ಸಿಗದ ಟಿಕೆಟ್‌, ಕಾಂಗ್ರೆಸ್‌ನಲ್ಲಿ ಬಂಡಾಯದ ದನಿ!

Published : May 31, 2022, 07:48 AM IST
ಸಿಗದ ಟಿಕೆಟ್‌, ಕಾಂಗ್ರೆಸ್‌ನಲ್ಲಿ ಬಂಡಾಯದ ದನಿ!

ಸಾರಾಂಶ

* ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ: ಕಾಂಗ್ರೆಸ್ಸಲ್ಲಿ ಬಂಡಾಯದ ದನಿ * ನಗ್ಮಾ, ಪವನ್‌ ಖೇರಾ, ಕೃಷ್ಣಂ ಅಸಮಾದಾನ

ನವದೆಹಲಿ(ಮೇ.31): ಮುಂಬರುವ ರಾಜ್ಯಸಭಾ ಚುನಾವಣೆಗೆ ಪಕ್ಷದ 10 ಅಭ್ಯರ್ಥಿಗಳ ಹೆಸರು ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ದೊಡ್ಡಮಟ್ಟದಲ್ಲಿ ಅಪಸ್ವರ ಕೇಳಿಬಂದಿದೆ. ದಶಕಗಳಿಂದ ಪಕ್ಷಕ್ಕೆ ನಿಷ್ಟಾವಂತರಾಗಿದ್ದವರಿಗೆ ಮಣೆ ಹಾಕಲಾಗಿದೆ ಎಂದು ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಕ್ಷ ಆಡಳಿತವಿರುವ ರಾಜಸ್ಥಾನದಲ್ಲಿ ಎಲ್ಲಾ 3 ಸ್ಥಾನಗಳನ್ನೂ ಹೊರ ರಾಜ್ಯದವರಿಗೆ ನೀಡಿರುವುದಕ್ಕೂ ಕೂಡಾ ಸ್ಥಳೀಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ‘ಬಹುಷಃ ನನ್ನ ತಪಸ್ಸಿನಲ್ಲಿ ಏನೋ ಕಡಿಮೆಯಾಗಿರಬಹುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನು ಮಾಜಿ ನಟಿ ನಗ್ಮಾ ಪ್ರತಿಕ್ರಿಯಿಸಿ, ‘2003-04ರಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದ ವೇಳೆಯಲ್ಲಿ ನಾನು ಕಾಂಗ್ರೆಸ್‌ ಸೇರಿದ್ದೆ. ಆಗ ಸ್ವತಃ ಸೋನಿಯಾ ಗಾಂಧಿ ಅವರೇ ರಾಜ್ಯಸಭೆ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ 18 ವರ್ಷಗಳ ನನ್ನ ತಪಸ್ಸು ಇಮ್ರಾನ್‌ ಅವರ (ಮಹಾರಾಷ್ಟ್ರದಿಂದ ಟಿಕೆಟ್‌ ಪಡೆದ ಇಮ್ರಾನ್‌) ಮುಂದೆ ಕುಸಿದು ಬಿತ್ತು’ ಎಂದಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ‘ಪ್ರತಿಭೆಗಳನ್ನು ಹತ್ತಿಕ್ಕುವುದು ಆತ್ಮಹತ್ಯೆಯ ನಡೆ. ಸಲ್ಮಾನ್‌ ಖುರ್ಷಿದ್‌, ತಾರಿಖ್‌ ಅನ್ವರ್‌, ಗುಲಾಂ ನಬಿ ಆಜಾದ್‌ ಅವರ 40 ವರ್ಷಗಳ ತಪಸ್ಸು ಕೂಡಾ ಹುತಾತ್ಮವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ರಾಜಸ್ಥಾನದ ಎಲ್ಲಾ ಮೂರು ಸ್ಥಾನಗಳನ್ನು ಹೊರ ರಾಜ್ಯದವರಿಗೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಕಾಂಗ್ರೆಸ್‌, ಹಾಲಿ ಪಕ್ಷೇತರ ಸದಸ್ಯ ಸನ್ಯಂ ಲೋಧಾ, ಯಾವ ಕಾರಣಕ್ಕಾಗಿ ರಾಜ್ಯದ ಕಾಂಗ್ರೆಸ ನಾಯಕರನ್ನು ಬಿಟ್ಟು ಅನ್ಯರಾಜ್ಯದವರಿಗೆ ನೀಡಲಾಗಿದೆ ಎಂಬುದನ್ನು ಪಕ್ಷ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು