ಬಹು ನಿರೀಕ್ಷಿತ ರಾಷ್ಟ್ರ ರಾಜಧಾನಿ ದಿಲ್ಲಿ ವಿಧಾನಸಭೆ ಚುನಾವಾಣೆ ಫಲಿತಾಂಶದ ಮತಗಳ ಎಣಿಕೆ ಬಹುತೇಕ ಮುಕ್ತಾಯಗೊಂಡಿದೆ. 70 ಸ್ಥಾನಗಳ ಪೈಕಿ ಬಿಜೆಪಿ 47 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದುಸ್ಥಾನದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಒಂದು ಕ್ಷೇತ್ರದ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. 47 ಸ್ಥಾನದಲ್ಲಿ ಗೆಲುವು ಹಾಗೂ ಮತ್ತೊಂದರಲ್ಲಿ ಮುನ್ನಡೆ ಸೇರಿದಂತೆ ಬಿಜೆಪಿ 48 ಸ್ಥಾನ ಪಡೆದುಕೊಂಡಿದೆ. ಇತ್ತ ಆಮ್ ಆದ್ಮಿ ಪಾರ್ಟಿ 22 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಸತತ ಮೂರನೇ ಬಾರಿ ಒಂದೇ ಒಂದು ಸ್ಥಾನ ಗೆಲ್ಲದೆ ನಿರಾಸೆ ಅನುಭವಿಸಿದೆ. ಬಿಜೆಪಿ ಅಭೂತಪೂರ್ವ ಗೆಲುವು ಖಚಿತವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮೋದಿ, ದೆಹಲಿಯಲ್ಲಿ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ದೆಹಲಿ ಅಭಿವೃದ್ಧಿ, ಯುಮನಾ ನದಿ ಸ್ವಚ್ಚಗೊಳಿಸುವ ಭರವಸೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮೋದಿ ಮುಂದಿಟ್ಟಿದ್ದಾರೆ. ಇಂದಿನ ದೆಹಲಿ ಚುನನಾವಣೆ ಫಲಿತಾಂಶ, ಬಿಜೆಪಿ ವಿಜಯೋತ್ಸವ, ಆಪ್ ನಾಯಕರ ಪ್ರತಿಕ್ರಿಯೆ, ಕಾಂಗ್ರೆಸ್ ಬೆಳವಣಿಗೆ ಸೇರಿದಂತೆ ಇಡೀ ದಿನದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

08:00 PM (IST) Feb 08
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಭೂತಪೂರ್ವ ಗೆಲುವಿನ ಬಳಿಕ ಬಿಜೆಪಿ ವಿಜಯೋತ್ಸವ ಆಚರಿಸಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾರಿ ಸಂಭ್ರಮಾಚರಣೆ ನಡೆದಿದೆ. ಈ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮೋದಿ, ಜನರು ದೆಹಲಿ ಸ್ವಚ್ಚಗೊಳಿಸಿದ್ದಾರೆ. 10 ವರ್ಷಗಳ ಆಪತ್ತಿನಿಂದ ದೆಹಲಿ ಮುಕ್ತವಾಗಿದೆ ಎಂದು ಮೋದಿ ಹೇಳಿದ್ದಾರೆ.
07:23 PM (IST) Feb 08
ಅರವಿಂದ್ ಕೇಜ್ರಿವಾಲ್ ಮೇಲೆ ಕೇಳಿಬಂದಿರುವ ಕೋಟಿ ಕೋಟಿ ರೂಪಾಯಿ ಹಗರಣ ಪೈಕಿ ಶೀಶ್ ಮಹಲ ನಿವಾಸ ಕೂಡ ಒಂದು. ಈ ಕುರಿತು ಸಿಎಜಿ ವರದಿಯನ್ನು ಮಂಡಿಸುತ್ತೇವೆ. ಮೊದಲ ಅಧಿವೇಶನದಲ್ಲೇ ಮಂಡಿಸುತ್ತೇವೆ ಎಂದು ಮೋದಿ ಘೋಷಿಸಿದ್ದಾರೆ.
