Assembly Election 2022: ರ‍್ಯಾಲಿ, ಪಾದಯಾತ್ರೆ ರದ್ದು, ವಿರೋಧಪಕ್ಷಗಳ ಗುದ್ದು!

Suvarna News   | Asianet News
Published : Jan 08, 2022, 06:19 PM ISTUpdated : Jan 08, 2022, 06:48 PM IST
Assembly Election 2022: ರ‍್ಯಾಲಿ, ಪಾದಯಾತ್ರೆ ರದ್ದು, ವಿರೋಧಪಕ್ಷಗಳ ಗುದ್ದು!

ಸಾರಾಂಶ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ  ರ‍್ಯಾಲಿ, ಪಾದಯಾತ್ರೆ, ರೋಡ್ ಶೋಗಳು ಬ್ಯಾನ್ ವಿರೋಧ ಪಕ್ಷಗಳಿಂದ ಆಕ್ಷೇಪ

ನವದೆಹಲಿ (ಜ. 8): ಕೋವಿಡ್ ಮೂರನೇ ಅಲೆಯ ಆತಂಕದ ನಡುವೆ ದೇಶದ ಮಹತ್ವದ ಪಂಚರಾಜ್ಯದ ಚುನಾವಣೆಗೆ(Five States Elections ) ಭಾರತ ಸಿದ್ಧವಾಗಿದೆ. ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಶನಿವಾರ ಉತ್ತರ ಪ್ರದೇಶ (Uttar Pradesh), ಮಣಿಪುರ (Manipur), ಪಂಜಾಬ್ (Punjab), ಗೋವಾ (Goa) ಹಾಗೂ ಉತ್ತರಾಖಂಡ (Uttarakhand) ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ (Election Commission), ಕೋವಿಡ್-19 ಕಾರಣದಿಂದಾಗಿ ಸಮಾವೇಶಗಳು, ಪಾದಯಾತ್ರೆ ಹಾಗೂ ರೋಡ್ ಶೋಗಳನ್ನು ರದ್ದು ಮಾಡಿದ್ದಾಗಿ ತಿಳಿಸಿದೆ. ಆದರೆ, ಕೇಂದ್ರ ಚುನಾವಣಾ ಆಯೋಗದ ನಿರ್ಧಾರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಚ್ಚುತ್ತಿರುವ ಕೋವಿಡ್-19 (COVID-19) ಪ್ರಕರಣಗಳ ಮಧ್ಯೆ, ಚುನಾವಣಾ ಆಯೋಗ ಜನವರಿ 15 ರವರೆಗೆ ಭೌತಿಕ ರ‍್ಯಾಲಿಗಳನ್ನು ಸ್ಥಗಿತಗೊಳಿಸಿದೆ. ಆ ಬಳಿಕ ರ‍್ಯಾಲಿಗಳ ಕುರಿತಾಗಿ ಪರಿಶೀಲನೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ. ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಯಾವುದೇ ರೀತಿಯ ವಿಜಯೋತ್ಸವಗಳಿಗೆ ಅವಕಾಶ ಇರುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದು, ಬೆಳಗ್ಗ 8 ರಿಂದ ರಾತ್ರಿ 8ರವರೆಗೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದೆ. ಅದರೊಂದಿಗೆ ಮನೆ ಮನೆಗೆ ನಡೆಸುವ ಪ್ರಕಾರದಲ್ಲಿ 5ಕ್ಕಿಂತ ಹೆಚ್ಚಿನ ಜನ ಇರಕೂಡದು ಎಂದು ಎಚ್ಚರಿಸಿದೆ.

"

ಚುನಾವಣಾ ಆಯೋಗದ ನಿರ್ಧಾರಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, "ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ವಿವಿಧ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ರ‍್ಯಾಲಿ ನಡೆಸಿದ್ದಾರೆ. ಕಳೆದೊಂದು ತಿಂಗಳಿನಿಂದ ಚುನಾವಣೆಯ ಕಣದಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು 10 ರಿಂದ 15 ಸಾರಿ ಭೇಟಿ ಮಾಡಿದ್ದಾರೆ. ಆಡಳಿತ ಪಕ್ಷಕ್ಕೆ ಇದರಿಂದ ಯಾವುದೇ ಸಮಸ್ಯೆ ಆಗೋದಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಪಕ್ಷಗಳಿಗೆ ಮಾತ್ರವೇ ಇದರಿಂದ ಸಮಸ್ಯೆ ಆಗುತ್ತದೆ. ಆಡಳಿತ ಪಕ್ಷವು ಆರಾಮವಾಗಿ ಎಲ್ಲಾ ಸವಲತ್ತುಗಳನ್ನು ಪಡೆಯುತ್ತದೆ' ಎಂದು ಟೀಕೆ ಮಾಡಿದ್ದಾರೆ.


ಮಾರ್ಚ್ 10 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. "ಉತ್ತರ ಪ್ರದೇಶದ ಜನರು ಬಿಜೆಪಿ ಸರ್ಕಾರಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ದಿನಾಂಕಗಳು ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ. ಸಮಾಜವಾದಿ ಪಕ್ಷವು ನಿಯಮಗಳನ್ನು ಅನುಸರಿಸುತ್ತದೆ, ಆದರೆ ಆಡಳಿತ ಪಕ್ಷವು ಈ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂಬುದನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳಬೇಕು" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣೆ ದಿನಾಂಖ ಘೋಷಣೆಯ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

Assembly Election 2022: ಫೆ. 10 ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆ, ರ‍್ಯಾಲಿ, ಪಾದಯಾತ್ರೆ, ರೋಡ್‌ಶೋ ಎಲ್ಲವೂ ಬಂದ್!
ಉತ್ತರಾಖಂಡದ ಚುನಾವಣಾ ದಿನಾಂಕ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಯಾವಾಗಲೂ ನೀತಿ ಸಂಹಿತೆ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಹೇಳಿದ್ದಾರೆ. "ಪಂಜಾಬ್‌ನ ಜನರು ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಬದ್ಧವಾಗಿರುವ ಬಲಿಷ್ಠ, ಸ್ಥಿರ ಮತ್ತು ಅಭಿವೃದ್ಧಿ-ಆಧಾರಿತ ಎಸ್ಎಡಿ-ಬಿಎಸ್ ಪಿ  ಸರ್ಕಾರಕ್ಕಾಗಿ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಈಗಿನ ಆಡಳಿತಗಾರರು ಆಡಳಿತವನ್ನು ಸರ್ಕಸ್ ಗೆ ಇಳಿಸುವ ಮೂಲಕ ತಮಾಷೆ ಮಾಡಿದ್ದಾರೆ. ಈಗ ಅವೆಲ್ಲವೂ ಕೆಲ ದಿನಗಳಲ್ಲಿ ಮುಗಿಯಲಿದೆ ಎನ್ನುವ ನೆಮ್ಮದಿಯ ನಿಟ್ಟುಸಿರನ್ನು ಅವರು ಬಿಡಲಿದ್ದಾರೆ' ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