ಬೆಂಗಳೂರಿನ ಕೂ ಈಗ ಪೂರ್ಣ ದೇಶಿ!

By Suvarna NewsFirst Published Mar 18, 2021, 12:00 PM IST
Highlights

ಬೆಂಗಳೂರಿನ ಕೂ ಈಗ ಪೂರ್ಣ ದೇಶಿ| ಚೀನಾ ಹೂಡಿಕೆದಾರರ ಷೇರು ಪಾಲು ಭಾರತೀಯರಿಂದಲೇ ಖರೀದಿ| ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಸೇರಿ ಹಲವರಿಂದ ಷೇರು ಖರೀದಿ

ಬೆಂಗಳೂರು(ಮಾ.18): ವಿದೇಶಿ ಮೂಲದ ಚುಟುಕು ಜಾಲತಾಣ ಟ್ವೀಟರ್‌ಗೆ ಸಡ್ಡುಹೊಡೆಯುತ್ತಿರುವ ಬೆಂಗಳೂರು ಮೂಲದ ‘ಕೂ’ ಇದೀಗ ಸಂಪೂರ್ಣ ಸ್ವದೇಶಿಯಾಗಿ ಹೊರಹೊಮ್ಮಿದೆ. ಸಂಸ್ಥೆಯಲ್ಲಿ ಚೀನಾ ಮೂಲದ ಹೂಡಿಕೆದಾರರು ಹೊಂದಿದ್ದ ಪೂರ್ಣ ಪ್ರಮಾಣದ ಷೇರಿನ ಪಾಲನ್ನು ಭಾರತೀಯ ಮೂಲದ ಉದ್ಯಮಿಗಳು ಮತ್ತು ಹೂಡಿಕೆದಾರರು ಖರೀದಿಸಿದ್ದಾರೆ.

ಮೂಲಗಳ ಪ್ರಕಾರ ಚೀನಾ ಮೂಲದ ಹೂಡಿಕೆದಾರರು ‘ಕೂ’ನಲ್ಲಿ ಶೇ.9ರಷ್ಟುಪಾಲು ಹೊಂದಿದ್ದರು. ಅದನ್ನು ಭಾರತೀಯರಾದ ಝೀರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌, ಬುಕ್‌ಮೈಶೋ ಸಂಸ್ಥಾಪಕ ಆಶಿಶ್‌ ಹೇಮ್‌ ರಜನಿ, ಫ್ಲಿಪ್‌ಕಾರ್ಟ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ, ಉಡಾನ್‌ನ ಸಹಸಂಸ್ಥಾಪಕ ಸುಜೀತ್‌ ಕುಮಾರ್‌, ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಮೊದಲಾದವರು ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೂ ಅನ್ನು ಬೆಂಗಳೂರು ಮೂಲದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್‌ ಬಿಡ್‌ವಟ್ಕ ಸ್ಥಾಪಿಸಿದ್ದಾರೆ.

click me!