07:01 PM (IST) Feb 08
ದೆಹಲಿ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೀಗ ದಹೆಲಿ ಬಿಜೆಪಿ ಪ್ರಧಾನ ಕಚೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನುದ್ದೇಶಿ ಮೋದಿ ಮಾತನಾಡಿದ್ದಾರೆ. ಗೆಲುವಿಗೆ ದೆಹಲಿ ಜನೆಗೆ ಧನ್ಯವಾದ ತಿಳಿಸಿದ್ದಾರೆ.
06:15 PM (IST) Feb 08
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಮಕಾಡೆ ಮಲಗಿದೆ. ಇದರ ಜೊತೆಗೆ ಆಪ್ ಘಟಾನುಘಟಿ ನಾಯಕರು ಮುಗ್ಗರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಮುಗ್ಗರಿಸಿದ್ದಾರೆ.
05:13 PM (IST) Feb 08
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಇತ್ತ ದೆಹಲಿ ಬಿಜೆಪಿಯಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ಹೈಕಮಾಂಡ್ ಸಭೆ ನಡೆಸುತ್ತಿದೆ. ಮುಖ್ಯವಾಗಿ ದೆಹಲಿ ಸಿಎಂ ಯಾರು ಚರ್ಚೆ ಶುರುವಾಗಿದೆ. ಈ ಪೈಕಿ ಅರವಿಂದ್ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ, ಸುಷ್ಮಾ ಸ್ವರಾಜ್ ಪುತ್ರಿ ಬನ್ಸುರಿ ಸ್ವರಾಜ್, ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಸಿ ದುಷ್ಯಂತ್ ಗೌತಮ್ ಹೆಸರು ಮುಂಚೂಣಿಯಲ್ಲಿದೆ.
04:52 PM (IST) Feb 08
ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಚುನಾವಣೆಯಲ್ಲಿ ಮುಗ್ಗರಿಸಿದೆ. ಇದೀಗ ಆಪ್ ನಾಯಕರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಪೈಕಿ ಸೌರಬ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ, ದೊಡ್ಡ ಯುದ್ಧಗಳನ್ನು ಗೆಲ್ಲಬೇಕಾದಾಗ, ಕೆಲ ಸಣ್ಣ ಸವಾಲುಗಳಲ್ಲಿ ಸೋಲು ಸಹಜ ಎಂದಿದ್ದಾರೆ.
04:05 PM (IST) Feb 08
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಹೀನಾಯ ಸೋಲು ಕಂಡಿದೆ. ಇತ್ತ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಬಿಜೆಪಿ ಗೆಲುವು ಹಾಗೂ ಮುನ್ನಡೆ ಒಟ್ಟು ಸ್ಥಾನ 48ಕ್ಕೆ ಏರಿಕೆಯಾಗಿದ್ದರೆ, ಆಪ್ 22ರಲ್ಲಿದೆ. ಇನ್ನು ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ, ಮುನ್ನಡೆ ಪಡೆದಿಲ್ಲ. ಅರವಿಂದ್ ಕೇಜ್ರಿವಾಲ್ ವಿರುದ್ದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಇದೀಗ ದೆಹಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪರ್ವೇಶ್ ವರ್ಮಾ ಈಗಾಗೇ ಅಮಿತ್ ಶಾ ಭೇಟಿಯಾಗಿದ್ದಾರೆ.
02:55 PM (IST) Feb 08
ಕಳೆದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ವ್ಯಾಪ್ತಿಯಲ್ಲಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಇಲ್ಲಿ ಗೆಲುವು ಕಂಡಿದ್ದ ಅವದೇಶ್ ಚೌಧರಿ ಮಿಲ್ಕಿಪುರ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅವದೇಶ್ ಚೌಧರಿ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಂಡಿದೆ.
01:50 PM (IST) Feb 08
ಸ್ವತಃ ಕೇಜ್ರಿವಾಲ್ ದಿಲ್ಲಿ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದು, ಅವರು ನೀಡಿದ ಗ್ಯಾರಂಟಿಗಳು ವರ್ಕ್ ಆಗಿಲ್ಲ.
ಅವರು ನೀಡಿದ ಗ್ಯಾರಂಟಿಗಳೇನು?
01:41 PM (IST) Feb 08
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿನಲ್ಲಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣಾ ಪ್ರಚಾರದ ವೇಳೆ ಪಕ್ಷದ ವಿರುದ್ಧ ಮಾತನಾಡಿದ್ದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪಕ್ಷವನ್ನು ಟೀಕಿಸಿದ್ದ ಸ್ವಾತಿ ಮಲಿವಾಲ್ ಆಪ್ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
01:28 PM (IST) Feb 08
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಭ್ರಷ್ಟಾಚಾರ ಆರೋಪಗಳು, ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯ ಕೊರತೆ, ಆಂತರಿಕ ಕಲಹಗಳು, ಭರವಸೆಗಳನ್ನು ಈಡೇರಿಸದಿರುವುದು, ಯುವಜನತೆ ದೂರವಾಗುವುದು ಮತ್ತು 12 ವರ್ಷಗಳ ಆಡಳಿತ ಸೇರಿದಂತೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗಿದೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
01:21 PM (IST) Feb 08
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ರಣತಂತ್ರ ಪ್ರಮುಖ ಪಾತ್ರ ವಹಿಸಿದೆ. ಕೊನೆಯ 15 ದಿನಗಳಲ್ಲಿ ನಡೆಸಿದ ಪ್ರಚಾರದ ಮೂಲಕ ಎಎಪಿ ಪಕ್ಷವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾದರು.
ಏನಿದು ಸುದ್ದಿ?
12:32 PM (IST) Feb 08
12:31 PM (IST) Feb 08
ದೆಹಲಿಯಲ್ಲಿ ಬಿಜೆಪಿ ವಿಜಯದ ಹಿನ್ನೆಲೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ. ದೆಹಲಿಯ ಸಿಎಂ ಅಭ್ಯರ್ಥಿ ಯನ್ನು ಸಂಸದೀಯ ಮಂಡಳಿ ಮತ್ತು ಶಾಸಕರು ತೀರ್ಮಾನಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಡಬಲ್ ಎಂಜಿನ್ ಸರ್ಕಾರ ವನ್ನು ದೆಹಲಿಗರು ಬಯಸಿದ್ದಾರೆ. ನಾವು ಘೋಷಣೆ ಮಾಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ.
12:11 PM (IST) Feb 08
11:56 AM (IST) Feb 08
ಬಿಜೆಪಿ ಅಗತ್ಯ ಮ್ಯಾಜಿಕ್ ನಂಬರ್ ಪಡೆಯುವತ್ತ ದಿಲ್ಲಿಯಲ್ಲಿ ಹೆಜ್ಜೆ ಹಾಗಿದ್ದು, ಆಡಳಿತಾರೂಢ ಆಪ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬೆನ್ನಲ್ಲೇ ಕೇಜ್ರಿವಾಲ್, ಮೋದಿ ನನ್ನನ್ನು ಸೋಲಿಸಲು ಮತ್ತೊಂದು ಜನ್ಮ ತಾಳಿ ಬರಬೇಕೆಂದ ಹಳೇ ವೀಡಿಯೋವೊಂದು ವೈರಲ್ ಆಗಿದೆ.
