ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು

Kannadaprabha News   | Kannada Prabha
Published : Jan 13, 2026, 04:29 AM IST
Jagdeep Dhankhar

ಸಾರಾಂಶ

ಕಳೆದ ವಾರ 2 ಬಾರಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರನ್ನು ಸೋಮವಾರ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಜ.10ರಂದು ಶೌಚಾಲಯಕ್ಕೆ ಹೋದಾಗ 2 ಬಾರಿ ಅವರು ಪ್ರಜ್ಞಾಹೀನರಾದರು.

ನವದೆಹಲಿ: ಕಳೆದ ವಾರ 2 ಬಾರಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರನ್ನು ಸೋಮವಾರ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಜ.10ರಂದು ಶೌಚಾಲಯಕ್ಕೆ ಹೋದಾಗ 2 ಬಾರಿ ಅವರು ಪ್ರಜ್ಞಾಹೀನರಾದರು. ಸೋಮವಾರ ಆರೋಗ್ಯ ತಪಾಸಣೆಗಾಗಿ ಏಮ್ಸ್‌ಗೆ ತೆರಳಿದ್ದರು. ವೈದ್ಯರು ಕೆಲವು ಪರೀಕ್ಷೆಗಳನ್ನು ಬರೆದುಕೊಟ್ಟು, ದಾಖಲಾಗುವಂತೆ ಸೂಚಿಸಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಧನಕರ್ ಅವರು ಈ ಹಿಂದೆ ಕಛ್‌, ಉತ್ತರಾಖಂಡ, ಕೇರಳ, ದೆಹಲಿ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದೇ ರೀತಿ ದಿಢೀರ್‌ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಜು.21ರಂದು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ರಾಘವ ಚಡ್ಢಾ!

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಢಾ ಸೋಮವಾರ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ ಡೆಲಿವರಿ ಬಾಯ್‌ ಆಗಿ 1 ದಿನ ಕೆಲಸ ಮಾಡಿ ಗಮನ ಸೆಳೆದರು. ಈ ಮೂಲಕ ಗಿಗ್ ಕಾರ್ಮಿಕರ ದೈನಂದಿನ ವಾಸ್ತವಗಳ ಬಗ್ಗೆ ಅನುಭವ ಪಡೆದರು.ವಿತರಣಾ ಏಜೆಂಟ್‌ಗಳು ಎದುರಿಸುತ್ತಿರುವ ಒತ್ತಡಗಳು, ಅಪಾಯಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಗುರಿಯನ್ನುತಾವು ಹೊಂದಿದ್ದೇವೆ ಎಂದು ಚಡ್ಢಾ ಹೇಳಿದರು.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಬ್ಲಿಂಕಿಟ್‌ನ ಸಹಿ ಹಳದಿ ಸಮವಸ್ತ್ರವನ್ನು ಅವರು ಧರಿಸಿದ್ದು, ಹೆಲ್ಮೆಟ್ ಧರಿಸಿ, ವಿತರಣಾ ಏಜೆಂಟ್‌ನ ಮೋಟಾರ್‌ ಸೈಕಲ್‌ನಲ್ಲಿ ಹಿಂಬದಿ ಸವಾರನಾಗಿ ಸಂಚರಿಸುವುದನ್ನು ಕಾಣಬಹುದಾಗಿದೆ.

ಕರೂರು ಕಾಲ್ತುಳಿತ ಕೇಸ್‌: 7 ತಾಸು ವಿಜಯ್‌ಗೆ ಸಿಬಿಐ ಬಿಸಿ

ಪಿಟಿಐ ನವದೆಹಲಿಕಳೆದ ವರ್ಷ ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ಸಮಾವೇಶದಲ್ಲಿ 41 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ, ಟಿವಿಕೆ ನಾಯಕ ವಿಜಯ್‌ ಅವರು ಸೋಮವಾರ ದೆಹಲಿಯ ಸಿಬಿಐ ಕಚೇರಿ ಎದುರು ವಿಚಾರಣೆಗೆ ಹಾಜರಾದರು ಹಾಗೂ 7 ತಾಸು ವಿಚಾರಣೆ ಎದುರಿಸಿದರು.

