ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20,000 ಗಡಿಗೆ!

Published : Apr 22, 2020, 09:49 AM ISTUpdated : Apr 22, 2020, 09:50 AM IST
ದೇಶದಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ 20,000 ಗಡಿಗೆ!

ಸಾರಾಂಶ

ಸೋಂಕಿತರ ಸಂಖ್ಯೆ 20000 ಗಡಿಗೆ| ನಿನ್ನೆ ಒಂದೇ ದಿನ 1545 ಹೊಸ ಕೇಸು, 56 ಜನರ ಸಾವು| ಮಹಾರಾಷ್ಟ್ರದಲ್ಲಿ 5000 ಸೋಂಕಿತರು, 250 ಜನ ಮರಣ

ನವದೆಹಲಿ(ಏ.22): ದೇಶದಲ್ಲಿ ಕೊರೋನಾ ಸೋಂಕಿತರ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರುಗತ್ತಿಯಲ್ಲೇ ಸಾಗಿದ್ದು, ಮಂಗಳವಾರ ಮತ್ತೆ 1545 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 19867ಕ್ಕೆ ತಲುಪಿದೆ. ಜೊತೆಗೆ ಮಂಗಳವಾರ ಮತ್ತೆ ದೇಶಾದ್ಯಂತ 56 ಜನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 646ಕ್ಕೆ ತಲುಪಿದೆ. ಜೊತೆಗೆ ಈವರೆಗೆ ಒಟ್ಟಾರೆ 3801 ಜನ ವ್ಯಾಧಿಯಿಂದ ಗುಣಮುಖರಾಗಿದ್ದಾರೆ.

ಏಷ್ಯಾದ ಅನೇಕ ದೇಶಗಳಲ್ಲಿ ತಬ್ಲೀಘಿಗಳಿಂದ ಕೊರೋನಾ

ದೇಶದಲ್ಲೇ ಅತಿ ಹೆಚ್ಚು ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಆ ಬೆಳವಣಿಗೆ ಮುಂದುವರೆದಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ ಹೊಸದಾಗಿ 552 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 5218ಕ್ಕೆ ತಲುಪಿದೆ. ರಾಜ್ಯದಲ್ಲಿ ಒಟ್ಟು 251 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಮುಂಬೈ ಒಂದರಲ್ಲೇ 3445 ಕೇಸು ದಾಖಲಾಗಿದ್ದು, 150 ಜನ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್‌ನಲ್ಲಿ 239 ಹೊಸ ಕೇಸು ದೃಢಪಟ್ಟಿದೆ.

ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್

ಈ ನಡುವೆ ದೇಶದಲ್ಲಿ ಈವರೆಗೆ 4.49 ಲಕ್ಷ ಜನರ ಮಾದರಿ ಪರೀಕ್ಷಿಸಲಾಗಿದೆ. ಕರ್ನಾಟಕದ ಕೊಡಗು ಸೇರಿದಂತೆ ದೇಶದ 4 ರಾಜ್ಯಗಳಲ್ಲಿ ಕಳೆದ 28 ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ. 23 ರಾಜ್ಯಗಳ 61 ಜಿಲ್ಲೆಗಳಲ್ಲಿ 14 ದಿನಗಳಲ್ಲ ಹೊಸ ಕೇಸು ದಾಖಲಾಗಿಲ್ಲ. ಸೋಮವಾರ ಒಂದೇ ದಿನ 705 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೆ ಸೋಂಕಿತರ ಪೈಕಿ ಶೇ.17.48ರಷ್ಟುಜನ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನೇಪಾಳ ಜೆನ್‌-ಝೀ ದಂಗೆ: ₹8.5 ಸಾವಿರ ಕೋಟಿ ನಷ್ಟ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು