225 ಹಾಲಿ ಲೋಕಸಭಾ ಸದಸ್ಯರ ಮೇಲಿದೆ ಕ್ರಿಮಿನಲ್‌ ಕೇಸ್‌

By Kannadaprabha NewsFirst Published Mar 30, 2024, 10:36 AM IST
Highlights

ಲೋಕಸಭಾ ಚುನಾವಣೆಗೂ ಮುನ್ನ ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬಿಡುಗಡೆ ಮಾಡಿರುವ ವರದಿ ಅನ್ವಯ, 225 ಕ್ರಿಮಿನಲ್‌ ಕೇಸ್‌ ಹೊಂದಿರುವ ಸಂಸದರ ಪೈಕಿ ಶೇ.29ರಷ್ಟು ಸಂಸದರ ಮೇಲೆ ಕೊಲೆ, ಕೊಲೆ ಯತ್ನ, ಮಹಿಳಾ ಶೋಷಣೆ, ಅಪಹರಣ ರೀತಿ ಗಂಭೀರ ಪ್ರಕರಣಗಳಿವೆ. ಈ ಗಂಭೀರ ಪ್ರಕರಣಗಳನ್ನು ಹೊಂದಿರುವವರ ಪೈಕಿ 9 ಸಂಸದರ ಮೇಲೆ ಕೊಲೆ ಪ್ರಕರಣವಿದೆ. ಇದರಲ್ಲಿ ಐವರು ಆಡಳಿತ ಬಿಜೆಪಿ ಸಂಸದರಾಗಿದ್ದಾರೆ.

ನವದೆಹಲಿ(ಮಾ.30):  ಹಾಲಿ ಲೋಕಸಭೆಯ 514 ಸದಸ್ಯರ ಪೈಕಿ 225 ಜನರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಇದು ಒಟ್ಟು ಸಂಸದರ ಪೈಕಿ ಶೇ.44ರಷ್ಟು. ಜೊತೆಗೆ ಒಟ್ಟು ಸಂಸದರ ಪೈಕಿ ಶೇ.5ರಷ್ಟು ಜನರು ಶತಕೋಟ್ಯಧಿಪತಿಗಳು ಎಂದು ವರದಿಯೊಂದು ಹಳಿದೆ.

ಲೋಕಸಭಾ ಚುನಾವಣೆಗೂ ಮುನ್ನ ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬಿಡುಗಡೆ ಮಾಡಿರುವ ವರದಿ ಅನ್ವಯ, 225 ಕ್ರಿಮಿನಲ್‌ ಕೇಸ್‌ ಹೊಂದಿರುವ ಸಂಸದರ ಪೈಕಿ ಶೇ.29ರಷ್ಟು ಸಂಸದರ ಮೇಲೆ ಕೊಲೆ, ಕೊಲೆ ಯತ್ನ, ಮಹಿಳಾ ಶೋಷಣೆ, ಅಪಹರಣ ರೀತಿ ಗಂಭೀರ ಪ್ರಕರಣಗಳಿವೆ. ಈ ಗಂಭೀರ ಪ್ರಕರಣಗಳನ್ನು ಹೊಂದಿರುವವರ ಪೈಕಿ 9 ಸಂಸದರ ಮೇಲೆ ಕೊಲೆ ಪ್ರಕರಣವಿದೆ. ಇದರಲ್ಲಿ ಐವರು ಆಡಳಿತ ಬಿಜೆಪಿ ಸಂಸದರಾಗಿದ್ದಾರೆ.
ಉಳಿದಂತೆ ಬಿಜೆಪಿಯ 21 ಸೇರಿ ಒಟ್ಟು 28 ಸಂಸದರು ಕೊಲೆ ಯತ್ನ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು 16 ಸಂಸದರು ಮಹಿಳೆ ಮೇಲೆ ಅಪರಾಧ ಎಸಗಿದ ಪ್ರಕರಣಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮೂವರ ಮೇಲೆ ಅತ್ಯಾಚಾರ ಪ್ರಕರಣಗಳಿವೆ.

225 ರಾಜ್ಯಸಭಾ ಸದಸ್ಯರ ಒಟ್ಟು ಆಸ್ತಿ 19602 ಕೋಟಿ! ಅಚ್ಚರಿಯ ಅಂಶ ಬೆಳಕಿಗೆ, ಶ್ರೀಮಂತ ಪಕ್ಷ ಯಾವುದು?

ಇನ್ನು ಆಸ್ತಿ ವಿಚಾರಕ್ಕೆ ಬರುವುದಾದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚು ಶ್ರೀಮಂತ ಸಂಸದರಿದ್ದಾರೆ. ಇದರ ಜೊತೆಗೆ ಇತರೆ ಪಕ್ಷಗಳಲ್ಲಿಯೂ ಶ್ರೀಮಂತರಿದ್ದಾರೆ. ಶ್ರೀಮಂತ ಸಂಸದರ ಪೈಕಿ ಮಧ್ಯಪ್ರದೇಶದ ಕಾಂಗ್ರೆಸ್‌ ಸಂಸದ ನಕುಲ್‌ ನಾಥ್‌, ಕರ್ನಾಟಕದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹಾಗೂ ಸ್ವತಂತ್ರ ಸಂಸದ ಕನುಮುರು ರಘುರಾಮ ಕೃಷಣ ರಾಜು ಅಗ್ರ 3 ಸ್ಥಾನ ಪಡೆದುಕೊಂಡಿದ್ದಾರೆ. ಸಂಸದರ ಶೈಕ್ಷಣಿಕ ವಿಚಾರಕ್ಕೆ ಬಂದರೆ ಶೇ.73 ಸದಸ್ಯರು ಪದವಿ ಹಾಗೂ ಉನ್ನತ ಶಿಕ್ಷಣ ಪೂರೈಸಿದ್ದಾರೆ.

click me!