹತ್ಯೆ ಮಾಡಲು ಸಮೀರ್ ಜಾದವ್ ದೃಶ್ಯಂ ಸಿನಿಮಾ ರೀತಿಯಲ್ಲಿ ಕತೆಯೊಂದನ್ನು ಹೆಣೆದಿದ್ದಾನೆ. ಈ ಕತೆಯ ಪ್ರಕಾರ ತನ್ನ ಗ್ಯಾರೇಟ್ ಪಕ್ಕದಲ್ಲಿ ದೊಡ್ಡ ಗೋಡೌನ್ ಬಾಡಿಗೆಗೆ ಪಡೆದಿದ್ದಾನೆ. ಬಳಿಕ ಅಲ್ಲಿ ಸೀಸ, ಕಬ್ಬಿಣ ಕರಗಿಸುವ ಬಾಯ್ಲರ್ ರೆಡಿ ಮಾಡಿದ್ದಾನೆ. ಇದು ತನ್ನ ಗ್ಯಾರೇಜ್ ಹಾಗೂ ಕೆಲಸಕ್ಕೂ ಬಳಕೆಯಾಗುವ ರೀತಿಯಲ್ಲಿ ರೆಡಿ ಮಾಡಿದ್ದಾನೆ. ಬಳಿಕ ಪತ್ನಿಯನ್ನು ತನ್ನ ಹೊಸ ಗೋಡೌನ್ ನೋಡಲು ಬಾ ಎಂದು ಕರೆದುಕೊಂಡು ಹೋಗಿದ್ದಾನೆ.

ಮಕ್ಕಳಿಗೆ ದೀಪಾವಳಿ ರಜೆ ಕಾರಣದಿಂದ ಊರಿಗೆ ತೆರಳಿದ್ದರು.ಗಂಡ ಉದ್ಯಮದಲ್ಲಿ ಬೆಳೆಯುತ್ತಿದ್ದಾನೆ ಎಂದು ಪತ್ನಿ ಹಿರಿ ಹಿರಿ ಹಿಗ್ಗಿದ್ದಳು. ಹೀಗಾಗಿ ಅಂಜಲಿ ಜಾದವ್ ಮರು ಮಾತಿಲ್ಲದೆ ಗಂಡನ ಜೊತೆ ಹೊಸ ಗೋಡೌನ್ ನೋಡಲು ಹೋಗಿದ್ದಾಳೆ. ಗೋಡೌನ್ ಒಳಗೆ ಬಂದ ಬಳಿಕ ಈತ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಈಕೆಯ ಮೃತದೇಹವನ್ನು ಸೀಸ, ಕಬ್ಬಿಣ ಕರಗಿಸುವ ಬ್ರಾಯ್ಲರ್‌ನಲ್ಲಿ ಸುಟ್ಟು ಭಸ್ಮಮಾಡಿದ್ದಾನೆ. ಈಕೆಯ ಭಸ್ಮವನ್ನು ಹತ್ತಿರದ ನದಿಗೆ ಚೆಲ್ಲಿದ್ದಾನೆ. ಅಲ್ಲಿಗೆ ಈತನ ದೃಶ್ಯಂ ಸಿನಿಮಾದ ಇಂಟರ್‌ವಲ್.

ಇಂಟವಲ್ ಬಳಿಕ ರಣರೋಚಕ

ಸಮೀರ್ ಜಾದವ್ ದೃಶ್ಯಂ ಸಿನಿಮಾ ಸ್ಪೂರ್ತಿಯಾಗಿಟ್ಟುಕೊಂಡು ಹೆಣೆದ ಕತೆಯಲ್ಲಿ ಕೆಲ ಟ್ವಿಸ್ಟ್ ಕೂಡ ನೀಡಿದ್ದಾನೆ. ಪತ್ನಿಯ ಹತ್ಯೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ಇತ್ತ ಅಂಜಲಿ ಫೋನ್‌ನಿಂದ ಹತ್ಯೆಗೂ ಮೊದಲು ಪತ್ನಿಗೆ ಗೊತ್ತಿಲ್ಲದ ರೀತಿ ತನ್ನ ಗೆಳೆಯನಿಗೆ ಐ ಲವ್ ಯೂ ಎಂದು ಮೆಸೇಜ್ ಕಳುಹಿಸಿದ್ದಾನೆ. ಪೊಲೀಸರು ಮನೆಯಲ್ಲಿದ್ದ ಅಂಜಲಿ ಫೋನ್ ವಶಕ್ಕೆ ಪಡೆದಿದ್ದಾರೆ. ತನಿಖೆ ಆರಂಭಿಸಿದ್ದಾನೆ. ಪೊಲೀಸರಿಗೆ ಯಾವ ಸುಳಿವು ಸಿಗಲಿಲ್ಲ. ಸಿಸಿಟಿವಿ ದೃಶ್ಯಗಳು ಲಭ್ಯವಿರಲಿಲ್ಲ. ಹೀಗಾಗಿ ತನಿಖೆ ನಿಧಾನವಾಗಿ ಸಾಗಿತ್ತು. ಇದರ ನಡುವೆ ಸಮೀರ್ ಜಾದವ್ ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನು ಪತ್ತೆ ಹಚ್ಚುವಂತೆ ಮನವಿ ಮಾಡುತ್ತಲೇ ಬಂದಿದ್ದಾನೆ. ಈತನ ಬಳಿ ಪೊಲೀಸರು ಕೆಲ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಪತ್ನಿಗೆ ಬೇರೊಬ್ಬನ ಜೊತೆ ಅಫೇರ್ ಇರುವ ಅನುಮಾನವಿದೆ. ಆದರೆ ಆಕೆಯ ಬಳಿ ಈ ಕುರಿತು ಕೇಳಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಆಕೆಯ ಫೋನ್ ಪರಿಶೀಲಿಸಿದಾಗ ಕೆಲ ಸಂದೇಶಗಳು ಪತ್ತೆಯಾಗಿದೆ. ಅಲ್ಲಿಗೆ ಪೊಲೀಸರು ಸಮೀರ್ ಗೆಳೆಯನ ಮೇಲೆ ಅನುಮಾನಗಳು ಮೂಡತೊಡಗಿತ್ತು. ಆದರೆ ಈ ಸಮೀರ್ ಪದೇ ಪದೇ ಪೊಲೀಸ್ ಠಾಣೆಗೆ ತೆರಳಿ ತನಿಖೆ ಕುರಿತು ವಿಚಾರಿಸುವಾಗ ಪೊಲೀಸರಿಗೆ ಅನುಮಾನ ಕಾಡಿದೆ.

ಪೊಲೀಸರು ಸಮೀರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರಂಭಿಕ ಹಂತದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸಮೀರ್ ಉತ್ತರ ನೀಡಿ ತನಿಖೆಯ ದಾರಿಯನ್ನೇ ತಪ್ಪಿಸಿದ್ದ. ಪೊಲೀಸರಿಗೂ ಕೆಲ ಸಂದರ್ಭದಲ್ಲಿ ಈತ ಅಲ್ಲ ಅನ್ನೋ ಗೊಂದಲಗಳು ಮೂಡುವಷ್ಟರ ಮಟ್ಟಿಗೆ ನಟಿಸಿದ್ದ. ಆದರೂ ಪೊಲೀಸರು ಅನುಮಾನ ತೀವ್ರಗೊಂಡಿತ್ತು. ಸರಿಯಾದ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.

ಸಮೀರ್ ಜಾದವ್‌ಗೆ ಇತ್ತು ಅಫೇರ್

ಸಮೀರ್ ಜಾದವ್‌ಗೆ ಯುವತಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇತ್ತು. ಪತ್ನಿಯನ್ನು ದೂರ ಮಾಡಿ ಆಕೆಯ ಜೊತೆ ಸಂಸಾರ ನಡೆಸಲು ನಿರ್ಧರಿಸಿದ್ದ. ಆದರೆ ಪತ್ನಿಯನ್ನು ದೂರ ಮಾಡುವುದು ಕಷ್ಟ. ಹೀಗಾಗಿ ಮುಗಿಸಿ ಬಿಡಲು ಪ್ಲಾನ್ ಮಾಡಿದ್ದಾನೆ. ಆದರೆ ಪದೇ ಪದೇ ಪೊಲೀಸ್ ಠಾಣೆಗೆ ತೆರಲಿ ವಿಚಾರಿಸುತ್ತಿದ್ದ ಸಮೀರ್ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇವು ಕೆರೆಯಲ್ಲಿ ಅರಳಿದ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್