11:54 AM (IST) Feb 08
ದೆಹಲಿ ಚುನಾವಣೆಯ ಟ್ರೆಂಡ್ ಕುರಿತು ಮಾತನಾಡಿರುವ ಅಣ್ಣಾ ಹಜಾರೆ, ಚುನಾವಣೆಗಳಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಯು ಶುದ್ಧ ನಡವಳಿಕೆ, ಶುದ್ಧ ಆಲೋಚನೆಗಳು, ನಿಷ್ಕಳಂಕ ಜೀವನ ಮತ್ತು ತ್ಯಾಗವನ್ನು ಹೊಂದಿರುವುದು ಮುಖ್ಯ ಎಂದಿದ್ದಾರೆ. ಒಬ್ಬ ಅಭ್ಯರ್ಥಿಗೆ ಈ ಗುಣಗಳಿದ್ದರೆ, ಮತದಾರರು ಅವನ ಮೇಲೆ ನಂಬಿಕೆ ಇಡುತ್ತಾರೆ. ನಾನು ಅವರಿಗೆ ಮತ್ತೆ ಮತ್ತೆ ಹೇಳುತ್ತಲೇ ಇದ್ದೆ, ಮದ್ಯದಿಂದಲೇ ಅವರು ಇಂದು ಸೋಲು ಕಂಡಿದ್ದಾರೆ.
11:25 AM (IST) Feb 08
ದಿಲ್ಲಿ ಬಿಜೆಪಿ ಕಚೇರಿ ಮುಂದೆ ಬಿಜೆಪ ಕಾರ್ಯಕರ್ತರು ಜಮಾಯಿಸಿದ್ದು, ಪಕ್ಷ ಮ್ಯಾಜಿಕ ನಂಬರ್ ದಾಟಿದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ.
11:24 AM (IST) Feb 08
ಹುಬ್ಬಳ್ಳಿ: ಕಾಂಗ್ರೆಸ್ ಡೇ ಬಾಯ್ ಡೇ ಕೊಲ್ಯಾಪ್ಸ್ ಆಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಅದು ನಮ್ಮ ತಪ್ಪಿನಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ.ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ ಎಂದ ಬಿಜೆಪಿ ಎಂಪಿ ಜಗದೀಶ್ ಶೆಟ್ಟರ್.
ತೆಲಂಗಾಣ ,ಕರ್ನಾಟಕ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ.ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ ಅಲ್ಲಿ ಮಾತ್ರ ಒಳ್ಳೆ ಕೆಲಸಗಳು ಆಗಿವೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ತಂದಿದ್ದಾರೆ. ದೆಹಲಿ ಜನ ಮೋದಿ ನಾಯಕತ್ವ ಒಪ್ಪಿದ್ದಾರೆ. ದೆಹಲಿಯನ್ನು ಅಭಿವೃದ್ದಿ ಮಾಡೋದಾಗಿ ಮೋದಿ ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕ ಬರುತ್ತೇವೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲಿ ಎನ್ನುವ ಸ್ಫೋಟಕ ಹೇಳಿಕೆಯನ್ನೂ ನೀಡಿದ್ದಾರೆ. ಭಿನ್ನಮತಕ್ಕೆ ನಾಯಕರು ಇತಿಶ್ರೀ ಹಾಕ್ತಾರೆ. ಅಧ್ಯಕ್ಷರ ಚುನಾವಣೆ ಬಂದಿದೆ. ಸರ್ವಾನುಮತದಿಂದ ಅಧ್ಯಕ್ಷರ ಆಯ್ಕೆ ಆಗಬೇಕು, ಚುನಾವಣೆ ಅನ್ನೋದು ಒಂದು ಪ್ರೊಸೆಸ್, ಎಂದಿದ್ದಾರ.ೆ
11:21 AM (IST) Feb 08
ದಿಲ್ಲಿಯ ಹೆಸರು ಹಲವು ಬಾರಿ ಬದಲಾಗಿದೆ. ಪ್ರತಿಯೊಬ್ಬ ಆಡಳಿತಗಾರರು ತಮ್ಮದೇ ಆದ ರೀತಿಯಲ್ಲಿ ಇದನ್ನು ಗುರುತಿಸಿದ್ದಾರೆ. ಮೊದಲು ಇದು ಪಾಂಡವರ ರಾಜಧಾನಿಯಾಗಿತ್ತು, ನಂತರ 1,500 ವರ್ಷಗಳ ಕಾಲ ಇದರ ಇತಿಹಾಸವೇ ಕಾಣೆಯಾಗಿದೆ.
