ವಲಸಿಗರ ತವರಲ್ಲಿ ಸೋಂಕು ಸ್ಫೋಟ| ಒಡಿಶಾ, ಅಸ್ಸಾಂ, ಬಿಹಾರದಲ್ಲಿ ದಿನೇ ದಿನೇ ಹೊಸ ಕೇಸು ಹೆಚ್ಚಳ| ಲಾಕ್ಡೌನ್ ತೆರವಿನ ಬಳಿಕ ಆಗಮಿತರಿಂದಲೇ ಹೆಚ್ಚು ಪ್ರಕರಣ
ಅಸ್ಸಾಂ(ಮೇ..27): ನವದೆಹಲಿ: ಲಾಕ್ಡೌನ್ ಸಡಿಲಿಕೆ ತೆರವು ಬಳಿಕ, ವಲಸಿಗ ಕಾರ್ಮಿಕರ ತವರು ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಬಹುದೆಂಬ ಭೀತಿ ನಿಜವಾಗಿದೆ. ಲಾಕ್ಡೌನ್ ಸಡಿಲಿಕೆ ಯಾವ್ಯಾವ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ತೆರಳಿದ್ದಾರೋ ಅಲ್ಲೆಲ್ಲಾ ದಿನೇ ದಿನೇ ಹೊಸ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರಾಜ್ಯ ಸರ್ಕಾರಗಳು ಚಿಂತೆಗೀಡಾಗುವಂತೆ ಮಾಡಿದೆ.
ಅದರಲ್ಲೂ ಹೆಚ್ಚಿನ ವಲಸಿಗರು ತವರಿಗೆ ಆಗಮಿಸಿರುವ ಬಿಹಾರ, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರಪ್ರದೇಶದಲ್ಲಿ, ಕಳೆದ 15 ದಿನಗಳಲ್ಲಿ ಹೊಸ ಸೋಂಕಿನ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿದೆ. ಇದು ಲಾಕ್‌ಡೌನ್ ತೆರವಾದ ಅವಧಿ ಎಂಬುದು ಗಮನಾರ್ಹ.
undefined
23,236 ಉತ್ತರ ಭಾರತ ಕಾರ್ಮಿಕರು ಮರಳಿ ಊರಿಗೆ
ಲಾಕ್‌ಡೌನ್ ತೆರವು ಬಳಿಕ ದೇಶದ ವಿವಿಧ ರಾಜ್ಯಗಳಿಗೆ ಸುಮಾರು 75 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಕೈಗೊಂಡಿದ್ದಾರೆ. ಈ ಪೈಕಿ ಅಂದಾಜು 45 ಲಕ್ಷ ಜನ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳಲ್ಲೇ ಸಂಚರಿಸಿದ್ದಾರೆ. ಉಳಿದಂತೆ ಸ್ವಂತ ವಾಹನಗಳಲ್ಲಿ, ಸರಕು ವಾಹನಗಳಲ್ಲಿ, ನಡೆದೇ ಹೋದವರ ಪ್ರಮಾಣ ಇನ್ನಷ್ಟುಲಕ್ಷದಲ್ಲಿದೆ. ಹೀಗೆ ಹೋದವರಲ್ಲಿ ಇದೀಗ ಭಾರೀ ಪ್ರಮಾಣದಲ್ಲಿ ಸೋಂಕು ಕಂಡುಬರುತ್ತಿರುವುದು ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ಹೊಸ ಸಮಸ್ಯೆಯಾಗಿ ಕಾಡಿದೆ.
ರಾಜ್ಯ ತವರಿಗೆ ಬಂದವರು
ಬಿಹಾರ- 15.84 ಲಕ್ಷ
ಉತ್ತರ ಪ್ರದೇಶ- 24 ಲಕ್ಷ
ಜಾರ್ಖಂಡ್- 4.5 ಲಕ್ಷ
ಪಶ್ಚಿಮ ಬಂಗಾಳ- 3 ಲಕ್ಷ
ಒಡಿಶಾ- 4ಲಕ್ಷ