11 ಮಂದಿ ಸಾವನ್ನಪ್ಪಿದ್ದ ಬುರಾರಿ ಮನೆ ಇದೀಗ ರೋಗ ಪತ್ತೆ ಕೇಂದ್ರ!

By Suvarna NewsFirst Published Dec 31, 2019, 8:34 AM IST
Highlights

ಒಂದೇ ಕುಟುಂದ 11 ಮಂದಿ ಸಾವಿಗೀಡಾದ ದೆಹಲಿ ಮನೆ| ಈಗ ಡಯಾಗ್ನೋಸ್ಟಿಕ್‌ ಸೆಂಟರ್‌

ನವದೆಹಲಿ[ಡಿ.31]: 2018ರ ಜುಲೈನಲ್ಲಿ ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆಗೆ ಸಾಕ್ಷಿಯಾಗಿದ್ದ ಮನೆ ಈಗ ಡಯಾಗ್ನೋಸ್ಟಿಕ್‌ ಸೆಂಟರ್‌ (ರೋಗ ನಿರ್ಣಯ ಕೇಂದ್ರ)ವಾಗಿ ಬದಲಾಗಿದೆ. ಭೂತ ಬಂಗಲೆ ಎಂದೇ ಕರೆಸಿಕೊಂಡಿದ್ದ ಈ ಮನೆಯನ್ನು ಮಾಲಿಕ, ಡಾ

ಮೋಹನ್‌ ಎನ್ನುವವರು ಖರೀದಿಸಿ, ಅದನ್ನು ಡಯಾಗ್ನೋಸ್ಟಿಕ್‌ ಕೇಂದ್ರವಾಗಿ ಬದಲಾಯಿಸಿದ್ದಾರೆ. ‘ನಾನು ಯಾವುದೇ ಮೂಢ ನಂಬಿಕೆಗಳನ್ನು ನಂಬುವುದಿಲ್ಲ. ಪರೀಕ್ಷೆಗೆ ಬರುವುದಕ್ಕೆ ನನ್ನ ರೋಗಿಗಳಿಗೆ ಯಾವುದೇ ತೊಂದರೆ ಇಲ್ಲ. ರಸ್ತೆ ಪಕ್ಕದಲ್ಲೇ ಇರುವ ಕಾರಣ ಮನೆಯನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ.

ಬುರಾರಿಯಲ್ಲಿರುವ ಮನೆಯಲ್ಲ ಒಂದೇ ಕುಟುಂಬದ 11 ಮಂದಿ ನೇಣಿಗೆ ಶರಣಾಗಿದ್ದು ಭಾರೀ ಸುದ್ದಿಯಾಗಿತ್ತು. ಬಳಿಕ ಮನೆಯಲ್ಲಿ ವಾಮಾಚಾರ ನಡೆದಿರುವ ಸಂಗತಿ ಬೆಳಕಿಗೆ ಬಂದಿತ್ತು.

click me!