
ಲಖನೌ (ನ.27 ) ಮದುವೆ ಮಂಟಪದ ಊಟದ ಹಾಲ್‌ನಲ್ಲಿ ಹಲವು ರೀತಿ ಜಗಳ ವರದಿಯಾಗಿದೆ. ಮಟನ್ ಸಿಗಲಿಲ್ಲ, ಪಾಯಸ ಸಿಗಲಿಲ್ಲ, ಕುಳಿತೊಳ್ಳಲು ಸೀಟು ಸಿಗಲಿಲ್ಲ, ಊಟ ಚೆನ್ನಾಗಿಲ್ಲ ಸೇರಿದಂತೆ ಹಲವು. ಆದರೆ ಮದುವೆ ಮನೆಯಲ್ಲಿ ಚಿಪ್ಸ್ ಪ್ಯಾಕೆಟ್‌ಗಾಗಿ ರಂಪಾಟ ನಡೆದಿರುವುದು ಇದೇ ಮೊದಲು. ಇಲ್ಲಿ ಚಿಪ್ಸ್ ಕೊಟ್ಟಿಲ್ಲ, ಸಿಕ್ಕಿಲ್ಲ ಎಂದಲ್ಲ, ತಂದಿಟ್ಟ ಲೇಯ್ಸ್ ಪ್ಯಾಕೆಟ್‌ಗೆ ಏಕಾಏಕಿ ಅತಿಥಿಗಳು, ಕುಟುಂಬಸ್ಥರು ಮುಗಿ ಬಿದ್ದಿದ್ದಾರೆ. ಚಿಪ್ಸ್ ಬಾಕ್ಸ್ ಹರಿದು ಚಿಪ್ಸ್ ಪ್ಯಾಕೆಟ್ ಮಾಲೆಗಳನ್ನು ಅತಿಥಿಗಳು, ಕುಟುಂಬಸ್ಥರು ಹೊತ್ತೊಯ್ದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
ರಾಟ್ ಪಟ್ಟಣದ ಬ್ರಹ್ಮಾನಂದ ಮಹಾವಿದ್ಯಾಲಯದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಸಾಮೂಹಿಕ ಮದುವೆ ಯೋಜನೆಯಡಿ ನಡೆದ ಮದುವೆ ಕಾರ್ಯಕ್ರಮ. ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಸಿಎಂ ಯೋಜನೆಯಡಿ ಸಾಮೂಹಿಕ ವಿವಾಹ ಮಾಡಿಸಲಾಗುತ್ತದೆ. ಜೋಡಿಗಳು ತಾಳಿ ಸೇರಿದಂತೆ ಕೆಲ ಮೂಲಭೂತ ವಸ್ತುಗಳು, ಜೋಡಿಗೆ ನಗದು ಹಣ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಹೀಗೆ ರಾಟ್ ಪಟ್ಟಣದಲ್ಲಿ ನಡೆದೆ ಈ ಸಾಮೂಹಿಕ ವಿವಾಹದಲ್ಲಿ 383 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗಳು ತಾಳಿ ಕಟ್ಟುತ್ತಿದ್ದಂತೆ ಇತ್ತ ಚಿಪ್ಸ್ ರಂಪಾಟ ನಡೆದಿದೆ.
ಸರಳ ಸಾಮೂಹಿಕ ವಿವಾಹದಲ್ಲಿ ಜೋಡಿಗಳು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ದಂಪತಿಗಳು ತಾಳಿ ಕಟ್ಟಿ ಶಾಸ್ತ್ರಗಳು ಮುಗಿಯುತ್ತಿದ್ದಂತೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಚಿಪ್ಸ್ ಇಡಲಾಗಿತ್ತು. ಸಿಬ್ಬಂದಿಗಳು ತಾಳಿ ಶಾಸ್ತ್ರ ಮುಗಿಯುತ್ತಿದ್ದಂತೆ ಚಿಪ್ಸ್ ಪ್ಯಾಕೆಟ್ ಬಾಕ್ಸ್ ಮೇಲಿಟ್ಟಿದ್ದಾರೆ. ಉಪಹಾರಕ್ಕೆ ವ್ಯವಸ್ಥೆ ಮಾಡಲು ಸಜ್ಜಾಗಿದ್ದಾರೆ. ಆದರೆ ಚಿಪ್ಸ್ ಇಟ್ಟಿದ್ದಾರೆ ಎಂದು ತಿಳಿದ ತಕ್ಷಣ ಜೋಡಿಗಳ ಮುಂದೆ ಮಂಟಪದಲ್ಲಿದ್ದ ಎಲ್ಲಾ ಜೋಡಿಗಳ ಆತಿಥಿಗಳು, ಸಂಬಂಧಿಕರು ಏಕಾಏಕಿ ಚಿಪ್ಸ್ ಬಾಕ್ಸ್ ಮೇಲೆ ದಾಳಿ ಮಾಡಿದ್ದಾರೆ. ಬಾಕ್ಸ್ ಹರಿದು ಲೇಯ್ಸ್ ಪ್ಯಾಕೆಟ್ ಮಾಲೆಗಳನ್ನು ಎತ್ತಿಕೊಂಡು ತೆರಳಿದ್ದಾರೆ. ಹಲವರು 5 ರಿಂದ 6 ಲೆಯ್ಸ್ ಪ್ಯಾಕೆಟ್ ಮಾಲೆಗಳನ್ನು ಎತ್ತಿ ಅತೀವ ಸಂಭ್ರಮದಿಂದ ತೆರಳಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ನೂಕು ನುಗ್ಗಲು ನಡೆದಿದೆ. ಅದೃಷ್ಠವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಇನ್ನು ಇದೇ ಚಿಪ್ಸ್‌ಗೆ ಮುಗಿಬಿದ್ದ ಜನರನ್ನು ಕೇಳಿದರೆ ರಾಜಕೀಯ ನಾಯಕರನ್ನು ನಾಚಿಸುವಂತೆ ಉತ್ತರ ನೀಡಿದ್ದಾರೆ. ಚಿಪ್ಸ್ ಬಳಿ ಯಾವುದೇ ಅಧಿಕಾರಿ ಇರಲಿಲ್ಲ, ಸರಿಯಾದ ವ್ಯವಸ್ಥೆ ಮಾಡಲಿಲ್ಲ. ಅಧಿಕಾರಿಗಳು ನಿಂತು ಚಿಪ್ಸ್ ಹಂಚಬೇಕಿತ್ತು ಎಂದಿದ್ದಾರೆ. ಈ ಮೂಲಕ ತಾವು ಚಿಪ್ಸ್‌ಗೆ ರಂಪಾಟ ಮಾಡಿದ್ದು, ಎತ್ತಿಕೊಂಡು ಓಡಿ ಹೋಗಿದ್ದು ಯಾವುದೂ ತಪ್ಪಲ್ಲ, ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡದಿರುವುದೇ ತಪ್ಪು ಎಂದಿದ್ದಾರೆ. ಹಲವರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಮದುವೆಗೆ ಬಂದ ಅತಿಥಿಗಳು, ಕುಟುಂಬಸ್ಥರು ನಾಗರೀಕರಂತೆ ವರ್ತಿಸುತ್ತಾರೆ ಎಂದು ಅಧಿಕಾರಿಗಳು ಇರಲಿಲ್ಲ. ಮುಂದಿನ ಬಾರಿ ಅಧಿಕಾರಿಗಳು ಯಾಕೆ, ಪೊಲೀಸರನ್ನೇ ಇಡ್ತಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