* ಉತ್ತರ ಪ್ರದೇಶದಲ್ಲಿ ಮತ್ತೊಂದು ಸೌಲಭ್ಯ
* ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಮುನಾ ಪ್ರದೇಶದ ಸೆಕ್ಟರ್‌ಗಳ ನಡುವೆ ಪಾಡ್ ಟ್ಯಾಕ್ಸಿ
* ದೇಶದ ಮೊದಲ ಪಾಡ್ ಟ್ಯಾಕ್ಸಿ ಓಡಾಡುವ ರಾಜ್ಯವಾಗಲಿದೆ ಉತ್ತರ ಪ್ರದೇಶ
ಲಕ್ನೋ(ಫೆ.22): ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಮುನಾ ಪ್ರದೇಶದ ಸೆಕ್ಟರ್‌ಗಳ ನಡುವೆ ಚಲಿಸುವ ಪಾಡ್ ಟ್ಯಾಕ್ಸಿಗಳ ಮಾರ್ಗವನ್ನು ಮಂಗಳವಾರ ಬದಲಾಯಿಸಲಾಗುತ್ತದೆ. ಅದರ ಹೊಸ ಡಿಪಿಆರ್ ಸೋಮವಾರ ಸಿದ್ಧಗೊಂಡಿದೆ. ಪಾಡ್ ಟ್ಯಾಕ್ಸಿ ವಿಮಾನ ನಿಲ್ದಾಣದಿಂದ ಯಮುನಾ ಪ್ರಾಧಿಕಾರದ ಸೆಕ್ಟರ್ 20-21 ರವರೆಗೆ ಚಲಿಸಲಿದೆ. ಪಾಡ್ ಟ್ಯಾಕ್ಸಿ ಓಡಿಸುವ ಯೋಜನೆಗೆ ಹೊಸ ಡಿಪಿಆರ್ ಸಿದ್ಧಪಡಿಸಲಾಗಿದೆ. ಈಗ 12 ಕಿ.ಮೀ ಟ್ರ್ಯಾಕ್ ಸಿದ್ಧವಾಗಲಿದ್ದು, 12 ನಿಲ್ದಾಣಗಳಿವೆ. ಈ ಯೋಜನೆಗೆ ಸುಮಾರು 810 ಕೋಟಿ ರೂ. ವಿನಿಯೋಗಿಸಲಾಗುತ್ತದೆ.
ಆದರೆ, ಈ ಹಿಂದೆ 14.6 ಕಿ.ಮೀ.ವರೆಗೆ ಈ ಟ್ರ್ಯಾಕ್ ನಿರ್ಮಿಸಿ 17 ನಿಲ್ದಾಣಗಳನ್ನು ನಿರ್ಮಿಸಬೇಕಿತ್ತು. ಅಲ್ಲದೆ 864 ಕೋಟಿ ರೂ. ವೆಚ್ಚ ಮಾಡಬೇಕಿತ್ತು. ಆದರೀಗ ಮತ್ತೊಮ್ಮೆ ಮಂಗಳವಾರ, ಹೊಸ ಡಿಪಿಆರ್ ಮಂಗಳವಾರ ಮುದ್ರೆಯೊತ್ತಲಿದೆ. ಪಾಡ್ ಟ್ಯಾಕ್ಸಿಯ ಈ ಯೋಜನೆಯನ್ನು ಜನವರಿ 2024 ರೊಳಗೆ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ.
