ರೈಲ್ವೇ ಇಲಾಖೆಯಿಂದ ಬಿಗ್ ಅಲರ್ಟ್‌, ಒಟ್ಟು 53 ರೈಲುಗಳ ಓಡಾಟ ದಿಢೀರ್ ರದ್ದು! ಕಾರಣವೇನು?

Published : Oct 26, 2026, 10:30 PM IST
53 trains cancelled

ಸಾರಾಂಶ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಅರ್ನಾಬ್ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಅಕ್ಟೋಬರ್ 27 ಮತ್ತು 28ರಂದು 53 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅರ್ನಾಬ್ ಚಂಡಮಾರುತ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ? ಮಾಹಿತಿ ಸ್ಟೋರಿಯಲ್ಲಿದೆ.

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತವು ದೇಶದ ವಿವಿಧ ಭಾಗಗಳಲ್ಲಿ ಭಾರೀ ತೊಂದರೆಯನ್ನುಂಟು ಮಾಡುತ್ತಿದೆ. ಇದೀಗ ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಕ್ಟೋಬರ್ 27 ರಿಂದ 28ವರೆಗೆ 53 ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಅರ್ನಾಬ್ ಸೈಕ್ಲೋನ್ ಎಚ್ಚರಿಕೆಯನ್ನು ಉಲ್ಲೇಖಿಸಿ ದಕ್ಷಿಣ ಕರಾವಳಿ ರೈಲ್ವೇ, ತನ್ನ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾಗ ಮುಂಜಾಗೃತ ಕ್ರಮವನ್ನು ತೆಗೆದುಕೊಂಡಿದೆ. ಆಂಧ್ರಪ್ರದೇಶ ಮತ್ತು ನೆರೆಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸೇವೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಸೌತ್ ಕೋಸ್ಟ್ ರೈಲ್ವೇ ತಿಳಿಸಿರುವ ಮಾಹಿತಿ ಪ್ರಕಾರ.. ಅರ್ನಾಬ್ ಚಂಡ ಮಾರುತದಿಂದಾಗಿ ಸೇವೆಗಳನ್ನು ರದ್ದುಗೊಳಿಸಲು ಅನುಮತಿ ನೀಡಲಾಗಿದೆ. ರಾಜಮಂಡ್ರಿ, ವಿಜಯವಾಡ, ಮಚಲಿಪಟ್ಟಣಂ, ಗುಡಿವಾಡ, ಭೀಮಾವರಂ, ನಿಡದವೋಲು, ನರಸಾಪುರ, ಗುಂಟೂರು, ತೆನಾಲಿ, ವಿಶಾಖಪಟ್ಟಣಂ ಮತ್ತು ಇತರ ಸ್ಥಳಗಳ ನಡುವಿನ ರೈಲುಗಳು ಸೇರಿವೆ.

ಅಕ್ಟೋಬರ್ 27 ರಂದು ಹಲವಾರು ಸೇವೆಗಳನ್ನು ರದ್ದುಗೊಳಿಸಲು ಪಟ್ಟಿ ಮಾಡಲಾಗಿದೆ. ಇನ್ನು ಕೆಲವು ಅಕ್ಟೋಬರ್ 28 ಕ್ಕೆ ನಿಗದಿಯಾಗಿವೆ. ಕೆಲವು ರೈಲುಗಳನ್ನು ಎರಡೂ ದಿನಗಳಲ್ಲಿ ರದ್ದುಗೊಳಿಸಲು ಪಟ್ಟಿ ಮಾಡಲಾಗಿದೆ. ವಿಜಯವಾಡವನ್ನು ಮಚಲಿಪಟ್ಟಣ, ರಾಜಮಂಡ್ರಿ, ನರಸಾಪುರ ಮತ್ತು ಇತರ ನಿಲ್ದಾಣಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ರೈಲುಗಳು ಪರಿಣಾಮ ಬೀರುತ್ತವೆ ಎಂದು ತಿಳಿಸಲಾಗಿದೆ.

ಪ್ರಯಾಣಿಕರು ಹೊರಡುವ ಮೊದಲು ರೈಲು ಸೇವೆ ಇರುತ್ತೋ ಇರಲ್ವೋ ಅನ್ನೋದನ್ನು ತಿಳಿದುಕೊಂಡು ರೈಲು ಪ್ರಯಾಣದ ಪ್ಲಾನ್ ಮಾಡಬೇಕು. ಚಂಡಮಾರುತದ ಪರಿಸ್ಥಿತಿಯನ್ನು ನಮ್ಮ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ಆ ಬಳಿಕ ರೈಲುಗಳ ಓಡಾಟದ ಬಗ್ಗೆ ನಿರ್ಧಾರ ಆಗಲಿದೆ. ಅಕ್ಟೋಬರ್ 27 ಮತ್ತು 28 ರಂದು ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಅಧಿಕೃತ ರೈಲ್ವೆ ಮಾರ್ಗಗಳ ಮೂಲಕ ತಮ್ಮ ರೈಲುಗಳ ಚಾಲನೆಯಲ್ಲಿರುವ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಖಡಕ್ ಆಗಿ ತಿಳಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಪರಿಣಾಮ ಅರ್ನಾಬ್ ಎಂಬ ಚಂಡಮಾರುತ ಪರಿವರ್ತನೆಗೊಂಡಿದೆ. ಅಕ್ಟೋಬರ್ 28, 2026 ರ ಮಧ್ಯಾಹ್ನ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ಮಧ್ಯೆ ಹಾಗೂ ಯಾನಂ ಕರಾವಳಿಯಲ್ಲಿ ಇದು ಅಪ್ಪಳಿಸಲಿದೆ. ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಭೀಕರ ಗಾಳಿ ಬೀಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಎಚ್ಚರಿಕೆ ನೀಡಲಾಗಿದೆ. ಒಡಿಶಾದಲ್ಲಿ ಮುನ್ನೆಚ್ಚರಿಕೆಗಾಗಿ 6 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕದ ಮೇಲೆ ಎಫೆಕ್ಟ್‌?

ಹವಾಮಾನ ಇಲಾಖೆ ನೀಡಿರುವ ಮಾಹಿತಿಗಳ ಪ್ರಕಾರ.. ಅರ್ನಾಬ್ ಚಂಡಮಾರುತದಿಂದ ಕರ್ನಾಟಕದ ಮೇಲೆ ನೇರವಾದ ದೊಡ್ಡ ಪರಿಣಾಮ ಅಥವಾ ಭಾರಿ ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಒಣ ಹವೆ ಮುಂದುವರಿದಿದೆ. ಈ ಚಂಡಮಾರುತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗಲಿದೆ. ಅಕ್ಟೋಬರ್ 28 ರಂದು ಆಂಧ್ರಪ್ರದೇಶ ಮತ್ತು ಯನಂ ಕರಾವಳಿಯ ನಡುವೆ ಅಪ್ಪಳಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ಅಸ್ಸಾಂನ ಹೋಟೆಲ್‌ನಲ್ಲಿ ಭೀಕರ ಗುಂಡಿನ ದಾಳಿ, ಐವರು ಸಾವು; ಬಂದೂಕುಧಾರಿ ಕೃತ್ಯ
Delhi North Block Fire: ಭಾರತ-ಚೀನಾ ಗಡಿ ಸಂಘರ್ಷದ ನಡುವೆ ಇತ್ತ ರಾಷ್ಟ್ರಪತಿ ಭವನದ ಸಮೀಪ ಬೆಂಕಿ ಅವಘಡ! ಆಗಿದ್ದೇನು?