ಟಿಎಂಸಿ ನಾಯಕಿ ಮಹುವಾಗೆ ಮತ್ತೊಂದು ಶಾಕ್, ದೆಹಲಿ ಹೈಕೋರ್ಟ್‌ನಿಂದ ಸಮನ್ಸ್!

By Suvarna NewsFirst Published Mar 20, 2024, 5:51 PM IST
Highlights

ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಸಂಕಷ್ಟ ಹೆಚ್ಚಾಗಿದೆ. ಲಂಚ ಪ್ರಕರಣದಲ್ಲಿ ಮಹುವಾ ವಿರುದ್ದ ಸಿಬಿಐ ತನಿಖೆಗೆ ಲೋಕಪಾಲ ಸೂಚಿಸಿರುವ ಬೆನ್ನಲ್ಲೇ ಇದೀಗ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ. 
 

ನವದೆಹಲಿ(ಮಾ.20) ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಸಿಲುಕಿರುವ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ದಿನದಿಂದ ದಿನಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ವಿರುದ್ದ ಸಿಬಿಐ ತನಿಖೆಗೆ ಲೋಕಪಾಲ ಸೂಚಿಸಿದೆ. ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಮಹುವಾಗೆ ಸಮನ್ಸ್ ನೀಡಿದೆ. ಮುಹುವಾ ಮೊಯಿತ್ರಾ ಮಾಜಿ ಪಾರ್ಟ್ನರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರರಕರಣ ಸಂಬಂಧ ಮಹುವಾಗೆ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ. ಎಪ್ರಿಲ್ 1ರೊಳಗೆ ಉತ್ತರ ನೀಡುವಂತೆ ಕೋರ್ಟ್ ಸೂಚಿಸಿದೆ.

ಮಹುವಾ ಮೊಯಿತ್ರಾ ಸಾರ್ವಜನಿಕವಾಗಿ ಮಾಜಿ ಪಾರ್ಟ್ನರ್ ಹಾಗೂ ವಕೀಲ ಜಯ್ ಅನಂತ್ ದೆಹಾದ್ರಯಿ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದರು. ಆತ ನಿರುದ್ಯೋಗಿ, ನಂಬಿಕೆ ಅರ್ಹನಲ್ಲ ಸೇರಿದಂತೆ ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಹುವಾ ಮೊಯಿತ್ರಿ ಮಾಧ್ಯಮಕ್ಕೆ ನೀಡಿದ ಕೆಲ ಹೇಳಿಕೆಗಳು ತನ್ನ ಘನತೆಗೆ ಧಕ್ಕೆ ತಂದಿದೆ. ಹೀಗಾಗಿ ಮಹುವಾ ಮೊಯಿತ್ರಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಜಯ್ ಅನಂತ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆಕೆ ಹೇಳಿಕೆಯಿಂದ ತನಗೆ ಅಪಾರ ನಷ್ಟವಾಗಿದೆ ಎಂದು ಪ್ರಕರಣ ದಾಖಲಿಸಿದ್ದರು.

ಲಾಗಿನ್‌ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?

ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇದೀಗ ಮಹುವಾ ಮೊಯಿತ್ರಾಗೆ ಸಮನ್ಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿದೆ.  ಹೈಕೋರ್ಟ್ ಸಮನ್ಸ್‌ಗೂ ಮೊದಲು ಮಹುವಾ ಮೊಯಿತ್ರಾಗೆ ವಿರುದ್ಧ ಸಿಬಿಐ ತನಿಖೆಗೆ ಸೂಚನೆ ನೀಡಲಾಗಿದೆ. 

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಆರೋಪ ಹೊತ್ತಿರುವ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ತನಿಖೆ ನಡೆಸುವಂತೆ ಸಿಬಿಐ ಲೋಕಪಾಲರು ಸೂಚಿಸಿದ್ದಾರೆ. ಅಲ್ಲದೆ ತನಿಖಾ ವರದಿಯನ್ನು 6 ತಿಂಗಳ ಒಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ದುಬೈ ಮೂಲದ ಉದ್ಯಮಿ ಪರವಾಗಿ ಪ್ರಶ್ನೆ ಕೇಳಲು ಮಹುವಾ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್‌ ದುಬೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಳಿಕ ಲೋಕಪಾಲರು ಈ ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಮಹುವಾ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

ಲೋಕಸಭೆಯಿಂದ ಅಮಾತುಗೊಂಡ ಮಹುವಾಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ!
 

click me!