UP Elections: ಪಂಕ್ಚರ್ ಸೈಕಲ್ ಬೇಕೇ? ಬುಲೆಟ್ ರೈಲೇ?: ಮತದಾರರಿಗೆ ಯೋಗಿ
ಈ ಟ್ಯಾಕ್ಸಿಗಳು ಗಂಟೆಗೆ 15 ರಿಂದ 40 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಪಾಡ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು, ನೀವು ಪ್ರತಿ ಕಿ.ಮೀ.ಗೆ ಎಂಟು ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಟ್ಯಾಕ್ಸಿಯಲ್ಲಿ ಎಂಟು ಜನರು ಕುಳಿತು, 13 ಜನರು ನಿಂತು ಪ್ರಯಾಣಿಸಬಹುದು. ಪಾಡ್ ಟ್ಯಾಕ್ಸಿಗಳು ಪ್ರತಿ ಅರ್ಧಗಂಟೆಗೆ ಲಭ್ಯವಿರುತ್ತವೆ.
ಮೊದಲ ಹಂತದಲ್ಲಿ ಐದು ಟ್ಯಾಕ್ಸಿಗಳನ್ನು ಓಡಿಸಲು ಗುರಿ ನಿಗದಿಪಡಿಸಲಾಗಿದೆ. ಒಮ್ಮೆ ಕಾರ್ಯಾಚರಣೆ ಆರಂಭವಾದರೆ, ಯುಪಿ ಪಾಡ್ ಟ್ಯಾಕ್ಸಿಗಳನ್ನು ಓಡಿಸುವ ದೇಶದ ಮೊದಲ ರಾಜ್ಯವಾಗಲಿದೆ. ಒಂದು ಬಾರಿಗೆ 500 ಕೆಜಿ ವರೆಗೆ ಸಾಗಿಸುವ ಪಾಡ್ ಟ್ಯಾಕ್ಸಿಯ ತೂಕ 820 ಕೆಜಿ ಇರುತ್ತದೆ. ಸಣ್ಣ ರಸ್ತೆಗಳು, ಆಸ್ಪತ್ರೆ, ಮಾಲ್, ಹೋಟೆಲ್, ಕಚೇರಿ ಗೇಟ್ ಮುಂದೆ ಇದನ್ನು ಓಡಿಸಬಹುದು. ಇದೊಂದು ಚಿಕ್ಕ ಬ್ಯಾಟರಿ ಚಾಲಿತ ಕಾರು. ಇದು ಕಂಪ್ಯೂಟರ್ ಚಾಲಿತ ಟ್ಯಾಕ್ಸಿ ಆಗಿರುತ್ತದೆ.
ಜಗತ್ತಿನ ಮೊದಲ ಹೈಪರ್‌ಲೂಪ್ ಭಾರತದಲ್ಲಿ?
ನೆಲದ ಮೇಲಿನ ಸಾರಿಗೆಯ ವೇಗವನ್ನು ವಿಮಾನದ ವೇಗಕ್ಕೆ ಹೆಚ್ಚಿಸುವ ನಿರೀಕ್ಷೆಯಿರುವ ಕ್ರಾಂತಿಕಾರಿ ಹೈಪರ್‌ಲೂಪ್, ಜಗತ್ತಿನಲ್ಲೇ ಮೊಟ್ಟಮೊದಲ ಬಾರಿ ಭಾರತದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ವಿವಿಧ ಹೈಪರ್‌ಲೂಪ್ ಕಂಪನಿಗಳು ಈ ಕುರಿತು ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸುತ್ತಿವೆಯಾದರೂ ಅಂತಿಮವಾಗಿ ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಈ ವ್ಯವಸ್ಥೆ ಮೊದಲು ಸಾಕಾರವಾಗಲಿದೆ ಎಂದು ವರ್ಜಿನ್ ಹೈಪರ್‌ಲೂಪ್ ಸಂಸ್ಥೆಯ ಮಾಲಿಕರಲ್ಲೊಬ್ಬರಾದ ಸುಲ್ತಾನ್ ಅಹ್ಮದ್ ಬಿನ್ ಸುಲೇಯಮ್ ಹೇಳಿದ್ದಾರೆ.