ದೆಹಲಿ ಚುನಾವಣಾ ಫಲಿತಾಂಶದ ನಡುವೆ ಇದನ್ನು ತಿಳಿಯಲೇಬೇಕು,1500 ವರ್ಷಗಳ ಕಾಲ ಇತಿಹಾಸವೇ ಕಾಣೆ!
11:19 AM (IST) Feb 08
ಕೇಜ್ರಿವಾಲ್ ಯಮುನಾ ನದಿ ಮೇಲೆ ಆಪಾದನೆ ಮಾಡಿದ್ರು. ಜೈಲಿನಲ್ಲೇ ಕುಳಿತುಕೊಂಡು ಅಧಿಕಾರ ಮಾಡಿದ್ರು. ಯಾವ ಫೈಲ್‌ಗೂ ಸಹಿ ಹಾಕದೇ ಆಡಳಿತ ಸ್ಥಗಿತ ಮಾಡಿದ್ರು. ಬರುವಾಗ ಮಳ್ಳಿ ತರ ಬಂದು ಕಳ್ಳನ ತರ ಆಗೋದ ಎಂದು ಕ್ರೇಜಿವಾಲ್ ಬಗ್ಗೆ ಕಾಂಗ್ರೆಸ್ ಹೇಳಿತು.ದೊಡ್ಡ ಬಂಗಲಾೆ ಅಲ್ಲಿ 25 ರೂಮ್ ಇವೆಲ್ಲಾ ಮಾಡಿ ದುರಾಡಳಿತ ನಡೆಸಿದರು. ಕೆಮ್ಮುತ್ತಾ, ಮಫ್ಲರ್ ಕಟ್ಟಿಕೊಂಡು, ಜನರ ಕನಿಕರ ಗಳಿಸಲು ಯತ್ನಿಸಿದರು. ಕಾಂಗ್ರೆಸ್ ನ ವಂಶ ಪಾರಂಪರ್ಯ ಆಡಳಿತದ ಬಗ್ಗೆ ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್ ಟೀಕೆ ಮಾಡಿದ್ರು.
ದೇಶದ ಜನರ ಪ್ರೀತಿ ಮೋದಿ ಮೇಲೆ ಇದೆ. ಈಗ ಅದು ಸಾಬೀತು ಆಗಿದೆ. ದೆಹಲಿ ನಾಯಕರಿಗೆ ಅಭಿನಂದನೆ. ನಡ್ಡಾ, ಅಮಿತ್ ಶಾಗೆ ಅಭಿನಂದನೆ, ಎಂದಿದ್ದಾರೆ ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ್.
10:40 AM (IST) Feb 08
ಬಿಜೆಪಿ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಹಂತದಲ್ಲಿ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ್ ಮಾತನಾಡಿದ್ದು "ನೀವು ಜನರೊಂದಿಗೆ ಅಪ್ರಾಮಾಣಿಕರಾಗಿದ್ದರೆ, ಜನರು ಇದೇ ರೀತಿಯ ಫಲಿತಾಂಶವನ್ನು ನೀಡುತ್ತಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ, ದೆಹಲಿಯಲ್ಲಿ ಡಬಲ್-ಎಂಜಿನ್ ಸರ್ಕಾರ ರಚನೆಯಾಗಲಿದೆ' ಎಂದಿದ್ದಾರೆ.
