ಕೊರೋನಾಗೆ ಬಲಿ ಆದ ಭಾರತೀಯರಲ್ಲಿ ಶೇ.65 ಪುರುಷರು!| ಮೃತರಲ್ಲಿ ಶೇ.50ರಷ್ಟುಮಂದಿ 60 ವರ್ಷ ಮೇಲ್ಪಟ್ಟವರು
ನವದೆಹಲಿ(ಮೇ.02): ಭಾರತದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಕೊರೋನಾ ವೈರಸ್‌ನಿಂದ ಸಾವನ್ನಪ್ಪುತ್ತಿರುವ ಪುರುಷರ ಸಂಖ್ಯೆಯೇ ಅಧಿಕವಾಗಿದೆ. ಭಾರತದಲ್ಲಿ ಕೊರೋನಾಕ್ಕೆ ಬಲಿ ಆದವರ ಪೈಕಿ ಶೇ.65ರಷ್ಟುಮಂದಿ ಪುರುಷರಾಗಿದ್ದಾರೆ. ಅಲ್ಲದೇ ಸಾವನ್ನಪ್ಪಿದವರಲ್ಲಿ ಅರ್ಧದಷ್ಟುಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ-ಅಂಶಗಳು ತಿಳಿಸಿವೆ.
ಲಾಕ್‌ಡೌನ್ ಸಡಿಲಿಕೆ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ
undefined
ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಕೊರೋನಾ ವೈರಸ್‌ನಿಂದ ಅತಿ ಹೆಚ್ಚಿನ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದವರ ಪೈಕಿ ಶೇ.78ರಷ್ಟುಮಂದಿ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿರುವವರಾಗಿದ್ದಾರೆ. ಶೇ. 51.2ರಷ್ಟುಜನ 60 ವರ್ಷ ಮೇಲ್ಪಟ್ಟವರು, ಶೇ.42ರಷ್ಟು ಜನರು 60ರಿಂದ 75 ವರ್ಷದ ಒಳಗಿನವರು ಹಾಗೂ ಶೇ.9.2ರಷ್ಟು ಜನ 75 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ ವಯಸ್ಸಾದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮದುವೆ ದಿನ ಸಂಜೆಯೇ ಮದುಮಗನಿಗೆ ಕ್ವಾರೆಂಟೈನ್: ಫಸ್ಟ್‌ನೈಟ್ ಕ್ಯಾನ್ಸಲ್..!
ಇದೇ ವೇಳೆ ಅಮೆರಿಕದ ಜರ್ನಲ್‌ವೊಂದರಲ್ಲಿ ಪ್ರಕಟವಾಸ ಸಮೀಕ್ಷೆಯೊಂದರ ಪ್ರಕಾರ, ಕೊರೋನಾ ವೈರಸ್‌ಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಶೇ.60ರಷ್ಟು ರೋಗಿಗಳು ಪುರುಷರಾಗಿದ್ದಾರೆ. ಅಲ್ಲದೇ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಶೇ.65ರಷ್ಟುಮಂದಿ ಪುರುಷರೇ ಆಗಿದ್ದಾರೆ.