
ಚೆನ್ನೈ (ಫೆ.26): ಸಾರಿಗೆ ವ್ಯವಸ್ಥೆಯ ವೇಗವನ್ನು ಬಲ ಪಡಿಸಲು ಚೆನ್ನೈನಲ್ಲಿ ಕಳೆದ ವರ್ಷ ಸಿದ್ಧವಾಗಿದ್ದ ದೇಶದ ಮೊದಲ ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ಮಂಗಳವಾರ ಅನಾವರಣ ಮಾಡಲಾಗಿದೆ. ಈ ಟ್ರ್ಯಾಕ್‌ನಲ್ಲಿ ರೈಲು ಗಂಟೆಗೆ ಗರಿಷ್ಠ 1200 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಇದು ಯಶಸ್ವಿಯಾದರೆ, ಉದಾಹರಣೆಗೆ ದಿಲ್ಲಿ-ಜೈಪುರ ನಡುವಿನ 300 ಕಿ.ಮೀ ಮಾರ್ಗವನ್ನು 30 ನಿಮಿಷದಲ್ಲಿ ತಲುಪಬಹುದು.ಐಐಟಿ ಮದ್ರಾಸ್‌ನ ಸಹಾಯದಿಂದ ರೈಲ್ವೆ ಇಲಾಖೆ 422 ಮೀ ಉದ್ದದ ಹೈಪರ್‌ಲೂಪ್ (ರೈಲು ಚಲಿಸುವ ಸುರಂಗದ ರೀತಿಯ ಪೈಪ್‌ನಲ್ಲಿನ ಮಾರ್ಗ) ಮಾರ್ಗವನ್ನು ಅಭಿವೃದ್ಧಿ ಪಡಿಸಿದೆ. ಇದು ಸಂಚಾರಕ್ಕೆ ಇನ್ನಷ್ಟು ವೇಗ ನೀಡಲಿದೆ.ಈ ಬಗ್ಗೆ ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ ಸರ್ಕಾರ ಮತ್ತು ಐಐಟಿಯ ಈ ಕಾರ್ಯಾಚರಣೆ ಭವಿಷ್ಯದಲ್ಲಿ ಸಾರಿಗೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಮುನ್ನಡೆಸಲಿದೆ’ ಎಂದಿದ್ದಾರೆ.
ಏನಿದು ಹೈಪರ್‌ಲೂಪ್ ಟ್ರ್ಯಾಕ್ ?: 5ನೇ ಸಾರಿಗೆ ವಿಧಾನ ಎಂದು ಕರೆಯಲ್ಪಡುವ ಹೈಪರ್‌ಲೂಪ್ ದೂರ ಪ್ರಯಾಣಕ್ಕಾಗಿ ಒಂದು ಹೈಸ್ಪೀಡ್ ಸಾರಿಗೆ ವ್ಯವಸ್ಥೆಯಾಗಿದೆ. ಇದು ರೈಲುಗಳ ನಿರ್ವಾತ ಕೊಳವೆಗಳಲ್ಲಿ ವಿಶೇಷ ಕ್ಯಾಪ್ಸೂಲ್‌ಗಳ ಮೂಲಕ ಅತಿ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ವಿಮಾನಕ್ಕಿಂತ 2 ಪಟ್ಟು ವೇಗದಲ್ಲಿ ಚಲಿಸಬಹುದು. ಕಡಿಮೆ ವಿದ್ಯುತ್ ಬಳಕೆ ಮತ್ತು 24 ಗಂಟೆಗೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