10:21 AM (IST) Feb 08
ಚುನಾವಣಾ ಆಯೋಗದ ಪ್ರಕಾರ ಮುನ್ನಡೆಯಲ್ಲಿರುವ ಆಪ್ ಅಭ್ಯರ್ಥಿಗಳು
10:17 AM (IST) Feb 08
ದೆಹಲಿ ಚುನಾವಣೆಯಲ್ಲಿ ಮುನ್ನಡೆ ಕಂಡಿರುವ ಬಿಜೆಪಿ ಅಭ್ಯರ್ಥಿಗಳು
10:11 AM (IST) Feb 08
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಆರಂಭಿಕ ಟ್ರೆಂಡ್‌ನಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ಮುನ್ನಡೆ ಇರುವ ಕ್ಷೇತ್ರಗಳ ಪಟ್ಟಿಯಲ್ಲಿ ಕಾಂಗ್ರೆಸ್ ಸ್ಥಾನ ಪಡೆದಿಲ್ಲ.
09:52 AM (IST) Feb 08
ಸತತ ಹಿನ್ನಡೆಗಳ ಬಳಿಕ ಕೊನೆಗೂ ಅರವಿಂದ್ ಕೇಜ್ರಿವಾಲ್ ಮುನ್ನಡೆ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ 250+ ಮತಗಳಿಂದ ಮುನ್ನಡೆ ಕಂಡಿದ್ದಾರೆ. ಮನೀಷ್ ಸಿಸೋಡಿಯಾ ಕೂಡ ಮುನ್ನಡೆ ಕಂಡಿದ್ದಾರೆ.
09:41 AM (IST) Feb 08
ಚುನಾವಣಾ ಆಯೋಗದ ಅಧಿಕೃತ ಟ್ರೆಂಡ್ ಪ್ರಕಾರ ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನ ಆರಂಭಿಕ ಟ್ರೆಂಡ್‌ಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) 9 ಸ್ಥಾನಗಳಲ್ಲಿ ಮುಂದಿದೆ.
09:33 AM (IST) Feb 08
ಆಪ್ ಸರ್ಕಾರದ ಆರು ಸಚಿವರಿಗೆ ಸೋಲಿನ ಭೀತಿ. ಮನೀಷ್ ಸಿಸೋಡಿಯಾ, ಗೋಪಾಲ್ ರೈ, ಅತಿಶಿ ಮರ್ಲೆನಾ, ಸತ್ಯೇಂದ್ರ ಜೈನ್, ಅರವಿಂದ್ ಕೇಜ್ರಿವಾಲ್ ಸೇರಿದಂತೆ 6 ಮಂದಿಗೆ ಸೋಲಿನ ಭೀತಿ ಇದೆ. ಕೇಜ್ರಿವಾಲ್‌ಗೆ 7 ಸಾವಿರ ಮತಗಳ ಹಿನ್ನಡೆಯಲ್ಲಿದ್ದಾರೆ. ಮೂರೂ ಸುತ್ತಿನ ಮತ ಎಣಿಕೆಯಲ್ಲೂ ಕೇಜ್ರಿವಾಲ್‌ಗೆ ಹಿನ್ನಡೆಯಾಗಿದೆ.
09:30 AM (IST) Feb 08
ಗ್ರೇಟರ್ ಕೈಲಾಶ್‌ನಿಂದ ಎಎಪಿಯ ಸೌರಭ್ ಭಾರದ್ವಾಜ್ ಮುನ್ನಡೆ ಕಂಡಿದ್ದಾರೆ. ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ.
09:28 AM (IST) Feb 08
ಆರಂಭಿಕ ಟ್ರೆಂಡ್‌ಗಳ ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಮ್ ಆದ್ಮಿ ಪಕ್ಷ 19 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ.
09:27 AM (IST) Feb 08
ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಆರಂಭಿಕ ಟ್ರೆಂಡ್ ಪ್ರಕಾರ, ಕರವಾಲ್ ನಗರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷದ (ಎಎಪಿ) ಮನೋಜ್ ಕುಮಾರ್ ತ್ಯಾಗಿ ವಿರುದ್ಧ ಮುನ್ನಡೆಯಲ್ಲಿದ್ದಾರೆ.
