Breaking News ದೆಹಲಿಯಲ್ಲಿ ಮತ್ತೆ ಕಂಪಿಸಿದ ಭೂಮಿ, ಎರಡನೇ ಭಾರಿಗೆ ಭೂಕಂಪ

Published : Jul 11, 2025, 08:27 PM ISTUpdated : Jul 11, 2025, 08:32 PM IST
Earthquake

ಸಾರಾಂಶ

ರಾಷ್ಟ್ರ ರಾಜಧಾನಿ ವ್ಯಾಪ್ತಿ-ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ 2ನೇ ಬಾರಿಗೆ ಭೂಕಂಪನವಾಗಿದೆ. 

ನವದೆಹಲಿ (ಜು.11) ದೇಶದ ರಾಜಧಾನಿ ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಭೂಕಂಪನವಾಗಿದೆ. ಇಂದು (ಜು.11) ಸಂಜೆ 7.49ರ ವೇಳೆ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ. ಭೂಕಂಪದ ಮೂಲ ಹರ್ಯಾಣದ ಝಜ್ಜಾರ್‌ನ 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸುತ್ತಿದ್ದಂತೆ ದೆಹಲಿ ಜನತೆ ಸೋಶಿಯಲ್ ಮೀಡಿಯಾ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.

 

 

ದೆಹಲಿಯಲ್ಲಿ ಸತತ ಭೂಕಂಪದಿಂದ ಹಲವರರು ಆತಂಕಗೊಂಡಿದ್ದಾರೆ. ಸದ್ಯ ಎರಡು ದಿನದಲ್ಲಿ ಎರಡನೇ ಭಾರಿಗೆ ಭೂಕಂಪವಾಗಿದೆ. ಎರಡೂ ಭೂಕಂಪದ ಪ್ರಮಾಣ ಹಾಗೂ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪದೇ ಪದೇ ಈ ರೀತಿ ಭೂಕಂಪ ಸಂಭವಿಸತ್ತಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. 

ಗುರುವಾರ ದೆಹಲಿಯಲ್ಲಿ ಕಂಪಿಸಿದ್ದ ಭೂಮಿ

ಗುರುವಾರ (ಜು.10) ದೆಹಲಿಯಲ್ಲಿ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿತ್ತು. ಹರ್ಯಾಣ ಝಜ್ಜಾರ್ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ ಇದರ ತೀವ್ರತೆ ದೆಹಲಿ ಹಾಗೂ ರಾಜಾಧಾನಿ ವ್ಯಾಪ್ತಿ ಪ್ರದೇಶಕ್ಕೂ ವ್ಯಾಪಿಸಿತ್ತು. ತೀವ್ರತೆ ಕಡಿಮೆ ಇದ್ದ ಕಾರಣ ಭೂಮಿ ಸಣ್ಣದಾಗಿ ಕಂಪಿಸಿದೆ. ಕಟ್ಟಡಗಳು, ಮನೆಗಳು ಅಲುಗಾಡಿದೆ. ಫ್ಯಾನ್ ಸೇರಿದಂತೆ ವಸ್ತುಗಳು ಅಲುಗಾಡಿದೆ. ಮೇಜಿನ ಮೇಲಿದ್ದ ವಸ್ತುಗಳು ಕೆಳಕ್ಕೆ ಬಿದ್ದಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಹೊರಗೋಡಿದ್ದಾರೆ. ಕಟ್ಟಡಗಳು, ಕಚೇರಿಗಳಿಂದ ಹೊರಬಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಲವರು ಭೂಕಂಪನದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ಹಲವು ದೆಹಲಿ ಭೂಕಂಪನದ ಟ್ರೋಲ್ ಮಾಡಿದ್ದರು. ಇದೀಗ ಮತ್ತೆ ಎರಡನೇ ದಿನದಲ್ಲಿ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ಗುರುವಾರ ದೆಹಲಿಯಲ್ಲಿ ಬೆಳಗ್ಗೆ 9.04 ಗಂಟೆಗೆ ಭೂಮಿ ಕಂಪಿಸಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