ದೇಶದಲ್ಲಿ ಕೊರೋನಾ ಅಕ್ಟೋಬರಲ್ಲಿ ತಾರಕಕ್ಕೆ, ಮಾರ್ಚ್‌ವರೆಗೂ ಇರುತ್ತೆ!

By Kannadaprabha News  |  First Published Jul 16, 2020, 7:28 AM IST

ಅಕ್ಟೋಬರಲ್ಲಿ ತಾರಕಕ್ಕೆ, ಮಾರ್ಚ್‌ವರೆಗೆ ಇರುತ್ತೆ| ಬೆಂಗಳೂರು ಐಐಎಸ್ಸಿ ಹಾಗೂ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಪ್ರತ್ಯೇಕ ಅಧ್ಯಯನ| ದೇಶದಲ್ಲಿ 6.18 ಕೋಟಿ ಜನರಿಗೆ, ಕರ್ನಾಟಕದಲ್ಲಿ 32 ಲಕ್ಷ ಮಂದಿಗೆ ಸೋಂಕು ಸಾಧ್ಯತೆ: ತಜ್ಞರ ಅಂದಾಜು| 6.18 ಕೋಟಿ: 2021ರ ಮಾರ್ಚ್‌ಗೆ ದೇಶದಲ್ಲಿ ಸೋಂಕಿತರ ಅಂದಾಜು


ಬೆಂಗಳೂರು(ಜು.16): ರಾಜ್ಯದಲ್ಲಿ ಕರೋನಾ ಸೆಪ್ಟಂಬರ್‌ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ತನ್ನ ಉಚ್ಛ್ರಾಯ ಸ್ಥಿತಿ ಮುಟ್ಟಲಿದೆ. ಆದರೂ, ಈ ವೈರಾಣು 2021ರ ಮಾಚ್‌ರ್‍ವರೆಗೂ ರಾಜ್ಯವನ್ನು ಕಾಡಲಿದೆ. ಈ ಅವಧಿಯಲ್ಲಿ ರಾಜ್ಯದ ಸುಮಾರು 32 ಲಕ್ಷ ಜನ ಸೋಂಕಿಗೆ ಗುರಿಯಾಗಲಿದ್ದಾರೆ!

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಂಪ್ಯೂಟೇಷನಲ್‌ ಡೇಟಾ ಸೈನ್ಸ್‌ ವಿಭಾಗ ಹಾಗೂ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ ನಡೆಸಿರುವ ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ಕರೋನಾ ಸೋಂಕು ಯಾವ ರೀತಿ ರಾಜ್ಯವನ್ನು ಬಾಧಿಸಬಹುದು ಎಂಬ ಲೆಕ್ಕಾಚಾರದ ಸಾರವಿದು. ಈ ವರದಿಗಳ ಪ್ರಕಾರ, ರಾಜ್ಯ ಹಾಗೂ ರಾಜಧಾನಿ ಬೆಂಗಳೂರು ಕೊರೋನಾದ ಮತ್ತಷ್ಟುಕರಾಳ ದಿನಗಳನ್ನು ನೋಡಬೇಕಿದೆ.

Tap to resize

Latest Videos

ಖಾಸಗಿ ಆಸ್ಪತ್ರೆಗಳ ಶೇ.50 ಹಾಸಿಗೆ ಕೊರೋನಾ ಚಿಕಿತ್ಸೆಗೆ!

ಈ ತಜ್ಞರ ಪ್ರಕಾರ ಈಗಾಗಲೇ ಬೆಂಗಳೂರು ನಗರ ಒಂದರಲ್ಲೇ 2.23 ಲಕ್ಷದಷ್ಟುಮಂದಿಗೆ ಸೋಂಕು ಉಂಟಾಗಿರಬಹುದು. ಇದಲ್ಲದೆ ಸೋಂಕು ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ 2021ರ ಮಾಚ್‌ರ್‍ವರೆಗೂ ಸೋಂಕು ಹರಡಲಿದ್ದು, ರಾಜ್ಯ ಒಂದರಲ್ಲೇ 32 ಲಕ್ಷ ಮಂದಿಗೆ ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ರಾಜ್ಯದ ಜನತೆಗೆ ತಜ್ಞರು ಆತಂಕ ಉಂಟು ಮಾಡುವ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ದೇಶದಲ್ಲಿ 6.18 ಕೋಟಿ ಮಂದಿಗೆ!:

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಂಪ್ಯೂಟೇಷನಲ್‌ ಡೇಟಾ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್‌ ಗಣೇಶನ್‌, ತಮ್ಮ ಅಧ್ಯಯನದ ಪ್ರಕಾರ 2021ರ ಮಾಚ್‌ರ್‍ವರೆಗೆ ಏರುಗತಿಯಲ್ಲೇ ಸಾಗಲಿದೆ. ಮಾಚ್‌ರ್‍ ವೇಳೆಗೆ ದೇಶದ 6.18 ಕೋಟಿ ಮಂದಿಗೆ ಸೋಂಕು ತಗುಲಲಿದೆ. 82 ಲಕ್ಷ ಮಂದಿ ಸಕ್ರಿಯ ಸೋಂಕಿತರು ಇರಲಿದ್ದಾರೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ನೇಮಕ!

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ನಮ್ಮ ಅಧ್ಯಯನ ಪ್ರಮುಖವಾಗಿ ದೇಶದ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸಲಾಗಿದೆ. ದೇಶದಲ್ಲಿನ ಈಗಿನ ಸ್ಥಿತಿಗತಿ, ಸುಧಾರಿತ ಸನ್ನಿವೇಶ, ಅತ್ಯಂತ ಕಳಪೆ ಸನ್ನಿವೇಶ, ಭಾನುವಾರದ ಲಾಕ್‌ಡೌನ್‌ ಆಧಾರದ ಮೇಲಿನ ಈಗಿನ ಸ್ಥಿತಿಗತಿ ಅಥವಾ ಒಂದು ವೇಳೆ ಭಾನುವಾರ ಹಾಗೂ ಬುಧವಾರ ಲಾಕ್‌ಡೌನ್‌ ಮಾಡಿದರೆ ಹೇಗೆ ಎಂಬ ನಾಲ್ಕು ಸ್ಥಿತಿಗಳನ್ನು ಆಧರಿಸಿ ಭವಿಷ್ಯದಲ್ಲಿ ಎಷ್ಟುಸೋಂಕು ಉಂಟಾಗಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ.

‘ಕಳೆದ 30 ದಿನಗಳ ಸೋಂಕು ಪ್ರಮಾಣ ಗಮನಿಸಿದರೆ ಪ್ರಸ್ತುತ ನಾವು ಅತ್ಯಂತ ಕಳಪೆ ಸನ್ನಿವೇಶದಲ್ಲಿದ್ದು ಇದೇ ರೀತಿ ಮುಂದುವರೆದರೆ 6.18 ಕೋಟಿ ಮಂದಿ ಸೋಂಕಿತರಾಗಬಹುದು. ಇದೇ ರೀತಿ ರಾಜ್ಯಗಳ ವಿಶ್ಲೇಷಣೆಗೆ ಬಂದರೆ ಕರ್ನಾಟಕ ಒಂದರಲ್ಲೇ 32 ಲಕ್ಷ ಮಂದಿಗೆ ಸೋಂಕು ಉಂಟಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ಈಗಾಗಲೇ 2.23 ಲಕ್ಷ ಸೋಂಕು?:

ರಾಜ್ಯ ಸರ್ಕಾರದ ತಜ್ಞರ ಸಮಿತಿ ಹಿರಿಯ ಸದಸ್ಯರಾದ ಡಾ.ಗಿರಿಧರ ಬಾಬು ಅವರ ಪ್ರಕಾರ, ‘ಈಗಾಗಲೇ ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಸೋಂಕು ಉಂಟಾಗಿರಬಹುದು’.