ಈ ಹಿಂದೆ 2018ರಲ್ಲೇ ವರ್ಜಿನ್ ಹೈಪರ್‌ಲೂಪ್ ಕಂಪನಿಯ ಚೇರ್ಮನ್ ರಿಚರ್ಡ್ ಬ್ರಾನ್ಸನ್ ಪುಣೆ ಮತ್ತು ಮುಂಬೈ ನಡುವೆ ಹೈಪರ್‌ಲೂಪ್ ಆರಂಭಿಸುವುದಾಗಿ ಪ್ರಕಟಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಅದು ಮುಂದುವರೆಯಲಿಲ್ಲ. ನಂತರ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಕಲ್ಪಿಸುವ ಮಾರ್ಗದ ಸಮೀಕ್ಷೆಗೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅದೇ ಕಂಪನಿಯಲ್ಲಿ ಬಹುಪಾಲು ಷೇರು ಹೊಂದಿರುವ ಯುಎಇಯ ಬಹುರಾಷ್ಟ್ರೀಯ ಲಾಜಿಸ್ಟಿಕ್ ಕಂಪನಿ ಡಿಪಿ ವಲ್ಡ್‌ರ್‍ನ ಸಿಇಒ ಸುಲ್ತಾನ್ ಅಹ್ಮದ್ ಮತ್ತೊಮ್ಮೆ ಭಾರತದಲ್ಲೇ ಜಗತ್ತಿನಲ್ಲಿ ಮೊದಲ ಹೈಪರ್‌ಲೂಪ್ ಆರಂಭವಾಗುವ ಸುಳಿವು ನೀಡಿದ್ದಾರೆ.
UP Elections: ಕೈ ಭದ್ರಕೋಟೆಗೆ ಬಿಜೆಪಿ ಲಗ್ಗೆ? ಕೇಸರಿ ಬಾವುಟ ಹಾರಿಸ್ತಾರಾ ಅದಿತಿ ಸಿಂಗ್?
‘ಯುಎಇಗಿಂತ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಮೊದಲ ಹೈಪರ್‌ಲೂಪ್ ಆರಂಭವಾಗಲಿದೆ. ಇದಕ್ಕೆ ದಶಕಗಳೇನೂ ಹಿಡಿಯುವುದಿಲ್ಲ. ಈ ದಶಕದ ಅಂತ್ಯದೊಳಗೇ ಜಗತ್ತಿನ ಹಲವು ಭಾಗಗಳಲ್ಲಿ ಹೈಪರ್‌ಲೂಪ್‌ನಲ್ಲಿ ಜನರು ಪ್ರಯಾಣಿಸಬಹುದು. ಹೈಪರ್‌ಲೂಪ್‌ನ ಆರ್ಥಿಕ ಲೆಕ್ಕಾಚಾರ ಕೂಡ ಆಕರ್ಷಕವಾಗಿದೆ. ಬಹುಶಃ ವಿಮಾನದ ವೇಗದಲ್ಲಿ ಜನರು ಟ್ರಕ್‌ನ ಹಣಕ್ಕೆ ಪ್ರಯಾಣಿಸಬಹುದು’ ಎಂದು ಭಾನುವಾರ ದುಬೈ ಎಕ್ಸ್‌ಪೋದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.
ದುಬೈ ಎಕ್ಸ್‌ಪೋದಲ್ಲಿ ವರ್ಜಿನ್ ಹೈಪರ್‌ಲೂಪ್ ಕಂಪನಿ ಪೂರ್ಣ ಪ್ರಮಾಣದ ಹೈಪರ್‌ಲೂಪ್ ಪಾಡ್ ಅನ್ನು ಪ್ರದರ್ಶನಕ್ಕಿರಿಸಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹೈಪರ್‌ಲೂಪ್ ಪಾಡ್‌ನೊಳಗೆ ಮನುಷ್ಯರು ಪ್ರಯಾಣಿಸಿ ಪರೀಕ್ಷೆ ನಡೆಸಿದ್ದು, ಯಶಸ್ವಿಯಾಗಿದೆ.