ಇನ್‌ಸ್ಟಾದಲ್ಲಿ ಲೇಡಿ ಪೊಲೀಸ್‌ನ ಪಟಾಯಿಸಿ 24 ಲಕ್ಷ ದೋಚಿದ ಖದೀಮ.. ಮೋಸಕ್ಕಾಗಿ ಬೀಸಿದ ಆ ಬಲೆ ಹೇಗಿತ್ತು?

Published : Oct 24, 2026, 04:15 PM IST
Delhi’s ‘Ricky Bahl’ Arrested For Cheating Woman Cop

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಉದ್ಯಮಿ ಎಂದು ಬಿಂಬಿಸಿಕೊಂಡು ಮಹಿಳಾ ಪೊಲೀಸ್‌ಗೆ 24 ಲಕ್ಷ ರೂ. ವಂಚಿಸಿದ 23 ವರ್ಷದ ವಿಕ್ರಾಂತ್ ಕುಮಾರ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮದುವೆಯ ಭರವಸೆ ನೀಡಿ ಹಣ ಪಡೆದಿದ್ದ ಈತ, ಅದನ್ನು ಬೆಟ್ಟಿಂಗ್ ಆ್ಯಪ್‌ಗೆ ಬಳಸಿದ್ದನು.

ನವದೆಹಲಿ: ದೆಹಲಿ ಕೇಂದ್ರಾ ಜಿಲ್ಲಾ ಸೈಬರ್ ಪೊಲೀಸರು ವಿಕ್ರಾಂತ್‌ ಕುಮಾರ್‌ ಅಲಿಯಾಸ್‌ ವಿಕ್ಕಿ ಎಂಬಾತನ ಬಂಧಿಸಿದ್ದಾರೆ. ಈತನ ವಿರುದ್ಧ ಲೇಡಿ ಪೊಲೀಸ್‌ ಒಬ್ಬರಿಂದ ಬರೋಬ್ಬರಿ 24 ಲಕ್ಷ ರೂಪಾಯಿ ಲಪಾಟಿಯಿಸಿದ ಆರೋಪ ಇದೆ.

ವಂಚನೆಯ ಬಲೆ ಬೀಸಿದ್ದು ಹೇಗೆ..?

ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಆತನ ಪ್ರೊಫೈಲ್‌ ನೋಡಿದ ಲೇಡಿ ಪೊಲೀಸ್‌ ಕಳೆದು ಹೋಗಿದ್ದಾರೆ. ಫ್ರೆಂಡ್‌ ರಿಕ್ವೆಸ್ಟ್‌ ಸ್ವೀಕರಿಸಿದ್ದಾರೆ. ನಂತರ ಸ್ನೇಹದ ಹೆಸರಲ್ಲಿ ಹಂತಹಂತವಾಗಿ ಮೆಸೇಜ್‌ಗಳನ್ನ ಮಾಡಲು ಶುರುಮಾಡಿದ್ದ. ನಾನೊಬ್ಬ ದೊಡ್ಡ ಬ್ಯುಸಿನೆಸ್‌ಮ್ಯಾನ್‌, ತನ್ನ ಬಳಿ ಐಷಾರಾಮಿ ಕಾರುಗಳಿವೆ ಎಂದೆಲ್ಲ ಬಿಲ್ಡಪ್‌ ಕೊಟ್ಟಿದ್ದ. ತನ್ನ ಬಿಲ್ಡಪ್‌ಗೆ ತಕ್ಕಂತೆ ಐಷಾರಾಮಿ ಕಾರುಗಳ ಮುಂದೆ ನಿಂತು ರೀಲ್ಸ್‌ಗಳನ್ನ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದ. ಇದೆಲ್ಲ ಹೌದು ಅಂದ್ಕೊಂಡಿದ್ದ ಲೇಡಿ ಪೊಲೀಸ್‌, ಆತನ ಜೊತೆ ಮುಕ್ತವಾಗಿ ಮಾತನ್ನಾಡಲು ಶುರುಮಾಡಿದ್ದಾರೆ. ಅಷ್ಟೇ ಅಲ್ಲ.. ತನ್ನ ಹೆಸರು ಕ್ರಿಕೆಟ್‌ ಜಗತ್ತಿನಲ್ಲಿ ದೊಡ್ದದಾಗಿ ಇರೋದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ನಂತರ ಆ ಮಹಿಳಾ ಪೊಲೀಸ್‌ಗೆ ಹೂಡಿಕೆಯಿಂದ ಬರುವ ಲಾಭದ ಬಗ್ಗೆ ಕತೆ ಕಟ್ಟಿದ್ದಾನೆ. ಆತನನ್ನು ಸಂಪೂರ್ಣವಾಗಿ ನಂಬಿದ ಲೇಡಿ ಪೊಲೀಸ್‌ ಮೊದಲಿಗೆ ತನ್ನ ಉಳಿತಾಯದ ಹಣವನ್ನು ನೀಡಿದ್ದಾಳೆ. ನಂತರ ತನಗೆ ಪರಿಚಯಸ್ಥರಿಂದ ಸಾಲವಾಗಿ 12 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಳು. ಕೊನೆಗೆ ಹಣ ವಾಪಸ್‌ ಕೇಳಿದಾಗ ಈತನ ಅಸಲಿ ಬಂಡವಾಳ ಗೊತ್ತಾಗಿದೆ. ಮೋಸ ಹೋದ ಲೇಡಿ ಪೊಲೀಸ್‌ ಪೊಲೀಸರಿಗೆ ದೂರು ನೀಡಿದ್ದಾರೆ..