‘ಬುಧವಾರ ವರದಿಯಾಗಿರುವ 1975 ಪ್ರಕರಣಗಳು ವಾರದ ಹಿಂದೆ ಸೋಂಕಿಗೆ ಗುರಿಯಾಗಿರುವ ಪ್ರಕರಣಗಳು. ಹೀಗಾಗಿ ಸಾಂಕ್ರಾಮಿಕ ರೋಗಶಾಸ್ತ್ರದ ಲೆಕ್ಕಾಚಾರ ಪ್ರಕಾರ ಈಗಾಗಲೇ ಬೆಂಗಳೂರಿನಲ್ಲಿ 2.23 ಲಕ್ಷ ಜನರಿಗೆ ಸೋಂಕು ಉಂಟಾಗಿರುವ ಸಾಧ್ಯತೆ ಇದೆ’ ಎಂದು ಬಾಬು ಹೇಳಿದರು.

ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗ ತಜ್ಞರೂ ಆದ ಗಿರಿಧರಬಾಬು, ‘ಜನರಿಗೆ ಸಾರ್ವಜನಿಕ ಆರೋಗ್ಯದ ಬಗ್ಗೆ ಸಂದೇಶ ನೀಡಲು ಈ ಅಧ್ಯಯನ ನಡೆಸಿದ್ದೇವೆ. ಜತೆಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲೂ ಸಹ ಇದು ನೆರವಾಗುತ್ತದೆ. ಇಷ್ಟುಪ್ರಕರಣ ಈಗಾಗಲೇ ಸಮುದಾಯದಲ್ಲಿರುವುದರಿಂದ ಆದರೂ ಜನರು ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಹಾಗೂ ಜನದಟ್ಟಣೆ ಪ್ರದೇಶದಲ್ಲಿ ಓಡಾಡದಂತೆ ಇರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇರಳ ಸನ್ಯಾಸಿನಿ ರೇಪ್‌: ಆರೋಪಿ ಪಾದ್ರಿ ಮುಲಕ್ಕಲ್‌ಗೆ ಕೊರೋನಾ!

ತಾರಕ ಸ್ಥಿತಿಗೆ ಸೋಂಕು:

‘ಸೋಂಕು ಉಚ್ಛ್ರಾಯ ಸ್ಥಿತಿಗೆ ತಲುಪಲು ಎರಡು ತಿಂಗಳ ಕಾಲಾವಕಾಶ ಬೇಕು. ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ವೇಳೆಗೆ ಸೋಂಕು ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ ಎಂದು ಗಿರಿಧರ ಬಾಬು ಹೇಳಿದರು. ಅಲ್ಲದೆ, ‘ಈ ವೇಳೆಗೆ ಎಷ್ಟುಸೋಂಕು ಪ್ರಕರಣ ವರದಿಯಾಗಲಿದೆ. ಜತೆಗೆ ರಾಜ್ಯದಲ್ಲಿ ಎಷ್ಟುಸೋಂಕು ಈಗಾಗಲೇ ಉಂಟಾಗಿರಬಹುದು ಎಂಬುದರ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಸಬೇಕು’ ಎಂದರು.

ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ತಜ್ಞರ ಸಮಿತಿ ಸದಸ್ಯರೂ ಆದ ಡಾ.ಸಿ.ಎನ್‌.ಮಂಜುನಾಥ, ರಾಜ್ಯ ಸರ್ಕಾರಕ್ಕೆ ಸಾಂಕ್ರಾಮಿಕ ರೋಗ ತಜ್ಞರು ಸಲ್ಲಿಸಿರುವ ವರದಿಗಳ ಆಧಾರದ ಮೇಲೆ ಅಕ್ಟೋಬರ್‌ ವೇಳೆಗೆ ಸೋಂಕು ಉಚ್ಛ್ರಾಯ ಸ್ಥಿತಿಗೆ ಹೋಗಲಿದೆ ಎಂದರು.

ಇನ್ನು ಐಐಎಸ್ಸಿ ತಜ್ಞರಾದ ಡಾ.ಶಶಿಕುಮಾರ್‌ ಗಣೇಶನ್‌, ‘ಅತ್ಯಂತ ಕಳಪೆ ಸ್ಥಿತಿಯಲ್ಲೇ ಮುಂದುವರೆದರೆ ಮುಂದಿನ ವರ್ಷದ ಮಾಚ್‌ರ್‍ವರೆಗೆ ಸೋಂಕು ಏರುಗತಿಯಲ್ಲೇ ಸಾಗುತ್ತದೆ’ ಎಂದು ಹೇಳಿದರು.

click me!