ಈ ವೇಳೆ ಅವರು, ‘ಘಟನೆಗೆ ನಾವು ಕಾರಣರಲ್ಲ. ಆಡಳಿತದ ವೈಫಲ್ಯವೇ ಕಾರಣ’ ಎಂದು ಹೇಳಿದರು ಎನ್ನಲಾಗಿದೆ. ವಿಚಾರಣೆ ಅಪೂರ್ಣವಾಗಿದ್ದು, ಶೀಘ್ರ ಮತ್ತೆ ಬುಲಾವ್ ಹೊರಡಿಸಲಾಗುವುದು ಎಂದು ಸಿಬಿಐ ಮೂಲಗಳು ಹೇಳಿವೆ.ಚೆನ್ನೈನಿಂದ ಬೆಳಗ್ಗೆ 7 ಗಂಟೆಗೆ ಖಾಸಗಿ ವಿಮಾನ ಮೂಲಕ ದೆಹಲಿಗೆ ಆಗಮಿಸಿದ ವಿಜಯ್‌ 11:29ಕ್ಕೆ ಸಿಬಿಐ ಕಚೇರಿಗೆ ಬಂದರು. ಈ ವೇಳೆ ತಮ್ಮ ಪಕ್ಷದ ನಾಯಕರೂ ಸಹ ವಿಜಯ್‌ ಅವರೊಂದಿಗೆ ದೆಹಲಿಗೆ ಪ್ರಯಾಣಿಸಿದರು. ಸಂಜೆ 6.30ರವರೆಗೆ ವಿಚಾರಣೆ ನಡೆಯಿತು.

ವಿಜಯ್‌ ಅವರ ಅಪಾರ ಅಭಿಮಾನಿಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದ ಕಾರಣ ಸಿಬಿಐ ಕಚೇರಿ ಎದುರು, ದಿಲ್ಲಿ ಪೊಲೀಸರು ಮತ್ತು ಕೇಂದ್ರೀಯ ಪೊಲೀಸರು ಕಚೇರಿ ಎದುರು ನೆರೆದಿದ್ದರು.ಇದೇ ಪ್ರಕರಣದಲ್ಲಿ ಈಗಾಗಲೇ ತಮಿಳುನಾಡಿನ ಮಾಜಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರನ್ನು ಸಿಬಿಐ ವಿಚಾರಣೆ ನಡೆಸಿದೆ.

ಜಪಾನ್‌ನ ಖಡ್ಗ ಸಮರಕಲೆ ಕಲಿತ ಪವನ್‌ ಕಲ್ಯಾಣ್‌: ಭಾರತದ ಮೊದಲಿಗ

ನವದೆಹಲಿ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಜಪಾನ್‌ನ ಪ್ರಾಚೀನ ಸಮರಕಲೆಗಳಲ್ಲಿ ಒಂದಾದ ಕೆಂಜುಟ್ಸು ಕತ್ತಿವರಸೆಯಲ್ಲಿ ಅಪಾರ ಸಾಧನೆ ಮಾಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ನಿಮಿತ್ತ, ಜಪಾನ್‌ ಮಾರ್ಷಲ್‌ ಕಲೆಯಲ್ಲಿ ಅತ್ಯಂತ ಗೌರವಿಸಲ್ಪಡುವ ಸೊಗೊ ಬುಡೋ ಕನ್ರಿ ಕೈ ಎಂಬ ಸಂಸ್ಥೆಯಿಂದ 5ನೇ ಡ್ಯಾನ್‌ ಎಂಬ ಬಿರುದನ್ನು ಪವನ್‌ ಕಲ್ಯಾಣ್‌ ಗಳಿಸಿದ್ದಾರೆ. ಇದೊಂದು ಜಾಗತಿಕ ಗೌರವವಾಗಿದೆ.ಮತ್ತೊಂದೆಡೆ ಸೋಕೆ ಮುರಮಟ್ಸು ಸೆನ್ಸೆ ಮನೆತನದ ಟಕೆಡಾ ಶಿಂಗೆನ್‌ ಪಡೆಗೆ ಸೇರಿದ ಮೊದಲ ತೆಲುಗು ವ್ಯಕ್ತಿ ಎಂಬ ಗರಿ ಪವನ್‌ ಕಲ್ಯಾಣ್ ಅವರಿಗೆ ಸೇರಿದೆ. ಈ ಗೌರವವನ್ನು ಜಪಾನ್‌ನ ಹೊರಗಿನವರಿಗೆ ಸಿಗುವುದು ಅತಿ ವಿರಳ.

ಇದರೊಂದಿಗೆ ಗ್ಲೋಬಲ್‌ ಡ್ರ್ಯಾಗನ್ಸ್‌ ಸಂಸ್ಥೆಯೊಂದು ಟೈಗರ್‌ ಆಫ್‌ ಮಾರ್ಷಲ್‌ ಆರ್ಟ್ಸ್‌ ಎಂಬ ಬಿರುದು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರೋಹಿತ್ಯ ಮಾಡಿಕೊಂಡು ಹೆಂಡ್ತಿ ಕನಸಿಗೆ ಜೀವ ತುಂಬಿದ ಗಂಡನಿಗೆ ಡಿವೋರ್ಸ್ ಭಾಗ್ಯ ನೀಡಿದ ಸಬ್‌ ಇನ್ಸ್‌ಪೆಕ್ಟರ್‌
ಬೆದರಿಸಲು ಯಾರಪ್ಪಾ ನೀನು? ರಾಜ್ ಠಾಕ್ರೆಯ ರಸಮಲೈ ಟೀಕೆಗೆ ಕೆರಳಿದ ಅಣ್ಣಾಮಲೈ