ಪೊಲೀಸರ ತನಿಖೆಯಲ್ಲಿ 1x.com ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ಲಿಂಕ್ ಮಾಡಲಾದ ಅಕೌಂಟ್‌ಗೆ 8 ಲಕ್ಷ ಹಣ ವರ್ಗಾಯಿಸಿರೋದು ಗೊತ್ತಾಗಿದೆ. ವಹಿವಾಟುಗಳಿಗೆ ಒನ್‌ಎಕ್ಸ್ ಬೆಟ್ಟಿಂಗ್ ಅಪ್ಲಿಕೇಶನ್ ಖಾತೆ ಬಳಸಲಾಗಿದೆ. ಇನ್ನುಳಿದ ಹಣವನ್ನು ಏನು ಮಾಡಿದ್ದಾನೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 2011ರಲ್ಲಿ ರಣ್‌ವೀರ್‌ ಸಿಂಗ್‌ ಅವರ ಲೇಡೀಸ್ ವರ್ಸಸ್ ರಿಕಿ ಬಹ್ಲ್ ಚಿತ್ರದ ಮಾದರಿಯಲ್ಲೇ ವಂಚನೆ ಮಾಡಲಾಗಿದೆ. ಆ ಸಿನಿಮಾದಲ್ಲಿ ರಣ್‌ವೀರ್‌ ಸಿಂಗ್‌ ಮಹಿಳೆಯರನ್ನ ಮೋಸಗೊಳಿಸುವ ವಂಚಕ ಪಾತ್ರವನ್ನ ನಿಭಾಯಿಸಿದ್ದರು. ಅದೇ ರೀತಿ ಈತ ಲೇಡಿ ಪೊಲೀಸ್‌ಗೆ ಮೋಸ ಮಾಡಿದ್ದಾನೆ ಎನ್ನಲಾಗುತ್ತಿದೆ.

ತನಿಖೆಯಲ್ಲಿ ಗೊತ್ತಾಗಿದ್ದೇನು?

ಪೊಲೀಸ್‌ ಅಧಿಕಾರಿಗಳು ಬುರಾರಿಯಲ್ಲಿ ಆರೋಪಿ ವಿಕ್ರಾಂತ್‌ ಕುಮಾರ್‌ನನ್ನು ಬಂಧಿಸಿದ್ದಾರೆ. ತನ್ನನ್ನು ಉದ್ಯಮಿ ಎಂದು ಬಿಂಬಿಸಿಕೊಂಡಿದ್ದಾನೆ. ಆತನ ವಯಸ್ಸು ಕೇವಲ 23. ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಬುಟ್ಟಿಯಲ್ಲಿ ಹಾಕಿಕೊಳ್ಳಲು ಮತ್ತೊ ಹೊರಗಡೆ ಕರೆದುಕೊಂಡು ಹೋಗಲು ಆತ 8 ಗಂಟೆಗಳ ಕಾಲ ಆತನ ಐಷಾರಾಮಿ ಕಾರನ್ನು ಬುಕ್‌ ಮಾಡಿದ್ದ. ಅವರಿಂದ ಹಣ ಕೇಳುವ ಮೊದಲು ಮದುವೆಯ ಭರವಸೆ ನೀಡಿದ್ದ. ಆತ ಮಹಿಳಾ ಪೊಲೀಸ್‌ ಅಧಿಕಾರಿಗಳನ್ನ ಯಾಮಾರಿಸಿರೋದು ಇದೇ ಮೊದಲಲ್ಲ. ಈತ, ಇದೇ ಲೇಡಿ ಪೊಲೀಸ್‌ನ ಬ್ಯಾಚ್‌ ಸುಮಾರು 20 ಮಹಿಳೆಯರನ್ನ ಗುರಿಯಾಗಿಸಿಕೊಂಡು ಕೃತ್ಯದಲ್ಲಿ ತೊಡಗಿದ್ದ. ಅನೇಕರು ಹೆದರಿ ದೂರು ನೀಡಿಲ್ಲ. ದೆಹಲಿಯ ವಿವಿಧ ಭಾಗಗಳಲ್ಲಿ ಸುಮಾರು ಐದು ಕೇಸ್‌ಗಳು ದಾಖಲಾಗಿವೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SIR Protest Controversy: ಸಿಜೆಪಿ ಯಡವಟ್ಟು, ಬಿಜೆಪಿಗೆ ಲಾಟರಿ; ಹೊಸ ಗೇಮ್ ಪ್ಲ್ಯಾನ್‌ಲ್ಲಿ ರಾಹುಲ್!
ರೆಸ್ಟೋರೆಂಟ್​ನಲ್ಲಿ ಮೊದಲ ಭೇಟಿ: Love At First Sight; ರಾಜೀವ್​ ಗಾಂಧಿ-ಸೋನಿಯಾ ಲವ್​ ಸ್ಟೋರಿ ಇದು