UP Politics: ಅಖಿಲೇಶ್ ಕೊರೋನಾ ವರದಿ ನೆಗೆಟಿವ್, ಕರೆ ಮಾಡಿ ಆರೋಗ್ಯ ವಿಚಾರಿಸಿದ ಯೋಗಿ!

By Suvarna NewsFirst Published Dec 22, 2021, 11:36 PM IST
Highlights

* ಉತ್ತರ ಪ್ರದೇಶ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ

* ಚುನಾವಣೆ ಟೆನ್ಶನ್ ಮಧ್ಯೆ ಅಖಿಲೇಶ್‌ಗೆ ಹೊಸ ತಲೆನೋವು

* ಹೆಂಡತಿ, ಮಗಳಿಗೆ ಕೊರೋನಾ., ಮಾಜಿ ಸಿಎಂಗೆ ಕರೆ ಮಾಡಿದ ಹಾಲಿ ಸಿಎಂ

ಲಕ್ನೋ(ಡಿ.22): ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಕೊರೊನಾ ವೈರಸ್ ವರದಿ ನೆಗೆಟಿವ್ ಬಂದಿದೆ. ಇಂದು, ಅವರ ಪತ್ನಿ ಡಿಂಪಲ್ ಮತ್ತು ಮಗಳು ಸೋಂಕಿಗೆ ಒಳಗಾದ ನಂತರ ಅವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಇಂದು ಟ್ವೀಟ್ ಮಾಡುವ ಮೂಲಕ ಡಿಂಪಲ್ ಯಾದವ್ ಅವರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದರು. ಹೀಗಿದ್ದರೂ ತಾನು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಡಿಂಪಲ್ ಹೇಳಿದ್ದಾರೆ.

ಇತ್ತ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಮತ್ತು ಅವರ ಮಗಳ ವರದಿ ಕೊರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಅವರಿಗೆ ಕರೆ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸಿದರು. ಇದೇ ವೆಳೆ ಅವರು  ಮಾಜಿ ಸಿಎಂ ಮುಖ್ಯಮಂತ್ರಿಗಳು ಅಖಿಲೇಶ್ ಯಾದವ್ ಅವರ ಆರೋಗ್ಯವನ್ನೂ ವಿಚಾರಿಸಿದರು.

Latest Videos

ಈ ಸಂಬಂಧ ಟ್ವೀಟ್ ಮಾಡಿರುವ ಡಿಂಪಲ್ ಯಾದವ್ 'ನಾನು ಕೋವಿಡ್ ಪರೀಕ್ಷೆಯನ್ನು ಮಾಡಿದ್ದೇನೆ, ಅವರ ವರದಿಯು ಪಾಸಿಟಿವ್ ಎಂದು ಬಂದಿದೆ. ನಾನು ಸಂಪೂರ್ಣವಾಗಿ ಲಸಿಕೆ ಹಾಕಿದ್ದೇನೆ ಮತ್ತು ಇನ್ನೂ ಯಾವುದೇ ರೋಗಲಕ್ಷಣಗಳನ್ನು ತೋರಿಸುತ್ತಿಲ್ಲ. ನನ್ನ ಮತ್ತು ಇತರರ ಸುರಕ್ಷತೆಗಾಗಿ, ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ಇತ್ತೀಚೆಗೆ ನನ್ನನ್ನು ಭೇಟಿಯಾಗಿರುವ ಎಲ್ಲಾ ಜನರು ತಮ್ಮ ಪರೀಕ್ಷೆಯನ್ನು ಶೀಘ್ರವಾಗಿ ಮಾಡುವಂತೆ ವಿನಂತಿಸುತ್ತೇನೆ ಎಂದಿದ್ದಾರೆ.

ಭಾರತದಲ್ಲಿ, ಕೊರೋನಾ ವೈರಸ್ ಮತ್ತೊಮ್ಮೆ ಆತಂಕ ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6,317 ಪ್ರಕರಣಗಳು ವರದಿಯಾಗಿವೆ. ಈ ವೇಳೆ 318 ಮಂದಿ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಈ ಅವಧಿಯಲ್ಲಿ 6,906 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ 78,190 ಸಕ್ರಿಯ ಪ್ರಕರಣಗಳಿವೆ. ಇದು ಕಳೆದ 575 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ.

ಮತ್ತೊಂದೆಡೆ, ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ ಕೂಡ ಆತಂಕ ಹೆಚ್ಚಿಸಿದೆ. ಅದರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದುವರೆಗೆ 15 ರಾಜ್ಯಗಳಲ್ಲಿ 229 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ 65 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ಅದೇ ಸಮಯದಲ್ಲಿ ದೆಹಲಿಯಲ್ಲಿ 57, ತೆಲಂಗಾಣದಲ್ಲಿ 24, ಕರ್ನಾಟಕದಲ್ಲಿ 19, ರಾಜಸ್ಥಾನದಲ್ಲಿ 22, ಕೇರಳದಲ್ಲಿ 15, ಗುಜರಾತ್‌ನಲ್ಲಿ 14, ಜಮ್ಮು ಮತ್ತು ಕಾಶ್ಮೀರದಲ್ಲಿ 3, ಒಡಿಶಾದಲ್ಲಿ 2, ಉತ್ತರ ಪ್ರದೇಶದಲ್ಲಿ 2, ಆಂಧ್ರಪ್ರದೇಶದಲ್ಲಿ 2, 1 ಚಂಡೀಗಢದಲ್ಲಿ 1, ತಮಿಳುನಾಡಿನ ಲಡಾಖ್‌ನಲ್ಲಿ 1, ಪಶ್ಚಿಮ ಬಂಗಾಳದಲ್ಲಿ 1 ಪ್ರಕರಣ ವರದಿಯಾಗಿದೆ.

click me!