09:26 AM (IST) Feb 08
ದೆಹಲಿ ಚುನಾವಣಾ ಫಲಿತಾಂಶ ಕ್ಷಣ ಕ್ಷಣದ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ..
09:23 AM (IST) Feb 08
ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಪ್ರಕಾರ, ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ.
08:54 AM (IST) Feb 08
ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿನ್ನಡೆ ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಪವೇಶ್ ವರ್ಮ ಮುನ್ನಡೆಯಲ್ಲಿದ್ದಾರೆ.
08:49 AM (IST) Feb 08
ಅರವಿಂದ್ ಕೇಜ್ರಿವಾಲ್ (ಎಎಪಿ) - ನವದೆಹಲಿ
ಹರೂನ್ ಯೂಸುಫ್ (ಕಾಂಗ್ರೆಸ್) - ಬಲ್ಲಿಮಾರನ್
ಅತಿಶಿ (ಎಎಪಿ) - ಕಲ್ಕಾಜಿ
ವಿಜೇಂದರ್ ಗುಪ್ತಾ (ಬಿಜೆಪಿ) - ರೋಹಿಣಿ
ಅರವಿಂದರ್ ಸಿಂಗ್ ಲವ್ಲಿ (ಬಿಜೆಪಿ) - ಗಾಂಧಿ ನಗರ
ಸೌರಭ್ ಭಾರದ್ವಾಜ್ (ಎಎಪಿ) - ಗ್ರೇಟರ್ ಕೈಲಾಶ್
ಕಪಿಲ್ ಮಿಶ್ರಾ (ಬಿಜೆಪಿ) - ಕರವಾಲ್ ನಗರ
ಸಂದೀಪ್ ದೀಕ್ಷಿತ್- ಕಾಂಗ್ರೆಸ್, ನವದೆಹಲಿ ಕ್ಷೇತ್ರ
ರಮೇಶ್ ಬಿಧೂಡಿ- ಬಿಜೆಪಿ- ಕಲ್ಕಾಜಿ ಕ್ಷೇತ್ರ
ಮನೀಶ್ ಸಿಸೋಡಿಯಾ- ಆಪ್- ಪ್ರತಾಪ್ಗಾಂಜ್ ಕ್ಷೇತ್ರ
ಅಭಿಶೇಷ್ ದತ್- ಕಸ್ತೂರ್ ಬಾ ನಗರ- ಕಾಂಗ್ರೆಸ್
08:40 AM (IST) Feb 08
ಆರಂಭಿಕ ಟ್ರೆಂಡ್‌ಗಳ ಪ್ರಕಾರ ವಿಶ್ವಾಸ ನಗರ ಹಾಗೂ ಶಹದಾರಾದಲ್ಲಿ ಬಿಜೆಪಿ ಮುನ್ನಡೆ ಕಂಡಿದೆ.
08:38 AM (IST) Feb 08
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಮೊದಲು ಅಂಚೆ ಮತ ಎಣಿಕೆ ನಡೆದಿದ್ದು, ಬಳಿದ ಉಳಿದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಮೂರು ಹಂತಗಳಲ್ಲಿ ಭದ್ರತೆ ನಿಯೋಜನೆ . ನವದೆಹಲಿ, ಕಲ್ಕಾಜಿ ಬಹಳ ಕುತೂಹಲ ಕೆರಳಿಸಿರುವ ಕ್ಷೇತ್ರಗಳು ಮಾಜಿ ಸಿಎಂ ಅರವಿಂದ್ , ಮಾಜಿ ಸಿಎಂಗಳ ಮಕ್ಕಳು ಸ್ಪರ್ಧೆ ಮಾಡಿದ್ದಾರೆ