V Harish: ಸೋಷಿಯಲ್ ಮೀಡಿಯಾದಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ಸಾವು

Published : Oct 21, 2026, 12:00 PM IST
V Harish

ಸಾರಾಂಶ

13 ಲಕ್ಷ ಫಾಲೋವರ್ಸ್ ಹೊಂದಿದ್ದ 27 ವರ್ಷದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿ. ಹರೀಶ್ ಸೈಬರ್ ಬೆದರಿಕೆ ಮತ್ತು ಖಾತೆಗಳ ನಿರ್ಬಂಧದಿಂದ ಮನನೊಂದು ಆ*ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಮತ್ತೊಬ್ಬ ಇನ್ಫ್ಲುಯೆನ್ಸರ್ ಜೇಸನ್ ಸ್ಯಾಮ್ಯುಯೆಲ್ ವಿರುದ್ಧ ಆರೋಪ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚೆನ್ನೈ; ಸೈಬರ್ ಬೆದರಿಕೆ, ಸಾಮಾಜಿಕ ಮಾಧ್ಯಮದಲ್ಲಿ ನಿಂದನಾತ್ಮಕ ಪೋಸ್ಟ್‌ಗಳು ಹಾಗೂ ತಮ್ಮ ಆನ್‌ಲೈನ್ ಚಾನೆಲ್‌ಗಳನ್ನು ಪದೇ ಪದೇ ಬ್ಲಾಕ್ (ನಿರ್ಬಂಧ) ಮಾಡಿಸಿದ್ದರಿಂದ ತೀವ್ರ ಮನನೊಂದು 27 ವರ್ಷದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿ. ಹರೀಶ್ ಆ*ಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 1.3 ಮಿಲಿಯನ್ (13 ಲಕ್ಷ) ಅನುಯಾಯಿಗಳನ್ನು ಹೊಂದಿದ್ದ ಹರೀಶ್, ಚೆನ್ನೈನ ಮಟ್ಟುಕಾಡು ಪ್ರದೇಶದಲ್ಲಿರುವ ತಮ್ಮ ಬಾಡಿಗೆ ವಿಲ್ಲಾದಲ್ಲಿ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಳೆದ ಐದು ವರ್ಷಗಳಿಂದ ಹಣಕಾಸು ಮತ್ತು ಹೂಡಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು.

ಪ್ರಕರಣದ ಪ್ರಮುಖ ಮಾಹಿತಿ!

ಸಾಕಷ್ಟು ವರದಿಗಳ (ರಿಪೋರ್ಟ್) ನಂತರ, ಕಳೆದ ಸೆಪ್ಟೆಂಬರ್‌ನಲ್ಲಿ ಹರೀಶ್ ಅವರ ಮುಖ್ಯ ಆನ್‌ಲೈನ್ ಚಾನೆಲ್ ಮತ್ತು ಮತ್ತೊಂದು ಖಾತೆಯನ್ನು ನಿರ್ಬಂಧಿಸಲಾಗಿತ್ತು. ತರುವಾಯ ಅವರು ಹೊಸ ಚಾನೆಲ್ ಪ್ರಾರಂಭಿಸಿದರೂ, ಅದನ್ನು ಸಹ ವರದಿ ಮಾಡಿ ಬ್ಲಾಕ್ ಮಾಡಿಸಲಾಗಿತ್ತು. ಇದರಿಂದ ಬಹಳ ಮನ ನೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ತಂದೆಯಿಂದ ದೂರು ಹಾಗೂ ಆರೋಪ!

ಹರೀಶ್ ಅವರ ತಂದೆ ಜೆ. ವಿನಯಾಗಂ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಬ್ಬ ಇನ್ಫ್ಲುಯೆನ್ಸರ್ ಜೇಸನ್ ಸ್ಯಾಮ್ಯುಯೆಲ್ ಎಂಬುವವರು ತಮ್ಮ ಮಗನ ವಿರುದ್ಧ ಪದೇ ಪದೇ ಸೈಬರ್ ನಿಂದನೆ, ಮಾನಹಾನಿಕರ ಪೋಸ್ಟ್‌ಗಳು ಹಾಗೂ ಬೆದರಿಕೆಗಳನ್ನು ಹಾಕುತ್ತಿದ್ದರೆಂದು ಅವರು ಆರೋಪಿಸಿದ್ದಾರೆ. ಅಕ್ಟೋಬರ್ 18 ರಂದು ಸ್ಯಾಮ್ಯುಯೆಲ್, ಹರೀಶ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಹಾಗೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋಗಳನ್ನು ಪ್ರಕಟಿಸಿದ್ದರು.

ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ ವಿಡಿಯೋ!

ಸಾವು ಅಪ್ಪಿಕೊಳ್ಳುವ ಮೊದಲು ಹರೀಶ್ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಈ ನಿರ್ಧಾರಕ್ಕೆ ಜೇಸನ್ ಸ್ಯಾಮ್ಯುಯೆಲ್ ಕಾರಣ ಎಂದು ಹೇಳಿದ್ದಾರೆ. ಸ್ಯಾಮ್ಯುಯೆಲ್ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿಸುವುದಾಗಿ ಮತ್ತು ಹೊಸ ಖಾತೆಗಳನ್ನು ತೆರೆಯದಂತೆ ತಡೆಯುವುದಾಗಿ ಬೆದರಿಕೆ ಹಾಕಿದ್ದ ಎಂದು ಹರೀಶ್ ಆರೋಪಿಸಿದ್ದಾರೆ.

ಜೇಸನ್ ಸ್ಯಾಮ್ಯುಯೆಲ್ ನೀಡಿದ ಸ್ಪಷ್ಟನೆ!

ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ಆರೋಪ ನಿರಾಕರಿಸಿರುವ ಜೇಸನ್ ಸ್ಯಾಮ್ಯುಯೆಲ್, ತಾವು ಕೇವಲ ಹರೀಶ್ ಅವರ ಅರ್ಹತೆ ಮತ್ತು ಸಲಹೆ ನೀಡುವ ಅಧಿಕಾರವನ್ನು ಪ್ರಶ್ನಿಸಿದ್ದಾಗಿ ಹೇಳಿದ್ದಾರೆ. ಹರೀಶ್ ಬಳಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯ (SEBI) ನೋಂದಾಯಿತ ಹೂಡಿಕೆ ಸಲಹೆಗಾರ (RIA) ಪರವಾನಗಿ ಇರಲಿಲ್ಲ. ಅಲ್ಲದೇ ಭಾರತದ ಮ್ಯೂಚುವಲ್ ಫಂಡ್‌ಗಳ ಸಂಘದ (AMFI) ನೋಂದಣಿಯನ್ನೂ ಅವರು ತಪ್ಪಾಗಿ ಪ್ರತಿನಿಧಿಸಿದ್ದರು ಎಂದು ಸ್ಯಾಮ್ಯುಯೆಲ್ ಆರೋಪಿಸಿದ್ದಾರೆ. ಅಲ್ಲದೆ, ಹರೀಶ್ ಇಂತಹ ಕಠಿಣ ಹೆಜ್ಜೆ ಇಡುತ್ತಾರೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಪೊಲೀಸ್ ತನಿಖೆ!

ಕಾನತ್ತೂರು ಪೊಲೀಸರು ಈ ಕುರಿತು ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹರೀಶ್ ಅವರ ತಂದೆ, ಮಗ ಸಾವಿಗೂ ಮುನ್ನ ರೆಕಾರ್ಡ್ ಮಾಡಿದ ವಿಡಿಯೋವನ್ನು ಪರಿಶೀಲಿಸಬೇಕು, ಸಂಬಂಧಿತ ಡಿಜಿಟಲ್ ಪುರಾವೆಗಳನ್ನು ಸಂರಕ್ಷಿಸಬೇಕು ಹಾಗೂ ಖಾತೆಗಳನ್ನು ಬ್ಲಾಕ್ ಮಾಡಿದ ಹಿನ್ನೆಲೆಯನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಸದ್ಯ ಎರಡೂ ಕಡೆಯವರ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಾನು ಅಡುಗೆಯನ್ನೇ ಮಾಡುವುದಿಲ್ಲ!' ಆದರೂ ಮಡಚುವ ಚಮಚದ ಐಡಿಯಾದಿಂದ ₹2.9 ಕೋಟಿ ಡೀಲ್ ಗೆದ್ದ ಭಾರತೀಯ ಡಿಸೈನರ್!
ಸೌರವ್ ದಾಸ್ ರಂಕಾ ಬಂಧನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಜೆಪಿ, ಇಂದು ರಾತ್ರಿಯೇ ತುರ್ತು ವಿಚಾರಣೆ?